ಬೆಂಗಳೂರು ನಿವಾಸಿಗಳಿಗೆ ಭರ್ಜರಿ ಗುಡ್‌ನ್ಯೂಸ್, ಉಚಿತ ಆಶಾಕಿರಣ ಯೋಜನೆ!
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಆರಂಭಗೊಂಡಿರುವ ‘ಆಶಾಕಿರಣ ದೃಷ್ಟಿ ಕೇಂದ್ರ’ಗಳು ಉಚಿತ ಕಣ್ಣಿನ ಪರೀಕ್ಷೆ, ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣೆಯ ಮೂಲಕ ಜನಸಾಮಾನ್ಯರಿಗೆ ಆಶೆಯ ಕಿರಣ ನೀಡುತ್ತಿದೆ.

- ಬೆಂಗಳೂರಿನಲ್ಲಿ 11 ಆಶಾಕಿರಣ ದೃಷ್ಟಿ ಕೇಂದ್ರಗಳು ಕಾರ್ಯನಿರ್ವಹಣೆ
- ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆಯ ಸೌಲಭ್ಯ
- ಸರ್ಕಾರ ಹಾಗೂ ಸಿ.ಎಸ್.ಆರ್ ಪಾಲುದಾರರ ಸಂಯುಕ್ತ ಯೋಜನೆ
ಬೆಂಗಳೂರು (Bengaluru): ಕರ್ನಾಟಕ ರಾಜ್ಯ ಸರ್ಕಾರದ ಆಶಾಕಿರಣ (Asha Kiran) ಯೋಜನೆಯು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.
ದೃಷ್ಟಿ ಸಮಸ್ಯೆಗಳನ್ನು ಎದುರಿಸುತ್ತಿರುವ ನಾಡಿನ ಜನತೆಗೆ ಉಚಿತ ಸೇವೆಗಳನ್ನು ನೀಡುವ ಈ ಯೋಜನೆಯಡಿಯಲ್ಲಿ ಹಲವಾರು ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ದೃಷ್ಟಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಇತ್ತೀಚೆಗೆ ಬೆಂಗಳೂರಿನ ಗೋವಿಂದರಾಜನಗರದ ಎಂ.ಸಿ ಲೇಔಟ್‌ನ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ “ಆಶಾಕಿರಣ ದೃಷ್ಟಿ ಕೇಂದ್ರ”ವನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಿದರು.
ಇದನ್ನೂ ಓದಿ: ಸಿನಿಮಾ ನಟರೇ ಇರುವ ಬೆಂಗಳೂರು ಸದಾಶಿವನಗರದಲ್ಲಿ ಭೂಮಿ ಬೆಲೆ ಎಷ್ಟಿದೆ ಗೊತ್ತಾ?
ಈ ಕಾರ್ಯಕ್ರಮವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ರಾಷ್ಟ್ರೀಯ ಆರೋಗ್ಯ ಅಭಿಯಾನ, ಸೈಟ್ ಸೇವರ್ (Sightsavers) ಹಾಗೂ ಸಿ.ಎಸ್.ಆರ್ (CSR) ಪಾಲುದಾರ ಸಂಸ್ಥೆಗಳ ಸಹಯೋಗದಲ್ಲಿ ನಡೆಯಿತು.
ಬೆಂಗಳೂರಿನಲ್ಲಿ 11 ದೃಷ್ಟಿ ಕೇಂದ್ರಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಕನ್ನಡಕ ವಿತರಣೆಯಿಂದ ಹಿಡಿದು ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ (eye surgery)ವರೆಗೆ ಸಾಕಷ್ಟು ಆರೋಗ್ಯ ಸೇವೆಗಳು ಲಭ್ಯವಿವೆ.
ಈ ಸೇವೆಗಳ ಜೊತೆಗೆ ಮಾನವ ಸಂಪತ್ತಿನ ವ್ಯವಸ್ಥೆ, ತಂತ್ರಜ್ಞಾನ ಉಪಕರಣಗಳು (equipment), ಹಾಗೂ ಮೂಲಸೌಕರ್ಯಗಳನ್ನು ಹೆಚ್ಚಿಸುವ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ: ಹಿರಿಯ ನಾಗರಿಕರ ಕಾರ್ಡ್ ಇದ್ರೆ ಏನೆಲ್ಲಾ ಬೆನಿಫಿಟ್ ಇದೆ ಗೊತ್ತಾ? ಇಲ್ಲಿದೆ ಮಾಹಿತಿ
ಸಿ.ಎಸ್.ಆರ್ ಸಂಸ್ಥೆಗಳ ಸಹಭಾಗಿತ್ವದಿಂದ 5 ಕೇಂದ್ರಗಳು ಶಕ್ತಿಶಾಲಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳು ಕೇವಲ ಹಣ ಸಹಾಯ ನೀಡುವುದಿಲ್ಲ, trained manpower, advanced optical devices, ಮತ್ತು logisticsನಂಥ ಮೂಲಭೂತ ಸೇವೆಗಳನ್ನು ಕೂಡ ಒದಗಿಸುತ್ತಿವೆ. ಇದು ಸಾರ್ವಜನಿಕರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸೋದರಲ್ಲಿ ಮುಖ್ಯ ಪಾತ್ರವಹಿಸುತ್ತಿದೆ.
ಈ ಯೋಜನೆಯ ಉದ್ದೇಶವೇ ನಾಗರಿಕರಿಗೆ ಕಣ್ಣುಗಳ ಬೆಳಕು ಮರಳಿ ತರುವುದು. ಆಶಾಕಿರಣ ಯೋಜನೆಯಡಿಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ (cataract surgery), ದೃಷ್ಟಿ ತಪಾಸಣೆ, ಉಚಿತ ಕನ್ನಡಕ ವಿತರಣೆ ಮೊದಲಾದ ಸೌಲಭ್ಯಗಳು ಲಭ್ಯವಿವೆ. ಇದು ಸರ್ಕಾರದ ‘everyone’s right to sight’ ಧೋರಣೆಗೆ ತಕ್ಕಂತೆ ಅತ್ಯಂತ ಉಪಯುಕ್ತ ಯೋಜನೆ ಎನಿಸಿದೆ.
ಇದನ್ನೂ ಓದಿ: ಕರ್ನಾಟಕ ರೈತ ಸುರಕ್ಷಾ ಯೋಜನೆಯಡಿ ಮುಂಗಾರು ಬೆಳೆ ವಿಮೆಗೆ ಅರ್ಜಿ ಆಹ್ವಾನ
ಬಿಬಿಎಂಪಿ ವ್ಯಾಪ್ತಿಯ 11 ಆಸ್ಪತ್ರೆಗಳಲ್ಲಿ ಈ ಕೇಂದ್ರಗಳು ಪ್ರಾರಂಭವಾಗಿದ್ದು, ಸಾರ್ವಜನಿಕರಿಗೆ ನಿರಂತರ ಸೇವೆ ನೀಡಲಾಗುತ್ತಿದೆ. ಈ ಆಸ್ಪತ್ರೆಗಳ ಪಟ್ಟಿ ಈ ಕೆಳಗಿನಂತಿದೆ:
- ಜೆ.ಜೆ.ಆರ್ ನಗರ ಸಾರ್ವಜನಿಕ ಆಸ್ಪತ್ರೆ
- ಹಲಸೂರು ಹೆರಿಗೆ ಆಸ್ಪತ್ರೆ
- ಹೆಚ್. ಸಿದ್ದಯ್ಯ ರಸ್ತೆ ಹೆರಿಗೆ ಆಸ್ಪತ್ರೆ
- ಹೊಸಹಳ್ಳಿ ಹೆರಿಗೆ ಆಸ್ಪತ್ರೆ
- ಆರ್.ಸಿ ಪುರ ಹೆರಿಗೆ ಆಸ್ಪತ್ರೆ
- ಬನಶಂಕರಿ ಹೆರಿಗೆ ಆಸ್ಪತ್ರೆ
- ಗೌರಿ ಪಾಳ್ಯ ಹೆರಿಗೆ ಆಸ್ಪತ್ರೆ
- ರಾಂಪುರ ಆಸ್ಪತ್ರೆ
- ಇಂದಿರಾನಗರ ಸಾರ್ವಜನಿಕ ಆಸ್ಪತ್ರೆ
- ಜಯನಗರ ಸಾರ್ವಜನಿಕ ಆಸ್ಪತ್ರೆ
- ಕೆಸಿ ಜನರಲ್ ಆಸ್ಪತ್ರೆ, ಮಲ್ಲೇಶ್ವರಂ
Free Vision Centers Open Across Bengaluru




