ಬೆಂಗಳೂರು ಸೇರಿ ದೇಶದ 6,117 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ: ಭದ್ರತೆಗೂ ಒತ್ತು

ದೇಶದಾದ್ಯಂತ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಆರಂಭಿಸಿರುವ ರೈಲ್ವೆ ಇಲಾಖೆ, ಒಟಿಪಿ ಮೂಲಕ ಮಾತ್ರ ಪ್ರವೇಶ ನೀಡಿ ಗೌಪ್ಯತೆ ಕಾಪಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಯ ಲಿಖಿತ ಉತ್ತರದಲ್ಲಿ ಭದ್ರತಾ ಕ್ರಮಗಳನ್ನೂ ವಿವರಿಸಿದ್ದಾರೆ

  • ಬೆಂಗಳೂರು ಸೇರಿ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ
  • ಒಟಿಪಿ ಆಧಾರಿತ ವೈಫೈ ವ್ಯವಸ್ಥೆ, ವೈಯಕ್ತಿಕ ಮಾಹಿತಿ ಸುರಕ್ಷಿತ
  • ನಿಲ್ದಾಣಗಳು, ಬೋಗಿಗಳಲ್ಲಿ ಸಿಸಿಟಿವಿ ಮೂಲಕ ಭದ್ರತಾ ನಿಗಾ

ಬೆಂಗಳೂರು (Bengaluru): ಬೆಂಗಳೂರು ಸೇರಿದಂತೆ ದೇಶದಾದ್ಯಂತ 6,117 ರೈಲು ನಿಲ್ದಾಣಗಳಲ್ಲಿ (Railway Station) ಉಚಿತ ವೈಫೈ ಸೇವೆ (Free Wi-Fi Service) ಒದಗಿಸಲಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ. ಪ್ರಯಾಣಿಕರ ಡಿಜಿಟಲ್ ಅನುಭವ ಸುಧಾರಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಗೌಪತ್ಯೆಗೆ ಆದ್ಯತೆ

ವೈಫೈ ಬಳಕೆಗೆ ಪ್ರಯಾಣಿಕರ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ಮಾತ್ರ ಪರಿಶೀಲಿಸಲಾಗುತ್ತದೆ. ಇದಲ್ಲದೆ ಯಾವುದೇ ವೈಯಕ್ತಿಕ ಮಾಹಿತಿ ಸಂಗ್ರಹಿಸುವುದಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರದ ಮೂಲಕ ಈ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ: ಬೆಂಗಳೂರು ಭಾಗದಲ್ಲಿ ನಿಲ್ಲದ ಚಳಿ ಅಬ್ಬರ, ನಾಳೆ ಹೇಗಿರಲಿದೆ ವಾತಾವರಣ?

ನಿಲ್ದಾಣಗಳು ಮತ್ತು ಬೋಗಿಗಳಲ್ಲಿ ಸಿಸಿಟಿವಿ

ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಈಗಾಗಲೇ 1,731 ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರವೇಶ–ನಿರ್ಗಮನ ದ್ವಾರಗಳು, ಪಾದಚಾರಿ ಸೇತುವೆಗಳು, ನಿರೀಕ್ಷಣಾ ಕೊಠಡಿಗಳು ಹಾಗೂ ಟಿಕೆಟ್ ಕೌಂಟರ್‌ಗಳ ಬಳಿ ನಿಗಾ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ.

ರೈಲು ಒಳಗೂ ಭದ್ರತಾ ನಿಗಾ

ರೈಲುಗಳಲ್ಲಿ ನಡೆಯುವ ಕಳ್ಳತನ ಹಾಗೂ ಅಸಾಮಾಜಿಕ ಚಟುವಟಿಕೆಗಳನ್ನು ತಡೆಯಲು, 11,953 ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು (CCTV Camera) ಅಳವಡಿಸಲಾಗಿದೆ. ಈ ಮೂಲಕ ಬೋಗಿಗಳೊಳಗಿನ ಚಲನವಲನವನ್ನು ನಿರಂತರವಾಗಿ ಗಮನಿಸಿ, ಪ್ರಯಾಣಿಕರ ಭದ್ರತೆಯನ್ನು ಖಚಿತಪಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

TRENDING ARTICLES1 / 5

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories