ಉಚಿತವಾಗಿ ಪಡೆಯಿರಿ ಸೋಲಾರ್ ಪಂಪ್ ಸೆಟ್! ರೈತರಿಗೆ ಬಂಪರ್ ಅವಕಾಶ; ಅರ್ಜಿ ಸಲ್ಲಿಸಿ
Solar Pump Set : ಭಾರತವು ಕೃಷಿಯನ್ನು ಅವಲಂಬಿಸಿರುವ ದೇಶವೆಂದೇ ಹೆಸರುವಾಸಿ ಆಗಿದೆ. ನಮ್ಮ ದೇಶದ ಬೆನ್ನೆಲುಬು ಸಹ ರೈತನೆ (Farmer) ಆಗಿದ್ದಾನೆ, ಆದರೆ ದೇಶಕ್ಕೆ ಅನ್ನ ನೀಡುವಂಥ ರೈತರಿಗೆ ಹೆಚ್ಚಿನ ಸಮಸ್ಯೆಗಳು ಎದುರಾಗುತ್ತದೆ.
ರೈತರ ಕೃಷಿ (Agriculture) ಕೆಲಸದಲ್ಲಿ ಮಳೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಸರಿಯಾದ ಸಮಯಕ್ಕೆ ಮಳೆ ಬಾರದೇ ಹೋದರೆ ಬರಗಾಲ ಕಾಡುತ್ತದೆ, ಇನ್ನು ಅತಿಯಾದ ಮಳೆ ಬಂದರೆ ಅನಾವೃಷ್ಟಿಯಿಂದಾಗಿ ಬೆಳೆದ ಬೆಳೆಯು ನಾಶವಾಗುತ್ತದೆ. ಇದು ರೈತರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ.

ನೀರವಾರಿ ಸಮಸ್ಯೆಗೆ ಸರ್ಕಾರದಿಂದ ಹೊಸ ಪರಿಹಾರ
ಕಳೆದ ವರ್ಷ ನಮ್ಮ ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ, ರೈತರ ಬೆಳೆ ನಾಶವಾಗಿ, ನಷ್ಟ ಅನುಭವಿಸುವ ಪರಿಸ್ಥಿತಿ ಬಂದಿತ್ತು, ಹಲವೆಡೆ ಬರಗಾಲ ಎದುರಾಗಿತ್ತು. ಹಾಗಾಗಿ ಸರ್ಕಾರವು ರೈತರಿಗೆ ಬರಗಾಲದ ಸಮಸ್ಯೆ ಆಗದೆ ಇರಲಿ ಎಂದು ರೈತರ ಒಳಿತಿಗೆ ಪರಿಹಾರ ನೀಡುವುದಕ್ಕಾಗಿ, ನೀರಾವರಿ ಸಮಸ್ಯೆಯನ್ನು ಪರಿಹರಿಸಲು ಹೊಸದೊಂದು ಮಾರ್ಗವನ್ನು ಕಂಡುಹಿಡಿದಿದೆ. ಇದರಿಂದ ಎಲ್ಲಾ ರೈತರಿಗೂ ಅನುಕೂಲ ಆಗುವುದರಲ್ಲಿ ಸಂಶಯವೇ ಇಲ್ಲ.
ಇಂತಹವರ ರೇಷನ್ ಕಾರ್ಡ್ ರದ್ದು! ರಾತ್ರೋ-ರಾತ್ರಿ ಸರ್ಕಾರ ಖಡಕ್ ನಿರ್ಧಾರ; ಇಲ್ಲಿದೆ ಮಾಹಿತಿ
ಶುರುವಾಗಲಿದೆ ಸೋಲಾರ್ ಪಂಪ್ ಯೋಜನೆ
ನೀರಾವರಿ ಸಮಸ್ಯೆಗಾಗಿ ಸರ್ಕಾರ ತಂದಿರುವ ಈ ಹೊಸ ಪರಿಹಾರದ ಹೆಸರು ಸೋಲಾರ್ ಪಂಪ್ ಯೋಜನೆ (Solar Scheme). ಶೀಘ್ರದಲ್ಲೇ ಈ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದ್ದು, ಎಲ್ಲಾ ರೈತರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ, ಸರ್ಕಾರದಿಂದ ಸಿಗುವ ಈ ಸೌಲಭ್ಯದ ಉಪಯೋಗ ಪಡೆದುಕೊಳ್ಳಬಹುದು. ಈ ಯೋಜನೆಗೆ ಕುಸುಮ್ ಯೋಜನೆ ಎಂದು ಹೆಸರನ್ನು ಇಡಲಾಗಿದ್ದು, ಈಗಾಗಲೇ ಕುಸುಮ್ ಯೋಜನೆಗೆ ಹಲವಾರು ರೈತರು ಅರ್ಜಿ ಸಲ್ಲಿಸಿದ್ದಾರೆ.
ಉಚಿತವಾಗಿ ಸೋಲಾರ್ ಪಂಪ್ ಸೆಟ್ ಪಡೆಯಿರಿ
ಕುಸುಮ್ ಯೋಜನೆಗೆ (PM KUSUM) ಅರ್ಜಿ ಸಲ್ಲಿಸುವ ರೈತರಿಗೆ ಸರ್ಕಾರದ ಕಡೆಯಿಂದ ಉಚಿತವಾಗಿ ಸೋಲಾರ್ ಪಂಪ್ ಸೆಟ್ ಸಿಗಲಿದ್ದು, ಸಾಮಾನ್ಯವಾಗಿ ಅಲ್ಲದೇ ಸೋಲಾರ್ ಶಕ್ತಿಯನ್ನು ಬಳಸಿ ಕೃಷಿ ಕೆಲಸಗಳಿಗೆ ನೀರಾವರಿ ಮಾಡಿಕೊಳ್ಳಬಹುದು.
ಇದು ರಾಜ್ಯದ ಎಲ್ಲಾ ರೈತರಿಗೆ ಅನುಕೂಲ ಅಗುವಂಥ ಯೋಜನೆ ಆಗಿದ್ದು, ಈಗಾಗಲೇ ಸುಮಾರು 18 ಲಕ್ಷ ರೈತರು ಕುಸುಮ್ ಯೋಜನೆಗೆ ಅರ್ಜಿ ಸಲ್ಲಿಸಿ, ಉಚಿತ ಸೋಲಾರ್ ಪಂಪ್ ಸೆಟ್ ಪಡೆಯಲು ಕಾಯುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮ
ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಜಾರಿಗೆ ತರಲಾಗಿರುವ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್ (ಕುಸುಮ್) ಯೋಜನೆಗೆ ಕಳೆದ ಶುಕ್ರವಾರ ಬೆಂಗಳೂರಿನ ಪ್ರಸಿದ್ಧ ಹೋಟೆಲ್ ಒಂದರಲ್ಲಿ ಚಾಲನೆ ನೀಡಲಾಗಿದೆ. ಪಿಎಂ ಕುಸುಮ್ ಯೋಜನೆಯನ್ನು ಉದ್ಘಾಟಿಸುವುದರ ಒಂದು ದಿನದ ವರ್ಕ್ ಶಾಪ್ ಮಾಡಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಹ ನೀಡಲಾಗಿದೆ.
ಇಂಧನ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ಗೌರವ ಗುಪ್ತ ಅವರು ಯೋಜನೆಯನ್ನು ಉದ್ಘಾಟಿಸಿದ್ದಾರೆ. ಇನ್ನು ನಮ್ಮ ರಾಜ್ಯದ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಪಿಎಮ್ ಕುಸುಮ್ ಯೋಜನೆಯನ್ನು ರಾಜ್ಯದಲ್ಲಿ ತಂದಿದ್ದು, ಕರ್ನಾಟಕದಲ್ಲಿ ಈ ಯೋಜನೆಗೆ ಬರಲಿರುವ ಅನುದಾನವನ್ನು 30% ಇಂದ 50% ಗೆ ಏರಿಸಲಾಗಿದೆ.
ಈಗಾಗಲೇ ಈ ಯೋಜನೆಗೆ 18 ಲಕ್ಷ ರೈತರು ರಿಜಿಸ್ಟರ್ ಮಾಡಿಸಿಕೊಂಡಿದ್ದು, ಕುಸುಮ್ ಯೋಜನೆಗೆ ಅರ್ಜಿ ಸಲ್ಲಿಸಿದರೆ ರೈತರಿಗೆ ಹೆಚ್ಚಿನ ಅನುಕೂಲ ಸಿಗುವುದರ ಜೊತೆಗೆ, ಬೆಳೆ ನಾಶ ಆಗುವುದು ಕಡಿಮೆ ಆಗುತ್ತದೆ.
Get Free Solar Pump Set, Bumper opportunity for farmers