ಬೆಂಗಳೂರು ಆನೇಕಲ್ ಬಳಿ ಸೂಟ್‌ಕೇಸ್‌ನಲ್ಲಿ ಅಪರಿಚಿತ ಬಾಲಕಿ ಶವ ಪತ್ತೆ
ಬೆಂಗಳೂರು ಹೊರವಲಯ ಆನೇಕಲ್ ಬಳಿಯ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಅಪರಿಚಿತ ಬಾಲಕಿ ಶವವು ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದ್ದು, ಸ್ಥಳದಲ್ಲಿ ಶಂಕಿತ ಪ್ರಕರಣದ ತನಿಖೆ ನಡೆಯುತ್ತಿದೆ.

- ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್‌ಕೇಸ್‌ನಲ್ಲಿ ಶವ ಪತ್ತೆ
- ಬಾಲಕಿ ಪ್ರಾಯ ಸುಮಾರು 10 ವರ್ಷ ಎಂದು ಶಂಕೆ
- ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ
ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲ್ಲೂಕಿನ ಚಂದಾಪುರ (Chandapura) ರೈಲ್ವೆ ಬ್ರಿಡ್ಜ್ ಬಳಿ ಭೀಕರ ಘಟನೆ ನಡೆದಿದೆ. ಇಲ್ಲಿಯ ರೈಲ್ವೆ ಬ್ರಿಡ್ಜ್ ಬಳಿ ಸುಮಾರು ಹತ್ತು ವರ್ಷದ ಬಾಲಕಿಯ ಶವವು ಪತ್ತೆಯಾಗಿದೆ.
ಇನ್ನೂ ಗುರುತಿಸದ ಬಾಲಕಿಯ ಮೃತದೇಹವನ್ನು ಸೂಟ್‌ಕೇಸ್ (suitcase) ಒಳಗೆ ಹಾಕಿ ಬಿಸಾಡಿರುವ ಹೃದಯವಿದ್ರಾವಕ ಪ್ರಕರಣದಿಂದ ಸ್ಥಳೀಯರು ಅಚ್ಚರಿ ಹಾಗೂ ಆತಂಕಕ್ಕೆ ಒಳಗಾಗಿದ್ದಾರೆ.
ಸೂಟ್‌ಕೇಸ್ ರೈಲ್ವೆ ಬ್ರಿಡ್ಜ್ ಪಕ್ಕದಲ್ಲಿ ಪತ್ತೆಯಾದ ಸ್ಥಳದ ದೃಶ್ಯವನ್ನು ನೋಡಿ ಪೊಲೀಸರು ಸಹ ಬೆಚ್ಚಿಬಿದ್ದಿದ್ದಾರೆ. ಶವವು ರೈಲಿನಿಂದ ಎಸೆದ ಶಂಕೆ ವ್ಯಕ್ತವಾಗಿದೆ. ಸ್ಥಳೀಯರ ದೂರಿನಂತೆ ಸೂರ್ಯನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ಪ್ರಕರಣವನ್ನು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಅಪರಿಚಿತ ಬಾಲಕಿಯು ಹತ್ತು ವರ್ಷದೊಳಗಿನವಳಾಗಿರಬಹುದೆಂದು ಶಂಕಿಸಲಾಗಿದೆ. ಶವವು, ಮುಚ್ಚಲಾಗಿದ್ದ ಬ್ಲೂ ಕಲರ್ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದ್ದು, ಕೆಲವೊಂದು ಬಟ್ಟೆಗಳಿಂದ ಮುಚ್ಚಲ್ಪಟ್ಟಿತ್ತು. ಹತ್ಯೆ ನಡೆದ ನಂತರ ಶವವನ್ನು ಈ ರೀತಿ ತಂದು ಇಲ್ಲಿ ಬಿಸಾಡಿರಬಹುದು ಎಂದು ಪೊಲೀಸರು ಶಂಕಿಸುತ್ತಿದ್ದಾರೆ.
ಈ ಪ್ರಕರಣದ ಹಿನ್ನೆಲೆ ಭಾರೀ ಸಂಚಲನ ಹುಟ್ಟಿಸಿದೆ. ಸುತ್ತಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆ ಮುಂದುವರೆದಿದೆ. ಬಾಲಕಿಯ ಗುರುತು ಪತ್ತೆ ಹಚ್ಚಲು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
Girl Body Found in Suitcase Near Anekal Bengaluru








