ವಿರಾಟ್ ಕೊಹ್ಲಿ ಕಟೌಟ್ ಮುಂದೆ ಮೇಕೆ ಬಲಿ, ಪ್ರಕರಣ ದಾಖಲು
ವಿರಾಟ್ ಕೊಹ್ಲಿ ಕಟೌಟ್ ಮುಂದೆ ಮೇಕೆ ಬಲಿ ನೀಡಿದ ಆರ್ಸಿಬಿ ಅಭಿಮಾನಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- ವಿರಾಟ್ ಕಟೌಟ್ ಮುಂದೆ ಮೇಕೆ ಬಲಿ
- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
- ಸ್ಟೇಡಿಯಂನಲ್ಲಿ ವಿಐಪಿ ಕುಟುಂಬಗಳ ನಡುವೆ ಜಗಳ
ಬೆಂಗಳೂರು (Bengaluru): ವಿರಾಟ್ ಕೊಹ್ಲಿ (Virat Kohli) ಕಟೌಟ್ ಮುಂದೆ ಮೇಕೆ ಬಲಿ ನೀಡಿದ ಆರ್ಸಿಬಿ ಅಭಿಮಾನಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಮಾರಮ್ಮನಹಳ್ಳಿಯಲ್ಲಿ ಘಟನೆ ನಡೆದಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB Bengaluru) ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು. ಇದರಿಂದ ಹರ್ಷಗೊಂಡ ಅಭಿಮಾನಿಗಳು, ಮಾರಮ್ಮನಹಳ್ಳಿಯಲ್ಲಿ ವಿರಾಟ್ ಕೊಹ್ಲಿಯ ಕಟೌಟ್ ಹಾಕಿ, ಮೇಕೆ ಬಲಿ ನೀಡಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರೊಂದಿಗೆ ಮೊಳಕಾಲ್ಮೂರು ಪೊಲೀಸರು ಪಾಲಯ್ಯ, ಜಯಣ್ಣ ಮತ್ತು ತಿಪ್ಪೇಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮೊಳಕಾಲ್ಮೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಕೃತ್ಯ ನಡೆಸಿದ ಕಾರಣದಿಂದ, ಇವರು ಕಾನೂನು ಉಲ್ಲಂಘನೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಕಡೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Bengaluru Chinnaswamy Stadium) ನಡೆದ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯದಲ್ಲಿ ಮತ್ತೊಂದು ವಿವಾದ ನಡೆದಿದೆ. ಎರಡು ವಿಐಪಿ ಕುಟುಂಬಗಳು ಸೀಟ್ ವಿಚಾರದಲ್ಲಿ ಜಗಳಕ್ಕೆ ಇಳಿದಿದ್ದು, ಬಡಿದಾಡಿದ ಘಟನೆ ಬೆಳಕಿಗೆ ಬಂದಿದೆ.
ಒಂದು ಕಡೆ ಐಪಿಎಸ್ ಅಧಿಕಾರಿ ಕುಟುಂಬ, ಇನ್ನೊಂದು ಕಡೆ ಐಟಿ ಇಲಾಖೆಯ ಹಿರಿಯ ಅಧಿಕಾರಿ ಕುಟುಂಬವೆಂದರೆ, ಜಗಳದ ಗಂಭೀರತೆಯನ್ನೂ ಊಹಿಸಬಹುದು.
ಸೀಟಿಂಗ್ ವಿಚಾರದಲ್ಲಿ ಅವರ ಮಕ್ಕಳು ಮೊದಲಿಗೆ ಮಾತಿನ ಚಕಮಕಿ ನಡೆಸಿದರೆ, ನಂತರ ಅವರ ಪೋಷಕರು, ಸಹೋದರಿಗಳು ಬಡಿದಾಡಿದ ಹಿನ್ನಲೆಯಲ್ಲಿ, ಕೊನೆಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಇಬ್ಬರೂ ಕುಟುಂಬಗಳು ದೂರು ಸಲ್ಲಿಸಿವೆ. ಈ ಘಟನೆ ಕ್ರಿಕೆಟ್ ಪಂದ್ಯಕ್ಕಿಂತಲೂ ಹೆಚ್ಚು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ (Bengaluru Cricket Stadium Incident)
Goat Sacrifice Before Kohli Cutout Sparks Police Case







