ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಮಹಿಳೆಯ 2 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

Story Highlights

ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆಯಲ್ಲಿ ನಡೆದಿದೆ

ಬೆಂಗಳೂರು (Bengaluru): ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ (Bengaluru North) ಹೆಸರಘಟ್ಟ ರಸ್ತೆಯಲ್ಲಿ ನಡೆದಿದೆ.

ಕೆಎ 57 ಎಫ್ 4760 ಬಿಎನ್‌ಟಿಸಿ ಬಸ್‌ನಲ್ಲಿ (BMTC Bus) ಪ್ರಯಾಣಿಸುತ್ತಿದ್ದ ಪ್ರೇಮಾ ಎಂಬ ಪ್ರಯಾಣಿಕರ 2 ಲಕ್ಷ ಮೌಲ್ಯದ 25 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೆರಡು ದಿನ ಮಳೆಯಾಗಲಿದೆ: ಹವಾಮಾನ ಇಲಾಖೆ

ಸಂತ್ರಸ್ತೆ ಬಸ್‌ನಿಂದ ಇಳಿದು ನೋಡಿದಾಗ ಚಿನ್ನಾಭರಣ ಕಳುವಾಗಿರುವುದು ಗೊತ್ತಾಗಿದೆ. ಗಾಬರಿಗೊಂಡ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ಶುರು ಮಾಡಿದ್ದಾರೆ.

ಬಸ್ ನಲ್ಲೆ ವಿಚಾರ ಗೊತ್ತಾಗಿದ್ದರೆ ಕಳ್ಳ ಸಿಗುವ ಅವಕಾಶವಿತ್ತು, ಹಾಗೂ ಪ್ರಯಾಣದ ಸಮಯದಲ್ಲಿ ಅಷ್ಟೊಂದು ಬೆಲೆ ಬಾಳುವ ಚಿನ್ನಾಭರಣ (Gold Jewellery) ಧರಿಸುವುದು ತಪ್ಪು, ಅಲ್ಲದೆ ಮೈಮೇಲಿನ ಚಿನ್ನಾಭರಣ ಕಳುವಾಗುವಷ್ಟು ಮೈಮರೆವುದು ಕೂಡ ತಪ್ಪು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

gold jewelry theft of a woman who was traveling in a BMTC bus in Bengaluru North

Related Stories