ಗೃಹಲಕ್ಷ್ಮಿ ಮಹಿಳೆಯರಿಗೆ 50,000 ದಿಂದ 3 ಲಕ್ಷ ಸಾಲ ಸೌಲಭ್ಯ! ಕಡಿಮೆ ಬಡ್ಡಿ, ಶೂರಿಟಿ ಕೂಡ ಬೇಡ
ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಮಹಿಳೆಯರಿಗೆ 50,000 ರಿಂದ 3 ಲಕ್ಷ ರುಪಾಯಿ ಸಾಲ ನೀಡಲು Gruhalakshmi Multipurpose Cooperative Society ಉದ್ಘಾಟಿಸಿದೆ. ಕಡಿಮೆ ಬಡ್ಡಿ, ಶೂರಿಟಿ ರಹಿತ ಯೋಜನೆ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಿಸುತ್ತದೆ.
Loan Scheme: ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘದ (Gruha lakshmi Multipurpose Cooperative Society) ಮೂಲಕ ಮಹಿಳೆಯರು ಶೂರಿಟಿ ಇಲ್ಲದೆ, ಕಡಿಮೆ ಬಡ್ಡಿ ದರದಲ್ಲಿ ₹50,000 ರಿಂದ ₹3 ಲಕ್ಷದವರೆಗೆ ಸಾಲ ಪಡೆಯಬಹುದು. ಬ್ಯಾಂಕ್ಗಳು 4–7% ಬಡ್ಡಿ ದರದಲ್ಲಿ ಈ ಸಾಲವನ್ನು ನೀಡಲಿದ್ದು, ಸಾಮಾನ್ಯ ವಾಣಿಜ್ಯ ಬ್ಯಾಂಕ್ಗಳ 12–18% ಬಡ್ಡಿಗೆ ಹೋಲಿಸಿದರೆ ಇದು ಬಹಳ ಕಡಿಮೆ.
ಸಣ್ಣ ಸಂಘ ರಚಿಸುವ ವ್ಯವಸ್ಥೆ ಇದ್ದು, ಗ್ರಾಮ ಅಥವಾ ವಾರ್ಡ್ ಮಟ್ಟದಲ್ಲಿ 4–10 ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರು ಸೇರಿ ಸ್ವಯಂ ಸಹಾಯ ಗುಂಪು ರೂಪಿಸಬಹುದು. ಪ್ರತಿ ತಿಂಗಳು ₹2,000 ಉಳಿತಾಯದಲ್ಲಿ ₹500–₹1,000 ಭಾಗವನ್ನು ಸಂಘದ ಖಾತೆಗೆ ಜಮಾ ಮಾಡುವ ಮೂಲಕ ಸಂಘದ ಒಟ್ಟು ಉಳಿತಾಯದ 4–5 ಪಟ್ಟು ಮೊತ್ತವನ್ನು ಸಾಲವಾಗಿ ಪಡೆಯಲು ಸಾಧ್ಯ.
ಈ ಸಾಲವು ಸ್ವ-ಉದ್ಯೋಗ, ವ್ಯಾಪಾರ, ಮಕ್ಕಳ ಶಿಕ್ಷಣ, ವೈದ್ಯಕೀಯ ಖರ್ಚು, ಕೃಷಿ ಯಂತ್ರ ಖರೀದಿ ಮುಂತಾದ ಉದ್ದೇಶಗಳಿಗೆ ಬಳಸಬಹುದು. ಕಿರಾಣಿ ಅಂಗಡಿ, ತರಕಾರಿ–ಹಣ್ಣು ಗಾಡಿ, ಟೀ-ಹೋಟೆಲ್, ಸಣ್ಣ ಟ್ರಾಕ್ಟರ್ ಅಥವಾ ನಾಟಿ ಯಂತ್ರ ಖರೀದಿ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಸಾಲ ಪಡೆಯಬಹುದು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಸೆಪ್ಟೆಂಬರ್–ಅಕ್ಟೋಬರ್ ತಿಂಗಳ ಹಣ ₹4,000 ಒಟ್ಟಿಗೆ ಬಿಡುಗಡೆ
ಗೃಹಲಕ್ಷ್ಮಿ ಯೋಜನೆ ಆರಂಭದಿಂದ 1.24 ಕೋಟಿ ಮಹಿಳೆಯರ ಖಾತೆಗೆ ₹52,000 ಕೋಟಿ ಹಣ ಜಮಾ ಮಾಡಲಾಗಿದೆ. ಮಹಿಳೆಯರೇ ಮಾಲೀಕರಾಗಿರುವ ಸಹಕಾರ ಸಂಘದ ಮೂಲಕ ಸಾಲ ನೀಡುವ ವ್ಯವಸ್ಥೆ ಈ ಯೋಜನೆಯ ಮುಖ್ಯ ವೈಶಿಷ್ಟ್ಯ.
ಇತರ ರಾಜ್ಯಗಳ ಮಹಿಳಾ ಸ್ವ-ಸಹಾಯ ಗುಂಪುಗಳು ಲಕ್ಷಾಂತರ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿವೆ. ಕರ್ನಾಟಕದ ಗೃಹಲಕ್ಷ್ಮಿ ಸಂಘವೂ ಇದೇ ದಾರಿಯಲ್ಲಿ ಸಾಗುತ್ತಿರುವುದು ಮಹಿಳಾ ಸಬಲೀಕರಣದಲ್ಲಿ ಪ್ರಮುಖ ಹೆಜ್ಜೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗ ಮಹಿಳೆಯರು ತಮ್ಮ ಗ್ರಾಮ/ವಾರ್ಡ್ನಲ್ಲಿ 4–10 ಸದಸ್ಯರ ಸಂಘವನ್ನು ರಚಿಸಿ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಅಥವಾ ಸ್ತ್ರೀ ಶಕ್ತಿ ಗುಂಪಿನ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ತಿಂಗಳಿಗೆ ಕನಿಷ್ಠ ₹500–₹1,000 ಉಳಿತಾಯ ಆರಂಭಿಸುವ ಮೂಲಕ ಅವರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಈ ಯೋಜನೆ ಸಹಾಯ ಮಾಡಲಿದೆ.
₹3 ಲಕ್ಷದವರೆಗೆ ಶೂರಿಟಿ ಇಲ್ಲದೆ, ಕಡಿಮೆ ಬಡ್ಡಿ ಸಾಲ, ಕರ್ನಾಟಕದ ಮಹಿಳೆಯರ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದೆ.
Gruha lakshmi Loan, Low-Interest Loan for Women
ಗೃಹಲಕ್ಷ್ಮಿ ಯೋಜನೆಯ ಹೊಸ ಲಿಸ್ಟ್ ಸಿದ್ದ; ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸಿಗುತ್ತೆ ಹಣ!
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
10 ಲಕ್ಷ ಮಂದಿ ರೈತರಿಗೆ ಪಿಎಂ ಕಿಸಾನ್ ಯೋಜನೆ ಹಣ ಸ್ಥಗಿತ! ಕೇಂದ್ರದ ಶಾಕಿಂಗ್ ನಿರ್ಧಾರ
Read the story
ಕರ್ನಾಟಕ SSLC ವಿದ್ಯಾರ್ಥಿಗಳು ಹಾಗೂ ಶಾಲೆಗಳಿಗೆ KSEAB ಮಹತ್ವದ ಸೂಚನೆ! ತಪ್ಪದೇ ಗಮನಿಸಿ
Read the story
ಕರ್ನಾಟಕ ರಾಜ್ಯದಲ್ಲಿ ಅಕ್ಕಿ ಬೆಲೆ ಗಗನಕ್ಕೆ; ಕೆಜಿಗೆ ₹20 ರೂಪಾಯಿ ಏರಿಕೆ! 4 ತಿಂಗಳಲ್ಲಿ ಶೇ 30ರಷ್ಟು ಹೆಚ್ಚಳ
Read the story



