ಕೊನೆಗೂ ಗೃಹಲಕ್ಷ್ಮಿ ಪೆಂಡಿಂಗ್ ಹಣ ಬಿಡುಗಡೆ! ಈ ಜಿಲ್ಲೆಗಳಿಗೆ ಎರಡು ತಿಂಗಳ ₹4,000 ಒಟ್ಟಿಗೆ ವರ್ಗಾವಣೆ
ರಾಜ್ಯ ಸರ್ಕಾರವು ಮಹಿಳೆಯರಿಗೆ ಸಹಾಯ ಮಾಡುವುದಕ್ಕಾಗಿ ಜಾರಿಗೆ ತಂದ ಯೋಜನೆ ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana) ಆಗಿದೆ. ಈ ಒಂದು ಯೋಜನೆಯ ಮೂಲಕ ಮನೆಯನ್ನು ನಡೆಸಿಕೊಂಡು ಹೋಗುತ್ತಿರುವ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ (Bank Account) ಪ್ರತಿ ತಿಂಗಳು ಕೂಡ ₹2000 ರೂಪಾಯಿಗಳನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು.
ಅದೇ ರೀತಿ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯಲ್ಲಿ ಸುಮಾರು 1.18 ಕೋಟಿ ಮಹಿಳೆಯರು ರಿಜಿಸ್ಟರ್ ಮಾಡಿಕೊಂಡಿದ್ದಾರೆ.
ಕಳೆದ 10 ತಿಂಗಳುಗಳಿಂದ ಯೋಜನೆಯ ಹಣ ಕೂಡ ಬಹುತೇಕ ಮಹಿಳೆಯರನ್ನು ತಲುಪಿದೆ. ಆದರೆ ಜೂನ್ ತಿಂಗಳಿನಲ್ಲಿ 11ನೇ ಕಂತಿನ ಹಣ ಹಾಗೂ ಜುಲೈ ತಿಂಗಳ 12ನೇ ಕಂತಿನ ಹಣ ಇನ್ನು ಕೂಡ ಮಹಿಳೆಯರ ಖಾತೆಗೆ ಜಮೆ ಆಗಿಲ್ಲ.
ಈ ರೀತಿ ಆಗುವುದಕ್ಕೆ ಪ್ರಮುಖ ಕಾರಣ ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜರಿಯಲ್ಲಿ ಇದ್ದದ್ದು. ಹೌದು, ಏಪ್ರಿಲ್ ತಿಂಗಳಿನಲ್ಲಿ ಲೋಕಸಭಾ ಎಲೆಕ್ಷನ್ ನಡೆಯಿತು.
ಬಳಿಕ ಮೇ ತಿಂಗಳಿನಲ್ಲಿ ಎಲೆಕ್ಷನ್ ಫಲಿತಾಂಶ ಕೂಡ ಹೊರಬಂದಿತು. ಈ ಕಾರಣಕ್ಕೆ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ, 11 ಮತ್ತು 12ನೇ ಕಂತಿನ ಹಣ ಬಿಡುಗಡೆ ಆಗುವುದರಲ್ಲಿ ತಡವಾಗಿದೆ.
ಬಿಪಿಎಲ್ ಕಾರ್ಡ್ ಇರೋ ಕುಟುಂಬಗಳಿಗೆ ಕೇಂದ್ರದಿಂದ ಮಹತ್ವದ ಯೋಜನೆ! ಇನ್ನೊಂದು ಉಚಿತ ಸೇವೆ
ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಬಗ್ಗೆ ಮಾತನಾಡಿ, ಮೊದಲ ಹಂತದಲ್ಲಿ 11 ಮತ್ತು 12ನೇ ಕಂತಿನ ಹಣ ನಾಳೆಯೇ ಕೆಲವು ಜಿಲ್ಲೆಯ ಮಹಿಳೆಯರಿಗೆ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.
ಜುಲೈ ತಿಂಗಳು ಮುಗಿಯುವುದರ ಒಳಗೆ ರಾಜ್ಯದ ಎಲ್ಲಾ ಮಹಿಳೆಯರಿಗು ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಒಟ್ಟಾಗಿ ₹4000 ರೂಪಾಯಿ ಡಿಬಿಟಿ ಮೂಲಕ ವರ್ಗಾವಣೆ ಆಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದಲೇ ಇಷ್ಟರ ಮಟ್ಟಿಗೆ ಭರವಸೆಯ ಮಾತುಗಳು ಕೇಳಿಬಂದಿರುವ ಕಾರಣ, ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಹಾಗಿದ್ದಲ್ಲಿ ನಾಳೆ ಯಾವೆಲ್ಲಾ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತದೆ ಎಂದು ತಿಳಿಯೋಣ..
ಈ ಜಿಲ್ಲೆಯ ಮಹಿಳೆಯರಿಗೆ ನಾಳೆಯೇ ಬಿಡುಗಡೆ ಆಗಲಿದೆ ₹4000!
ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ಧಾರವಾಡ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ. ಇದಿಷ್ಟು ಜಿಲ್ಲೆಗಳಲ್ಲಿ ನಾಳೆಯೇ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ ಆಗಲಿದೆ. ಎಲ್ಲಾ ಮಹಿಳೆಯರು ಕೂಡ ನಾಳೆ ನಿಮ್ಮ ಅಕೌಂಟ್ ನ (Bank Account) ಡಿಬಿಟಿ ಸ್ಟೇಟಸ್ ಚೆಕ್ ಮಾಡಬಹುದು.
Gruha Lakshmi pending Money released for two months to these districts
Our Whatsapp Channel is Live Now 👇