ಸಿಎಂ ವಿರುದ್ಧ ಅನುಚಿತ ಕಾಮೆಂಟ್: ಹೋಂ ಗಾರ್ಡ್ ಬಂಧನ

ಸಿದ್ದರಾಮಯ್ಯನನ್ನು ಹತ್ಯೆ ಮಾಡಿದರೆ ಮಾತ್ರ ಹಿಂದೂಗಳಿಗೆ ಶಾಂತಿ ಸಿಗುತ್ತದೆ ಎಂಬ ಸಾಮಾಜಿಕ ಜಾಲತಾಣ ಕಾಮೆಂಟ್ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರ ತಂಡ ಬೆಂಗಳೂರಿನ ಹೋಂಗಾರ್ಡನನ್ನು ಬಂಧಿಸಿದೆ.

  • ಫೇಸ್‌ಬುಕ್‌ನಲ್ಲಿ ಸಿಎಂ ವಿರುದ್ಧ ಕಿಡಿಕಾರಿದ ಪೋಸ್ಟ್
  • ಮಂಗಳೂರಿನ ಘಟನೆ ಹಿನ್ನೆಲೆದಲ್ಲಿ ಹಾಕಿದ ಕಾಮೆಂಟ್
  • ಪೊಲೀಸ್ ಇಲಾಖೆಯ ಹೋಂ ಗಾರ್ಡ್ ಬಂಧನ

ಬೆಂಗಳೂರು (Bengaluru): ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಕೊಂದರೆ ಮಾತ್ರ ಹಿಂದೂಗಳಿಗೆ ಶಾಂತಿ ಸಿಗುತ್ತದೆ ಎಂದು ಹೇಳಿಕೆ ನೀಡಿದ್ದ ಸಂಪತ್ ಎಂಬ ವ್ಯಕ್ತಿಯನ್ನು ಉಡುಪಿ ಜಿಲ್ಲೆ ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಗೃಹರಕ್ಷಕ ದಳದವನಾಗಿ ಕೆಲಸ ಮಾಡುತ್ತಿದ್ದಾನೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಹತ್ಯೆಯ ಬಗ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಅನುಚಿತ ಕಾಮೆಂಟ್ ಮಾಡಿದ್ದ

ಸಿದ್ದರಾಮಯ್ಯನನ್ನು ಹತ್ಯೆ ಮಾಡಿದರೆ ಮಾತ್ರ ಹಿಂದುಗಳಿಗೆ ಶಾಂತಿ ಸಿಗುತ್ತದೆ” ಎಂಬ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಸಾಂಪ್ರದಾಯಿಕ ರೀತಿ ಪ್ರಚೋದನೆ ಉಂಟುಮಾಡುವ ಪೋಸ್ಟ್‌ ಒಂದು ಹರಿದಾಡಿದ್ದು, ಇದರ ಕುರಿತು ಗಮನ ಹರಿಸಿದ್ದ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ.

ಆತನನ್ನು ಅರೆಸ್ಟ್ ಮಾಡಿದ್ದು, ಬಂಧಿತನ ಹೆಸರು ಸಂಪತ್ ಎನ್ನಲಾಗಿದೆ. ಈತ ಬೆಂಗಳೂರು ನಗರದಲ್ಲಿರುವ ಪೊಲೀಸ್ ಇಲಾಖೆಯಲ್ಲಿ ಹೋಂಗಾರ್ಡಾಗಿ ಕೆಲಸ ಮಾಡುತ್ತಿದ್ದಾನೆ. ಈ ಹಿಂದೆಯೂ ಕೆಲವೊಂದು ಪ್ರಚೋದನಕಾರಿ (hate comment) ಶೈಲಿಯ ಪೋಸ್ಟ್‌ಗಳಲ್ಲಿ ಈತನ ಹೆಸರು ಕೇಳಿಬಂದಿದೆ.

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುವಾಸ್ ಶೆಟ್ಟಿ ಹತ್ಯೆ ಪ್ರಕರಣದ ನಂತರ, ಈತ ಈ ರೀತಿಯ ಕಿಡಿಕಾರಿದ ಪೋಸ್ಟ್ ಹಾಕಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಪೊಲೀಸರಿಂದ ಈ ರೀತಿಯ ಕೆಲಸಗಳಲ್ಲಿ ತೊಡಗಿರುವವರ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯ ಹೆಚ್ಚಾಗಿದೆ.

ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ತನಿಖೆ ಮುಂದುವರಿದಿದ್ದು, ಈತನ ಫೇಸ್‌ಬುಕ್ ಖಾತೆಯ ಇತಿಹಾಸವನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (cyber investigation)

. Home Guard Arrested for Provocative Facebook Comment Against CM

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories