ರೇಷನ್ ಕಾರ್ಡ್ ಕಳೆದುಹೋದರೆ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವ ವಿಧಾನ ಇಲ್ಲಿದೆ

ಪಡಿತರ ಚೀಟಿ ಕಳೆದುಹೋದರೂ ಚಿಂತೆಯ ಅಗತ್ಯವಿಲ್ಲ. ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಕೆಲ ಸರಳ ಹಂತಗಳನ್ನು ಅನುಸರಿಸಿ ನೀವು ರೇಷನ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು, ಅದೂ ಮನೆಯಲ್ಲೇ ಸುಲಭವಾಗಿ.

ಪಡಿತರ ಚೀಟಿ (Ration Card) ಭಾರತೀಯ ಕುಟುಂಬದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇದು ಕೇವಲ ಪಡಿತರ ಪಡೆಯಲು ಮಾತ್ರವಲ್ಲದೆ, ಅನೇಕ ಸರ್ಕಾರಿ ಯೋಜನೆಗಳ ಅರ್ಜಿಗೆ ಅಗತ್ಯವಾಗುತ್ತದೆ.

ಬಿಪಿಎಲ್‌, ಎಪಿಎಲ್‌, ಅಂತ್ಯೋದಯ ಸೇರಿದಂತೆ ವಿವಿಧ ತರದ ಕಾರ್ಡ್‌ಗಳು ಪ್ರತ್ಯೇಕ ಸೌಲಭ್ಯಗಳನ್ನು ಹೊಂದಿವೆ. ಆದರೆ, ಕಳೆದುಹೋದರೆ ಮತ್ತೆ ಪಡೆಯಲು ಜನರು ಅಸಮಾಧಾನಗೊಂಡಿರುತ್ತಾರೆ.

ಆದರೆ ಚಿಂತೆಯ ಅಗತ್ಯವಿಲ್ಲ. ಈಗ ಸರ್ಕಾರ ನೀಡಿರುವ ಆನ್‌ಲೈನ್ ಸೇವೆಯಿಂದ ಕೆಲ ನಿಮಿಷಗಳಲ್ಲಿ ನಿಮ್ಮ ರೇಷನ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪಡಿತರ ಚೀಟಿ ಕಳೆದುಹೋದರೂ ಅಥವಾ ಸರಿಯಾದ ಸಮಯಕ್ಕೆ ಪಡಿತರ ಸಿಗದಿದ್ದರೂ ಈ ವಿಧಾನ ಉಪಯುಕ್ತ.

ಡೌನ್‌ಲೋಡ್ ಮಾಡುವ ವಿಧಾನ:

  • ಅಧಿಕೃತ ವೆಬ್‌ಸೈಟ್ https://ahara.karnataka.gov.in/Home/EServices ಗೆ ಭೇಟಿ ನೀಡಿ.
  • ನಿಮ್ಮ ಕಾರ್ಡ್ ನಂಬರ್ ಅಥವಾ ದಾಖಲೆ ವಿವರಗಳನ್ನು ನಮೂದಿಸಿ.
  • ನೋಂದಾಯಿತ ಮೊಬೈಲ್ ನಂಬರ್‌ಗೆ ಬರುವ OTP ಅನ್ನು ನಮೂದಿಸಿದರೆ ಕಾರ್ಡ್ ಸಿಗುತ್ತದೆ.

ಹೊಸ ಪಡಿತರ ಚೀಟಿ ಬೇಕಾದರೆ, ಹತ್ತಿರದ ನ್ಯಾಯಬೆಲೆ ಅಂಗಡಿ ಅಥವಾ ಗ್ರಾಮ ಒನ್ (ನಗರ ಪ್ರದೇಶದಲ್ಲಿ ಬೆಂಗಳೂರು ಒನ್) ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಬೇಕು. ಅಲ್ಲಿ ಅಗತ್ಯ ದಾಖಲೆಗಳನ್ನು ನೀಡಿ, ಆದಾಯದ ಆಧಾರದ ಮೇಲೆ ಬಿಪಿಎಲ್‌, ಎಪಿಎಲ್‌ ಅಥವಾ ಅಂತ್ಯೋದಯ ಕಾರ್ಡ್ ನೀಡಲಾಗುತ್ತದೆ.

ರಾಜ್ಯದಲ್ಲಿ ಪ್ರಸ್ತುತ ಪಡಿತರ ಚೀಟಿ ತಿದ್ದುಪಡಿ ಕಾರ್ಯವೂ ನಡೆಯುತ್ತಿದೆ. ನಿಮ್ಮ ಕಾರ್ಡ್‌ನಲ್ಲಿ ಹೆಸರು, ವಿಳಾಸ ಅಥವಾ ಇತರೆ ಮಾಹಿತಿಯಲ್ಲಿ ಬದಲಾವಣೆ ಬೇಕಾದರೆ, ಆನ್‌ಲೈನ್ ಸೇಂಟರ್ ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ತಿದ್ದುಪಡಿ ಮಾಡಿಸಬಹುದು.

ಇದೇ ವೇಳೆ ನಕಲಿ ದಾಖಲೆ ಆಧಾರದ ಮೇಲೆ ಪಡೆದಿರುವ ಬಿಪಿಎಲ್‌ ಕಾರ್ಡ್‌ಗಳನ್ನು ಸರ್ಕಾರ ರದ್ದುಪಡಿಸಿ ಎಪಿಎಲ್‌ಗೆ ವರ್ಗಾಯಿಸುತ್ತಿದೆ. ನಿಮ್ಮ ಕಾರ್ಡ್ ತಪ್ಪಾಗಿ ಬದಲಾಗಿದ್ದರೆ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಮರುಪರಿಶೀಲನೆ ಮೂಲಕ ಸರಿಪಡಿಸಿಕೊಳ್ಳಬಹುದು.

How to Download Lost Ration Card Online

TRENDING ARTICLES1 / 5

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories