ಬೆಂಗಳೂರಿನ ಬಾಗಲೂರಿನಲ್ಲಿ ಪತ್ನಿಯ ಶೀಲ ಶಂಕಿಸಿ ಪತಿಯಿಂದಲೇ ಬರ್ಬರ ಕೊಲೆ

Story Highlights

ಪತಿ ದೌರ್ಜನ್ಯ ತಡೆಯಲಾರದೆ ಹೊಸಕೋಟೆ (Bengaluru Rural, Hoskote) ತವರು ಮನೆಗೆ ಹೋಗಿದ್ದರೂ ಇಬ್ಬರು ಮಕ್ಕಳು ಆಕೆಯನ್ನು ಮನೆಗೆ ಕರೆತಂದಿದ್ದರು.

ಬೆಂಗಳೂರು (Bengaluru): ಪತ್ನಿಯ ಶೀಲ ಶಂಕಿಸಿ ಪತಿಯೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬಾಗಲೂರು (Bagalur) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯಲಹಂಕ (Yelahanka) ತಾಲೂಕಿನ ಸಿಂಗಹಳ್ಳಿ ಗ್ರಾಮದಲ್ಲಿ ಕೋಳಿ ಅಂಗಡಿ ನಡೆಸುತ್ತಿರುವ ಶ್ರೀನಿವಾಸ್ (52) ಕುಟುಂಬ ಸಮೇತ ವಾಸವಾಗಿದ್ದಾರೆ. ಪತ್ನಿ ಸುಧಾ(50) ಮೇಲೆ ಅನುಮಾನಗೊಂಡು ನಿತ್ಯ ಚಿತ್ರಹಿಂಸೆ ನೀಡುತ್ತಿದ್ದ.

ಇತ್ತೀಚೆಗಷ್ಟೇ ಸುಧಾ ತನ್ನ ಪತಿ ದೌರ್ಜನ್ಯ ತಡೆಯಲಾರದೆ ಹೊಸಕೋಟೆ (Bengaluru Rural, Hoskote) ತವರು ಮನೆಗೆ ಹೋಗಿದ್ದರೂ ಇಬ್ಬರು ಮಕ್ಕಳು ಆಕೆಯನ್ನು ಮನೆಗೆ ಕರೆತಂದಿದ್ದರು.

ಪತಿ ಮತ್ತೆ ಆಕೆಗೆ ಕಿರುಕುಳ ನೀಡುತ್ತಲೇ ಇದ್ದ ಎನ್ನಲಾಗಿದೆ. ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಗಳವಾಡಿ ಪತ್ನಿಯನ್ನು ಕೊಂದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಗ ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Husband Kills Wife arrested at ​​Bagalur Police Station limits in Bengaluru

Related Stories