ಪಡಿತರ ಚೀಟಿದಾರರಿಗೆ ಜ್ಯಾಕ್‌ಪಾಟ್ ಸುದ್ದಿ! ರೇಷನ್ ಕಾರ್ಡ್ ಕುರಿತು ದೊಡ್ಡ ಗುಡ್ ನ್ಯೂಸ್
ರಾಜ್ಯದಲ್ಲಿ ಪಡಿತರ ಚೀಟಿದಾರರಿಗೆ ಇಂದಿರಾ ಕಿಟ್ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. 2026ರೊಳಗೆ ಹೊಸ ಕಿಟ್ ವಿತರಣೆ ಆರಂಭವಾಗಲಿದ್ದು, ಸದಸ್ಯರ ಸಂಖ್ಯೆಗೆ ತಕ್ಕಂತೆ ವಸ್ತುಗಳನ್ನು ನೀಡಲಾಗುತ್ತದೆ.

Ration Card: ಕರ್ನಾಟಕ ರಾಜ್ಯದಲ್ಲಿ ಪಡಿತರ ಚೀಟಿದಾರರಿಗೆ ಬಹು ನಿರೀಕ್ಷಿತವಾಗಿದ್ದ ಇಂದಿರಾ ಕಿಟ್ ಕುರಿತ ಸರ್ಕಾರದ ಅಂತಿಮ ನಿರ್ಧಾರ ಹೊರಬಿದ್ದಿದೆ. ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು 2026ರ ಪ್ರಾರಂಭದಲ್ಲೇ ಹೊಸ ಪಡಿತರ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಜನವರಿ ಅಥವಾ ಗರಿಷ್ಠ ಫೆಬ್ರವರಿ ವೇಳೆಗೆ ಕಿಟ್ ವಿತರಣೆ ಪ್ರಾರಂಭವಾಗುವಂತೆ ಟೆಂಡರ್ ಪ್ರಕ್ರಿಯೆ ಹಾಗೂ ಗುಣಮಟ್ಟ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸರ್ಕಾರ ನಕಲಿ ದಾಖಲೆಗಳ ಆಧಾರದ ಮೇಲೆ ಪಡೆದಿದ್ದ ಅನರ್ಹ ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸುವ ಕಾರ್ಯವನ್ನು ವೇಗಗೊಳಿಸಿದೆ. ಅನೇಕರು ಬಡವರ ಹಕ್ಕಿನ ಆಹಾರ ಮತ್ತು ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತಿದ್ದರೆಂಬ ಕಾರಣಕ್ಕೆ ಅವರನ್ನು ಎಪಿಎಲ್ ವರ್ಗಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ನಿಜವಾದ ನೆರವಾಗುವ ಹೊಸ ಯೋಜನೆಗಳನ್ನು ಸರ್ಕಾರ ಮುಂದಿಡುತ್ತಿದೆ.
ಮುನಿಯಪ್ಪ ಅವರು ಮಾಧ್ಯಮದ ಜೊತೆ ಮಾತನಾಡುವ ವೇಳೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (PMGKY) ಅಡಿಯಲ್ಲಿ ಇಂದಿರಾ ಗಾಂಧಿ ಹೆಸರಿನ ಹೊಸ ರೇಷನ್ ಕಿಟ್‌ನ್ನು ಜಾರಿಗೆ ತರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಈ ಕಿಟ್‌ನಲ್ಲಿ ಬೇಳೆ, ಎಣ್ಣೆ, ಉಪ್ಪು ಮತ್ತು ಸಕ್ಕರೆ ಸೇರಿದಂತೆ ದಿನನಿತ್ಯದ ಮೂಲಭೂತ ಆಹಾರ ಪದಾರ್ಥಗಳು ಲಭ್ಯವಿರಲಿವೆ ಎಂದು ಹೇಳಿದರು.
ಜೋಳದ ಖರೀದಿ ಬೆಲೆಯ ವಿಷಯದಲ್ಲೂ ಸಚಿವರು ಕಳವಳ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಕಿಗಿಂತ ಜೋಳದ ಬಳಕೆ ಹೆಚ್ಚಿರುವುದರಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಬೇಕಾದಷ್ಟು ಜೋಳ ಲಭ್ಯವಾಗದಿರುವುದು ಸಮಸ್ಯೆಯಾಗಿದೆ. ಇದೇ ಕಾರಣಕ್ಕೆ ಸರ್ಕಾರ ಜೋಳ ಉತ್ಪಾದನೆ ಮತ್ತು ಶೇಖರಣೆಗೆ ಹೊಸ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಇಂದಿರಾ ಕಿಟ್ ವಿತರಣೆ ಪಡಿತರ ಚೀಟಿದಾರರ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಮೂರು ವಿಭಾಗಗಳಲ್ಲಿ ಬಿಡುಗಡೆಯಾಗಲಿದೆ.
- ಒಂದು ಅಥವಾ ಇಬ್ಬರು ಸದಸ್ಯರಿದ್ದರೆ: 750 ಗ್ರಾಂ ತೊಗರಿ ಬೇಳೆ, ½ ಲೀಟರ್ ಎಣ್ಣೆ, ½ ಕೆಜಿ ಸಕ್ಕರೆ, ½ ಕೆಜಿ ಉಪ್ಪು
- ಮೂರು ಅಥವಾ ನಾಲ್ವರು ಸದಸ್ಯರಿದ್ದರೆ: 1.5 ಕೆಜಿ ತೊಗರಿ ಬೇಳೆ, 1 ಲೀಟರ್ ಎಣ್ಣೆ, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು
- ಐವರು ಅಥವಾ ಹೆಚ್ಚು ಸದಸ್ಯರಿದ್ದರೆ: 2,250 ಗ್ರಾಂ ತೊಗರಿ ಬೇಳೆ, 1.5 ಲೀಟರ್ ಎಣ್ಣೆ, 1.5 ಕೆಜಿ ಸಕ್ಕರೆ, 1.5 ಕೆಜಿ ಉಪ್ಪು ವಿತರಿಸಲಾಗುತ್ತದೆ.
ಸರ್ಕಾರ ಈಗಾಗಲೇ ನಕಲಿ ರೇಷನ್ ಕಾರ್ಡ್‌ಗಳನ್ನು ನಿರ್ಮೂಲ ಮಾಡುವ ಕೆಲಸದಲ್ಲಿ ತೊಡಗಿರುವುದರಿಂದ, ನಿಜವಾದ ಪ್ರಯೋಜನ ಪಡೆಯಬೇಕಾದ ಕುಟುಂಬಗಳಿಗೆ ಈ ಇಂದಿರಾ ಕಿಟ್ ಮಹತ್ವದ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Indira Kit Distribution to Begin Soon in Karnataka
ಗೃಹಲಕ್ಷ್ಮಿ ಯೋಜನೆಯ ಹೊಸ ಲಿಸ್ಟ್ ಸಿದ್ದ; ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸಿಗುತ್ತೆ ಹಣ!
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
10 ಲಕ್ಷ ಮಂದಿ ರೈತರಿಗೆ ಪಿಎಂ ಕಿಸಾನ್ ಯೋಜನೆ ಹಣ ಸ್ಥಗಿತ! ಕೇಂದ್ರದ ಶಾಕಿಂಗ್ ನಿರ್ಧಾರ
Read the story
ಕರ್ನಾಟಕ SSLC ವಿದ್ಯಾರ್ಥಿಗಳು ಹಾಗೂ ಶಾಲೆಗಳಿಗೆ KSEAB ಮಹತ್ವದ ಸೂಚನೆ! ತಪ್ಪದೇ ಗಮನಿಸಿ
Read the story
ಕರ್ನಾಟಕ ರಾಜ್ಯದಲ್ಲಿ ಅಕ್ಕಿ ಬೆಲೆ ಗಗನಕ್ಕೆ; ಕೆಜಿಗೆ ₹20 ರೂಪಾಯಿ ಏರಿಕೆ! 4 ತಿಂಗಳಲ್ಲಿ ಶೇ 30ರಷ್ಟು ಹೆಚ್ಚಳ
Read the story




