ಬೆಂಗಳೂರಿನಿಂದ ಮಾಗಡಿಗೆ ತೆರಳುತ್ತಿದ್ದ ಇನ್ನೋವಾ ಕಾರು ಪಲ್ಟಿ, ಇಬ್ಬರ ಸಾವು
ಇನ್ನೋವಾ ಪಲ್ಟಿಯಾಗಿ ಬೆಂಗಳೂರಿನ ಮಂಜು (31) ಮತ್ತು ಕಿರಣ್ (30) ಮೃತಪಟ್ಟಿದ್ದಾರೆ. ಬುಧವಾರ ಬೆಳಗ್ಗೆ ಬೆಂಗಳೂರಿನಿಂದ 8 ಮಂದಿ ಕಾರಿನಲ್ಲಿ ಮಾಗಡಿಗೆ ತೆರಳಿದ್ದರು.
- ಇನ್ನೋವಾ ಕಾರು ಪಲ್ಟಿಯಾಗಿ ಇಬ್ಬರು ಧಾರುಣ ಸಾವು.
- ಅಪಘಾತದಲ್ಲಿ 6 ಮಂದಿಗೆ ತೀವ್ರ ಗಾಯ, ಆಸ್ಪತ್ರೆಗೆ ದಾಖಲು.
- ಅತಿಯಾದ ವೇಗವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಬೆಂಗಳೂರು (Bengaluru): ಮಾಗಡಿ ತಾಲೂಕಿನ ತಾವರೆಕೆರೆ ರಸ್ತೆಯ ಜನತಾ ಕಾಲೋನಿಯಲ್ಲಿ ಇನ್ನೋವಾ ಕಾರು ಪಲ್ಟಿಯಾಗಿ ಬೆಂಗಳೂರಿನ ಮಂಜು (31) ಮತ್ತು ಕಿರಣ್ (30) ಮೃತಪಟ್ಟಿದ್ದಾರೆ. ಬುಧವಾರ ಬೆಳಗ್ಗೆ ಬೆಂಗಳೂರಿನಿಂದ 8 ಮಂದಿ ಕಾರಿನಲ್ಲಿ ಮಾಗಡಿಗೆ ತೆರಳಿದ್ದರು.
ವಾಪಸು ಬರುವಾಗ ಅತಿಯಾದ ವೇಗದಿಂದ ಕಾರು ಪಲ್ಟಿಯಾಗಿದೆ. ಅಪಘಾತದಲ್ಲಿ ಕಿರಣ್ ಮತ್ತು ಮಂಜು ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯರು ಮತ್ತು ಪೊಲೀಸರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ.
ಅಪಘಾತಕ್ಕೆ ಅತಿವೇಗವೇ ಕಾರಣ ಎನ್ನಲಾಗಿದೆ, ಇನ್ನು ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Innova overturns on its way from Bengaluru to Magadi, two killed