ನಾಳೆ ಕೂಡ ಬೆಂಗಳೂರು ಶಾಲೆಗಳಿಗೆ ರಜೆ ಇದಿಯಾ! ಅಧಿಕೃತ ಪ್ರಕಟಣೆಯಲ್ಲಿ ಏನಿದೆ?
ಒಂದು ವೇಳೆ ಮಳೆ ನಿಲ್ಲದಿದ್ದಲ್ಲಿ ನಾಳೆಯೂ ಬೆಂಗಳೂರಿನ ಶಾಲೆಗಳಿಗೆ ರಜೆ (Tomorrow School Holiday) ಘೋಷಿಸುವ ಸಾಧ್ಯತೆ ಇದೆ
ಬೆಂಗಳೂರು (Bengaluru): ಜಿಲ್ಲಾಧಿಕಾರಿ ಕಚೇರಿ ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ ಸೋಮವಾರ ನಗರದ ಎಲ್ಲಾ ಶಾಲೆಗಳಿಗೆ ರಜೆ (School Holiday) ನೀಡಲಾಗಿದೆ. ನೋಟಿಸ್‌ನಲ್ಲಿ ಮಂಗಳವಾರ ಯಾವುದೇ ರಜೆಯನ್ನು ನಮೂದಿಸಿಲ್ಲ.
ನಗರದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ (Tomorrow Rain Update) ನಿರೀಕ್ಷೆಯಿದೆ. ಒಂದು ವೇಳೆ ಮಳೆ ನಿಲ್ಲದಿದ್ದಲ್ಲಿ ನಾಳೆಯೂ ಬೆಂಗಳೂರಿನ ಶಾಲೆಗಳಿಗೆ ರಜೆ (Tomorrow School Holiday) ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಸೇರಿದಂತೆ ಕರ್ನಾಟಕದ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್! ಭಾರಿ ಮಳೆ ಸೂಚನೆ
ಇನ್ನು ಶನಿವಾರ ಮತ್ತು ಭಾನುವಾರ ಭಾರೀ ಮಳೆಯ ನಂತರ, ಬೆಂಗಳೂರಿನಲ್ಲಿ ಮಂಗಳವಾರದವರೆಗೆ IMD ಹಳದಿ ಅಲರ್ಟ್ ಘೋಷಿಸಿದೆ. ರಾಜರಾಜೇಶ್ವರಿ ನಗರ, ಕೆಂಗೇರಿ, ಹೆಬ್ಬಾಳ ಜಂಕ್ಷನ್, ನಾಗವಾರ, ಹೊರಮಾವು, ಹೆಣ್ಣೂರು, ಕಸ್ತೂರಿ ನಗರ, ರಾಮಮೂರ್ತಿ ನಗರ, ವಿಂಡ್ಸರ್ ಮ್ಯಾನರ್ ಅಂಡರ್‌ಪಾಸ್-ಮೆಕ್ರಿ ಸರ್ಕಲ್ ಮತ್ತು ಹೊರ ವರ್ತುಲ ರಸ್ತೆಯಂತಹ ಪ್ರದೇಶಗಳು ತೀವ್ರ ತೊಂದರೆಗೀಡಾದವು.
ಭಾರಿ ಮಳೆ ಕಾರಣ ಬೆಂಗಳೂರು ನಗರದ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ
ಮುಂದಿನ ಎರಡು ದಿನಗಳಲ್ಲಿ ಬೆಂಗಳೂರು ನಿರಂತರ ಮಳೆಯನ್ನು ಅನುಭವಿಸಲಿದೆ. ನಗರವು ಸಾಧಾರಣ ಮಳೆ ಮತ್ತು ಸಾಂದರ್ಭಿಕ ಭಾರಿ ಗುಡುಗು ಸಹಿತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಎದುರಿಸಲಿದ್ದಾರೆ.
ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಅಕ್ಟೋಬರ್ 21 ರಂದು ನಗರದ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿಗಳಿಗೆ ಬೆಂಗಳೂರು ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.
Is tomorrow also a holiday for Bengaluru schools