ಜುಲೈ-2025 ತಿಂಗಳ ಪಿಂಚಣಿ ಹಣ ಬಿಡುಗಡೆ, ಇಲ್ಲಿದೆ ಹಳ್ಳಿವಾರು ಪಟ್ಟಿ! ಚೆಕ್ ಮಾಡಿ

ರಾಜ್ಯ-ಕೇಂದ್ರ ಸಹಯೋಗದಲ್ಲಿ ಜುಲೈ 2025 ತಿಂಗಳ ಪಿಂಚಣಿ ಹಣ ಫಲಾನುಭವಿಗಳ ಖಾತೆಗೆ ನೇರ ಜಮೆ. ಪಾವತಿ ಸ್ಥಿತಿ ಮತ್ತು ಹಳ್ಳಿವಾರು ಪಟ್ಟಿಯ ಮಾಹಿತಿ ಇಲ್ಲಿದೆ.

  • ಜುಲೈ ತಿಂಗಳ ಪಿಂಚಣಿ ಹಣ ಖಾತೆಗೆ ಜಮೆ
  • ಪಾವತಿ ಸ್ಥಿತಿ ಚೆಕ್ ಮಾಡಲು ಎರಡು ವಿಧಾನ
  • ಹಳ್ಳಿವಾರು ಫಲಾನುಭವಿಗಳ ಪಟ್ಟಿ ಮೊಬೈಲ್‌ನಲ್ಲೇ ಲಭ್ಯ

ಜುಲೈ 2025 (July 2025) ತಿಂಗಳ ಪಿಂಚಣಿ ಹಣವನ್ನು ರಾಜ್ಯದ ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ (Direct Benefit Transfer) ಮೂಲಕ ಜಮೆ ಮಾಡಲಾಗಿದೆ ಎಂದು ಪಿಂಚಣಿ ನಿರ್ದೇಶನಾಲಯ (Pension Directorate) ಘೋಷಿಸಿದೆ.

ಈ ಹಣ ರಾಜ್ಯದ ಕಂದಾಯ ಇಲಾಖೆಯಡಿ (Karnataka Revenue Department) ಕಾರ್ಯನಿರ್ವಹಿಸುತ್ತಿರುವ ವಿವಿಧ ಪಿಂಚಣಿ ಯೋಜನೆಗಳಡಿ ನೀಡಲಾಗಿದೆ.

ಪ್ರತಿ ತಿಂಗಳು ಖಾತೆಗೆ ಪಿಂಚಣಿ ಹಣ ಜಮೆಯಾಗುತ್ತದೆಯೇ ಎಂಬುದನ್ನು ಮನೆಯಲ್ಲಿಯೇ ಚೆಕ್ ಮಾಡಲು ಫಲಾನುಭವಿಗಳಿಗೆ ಎರಡು ಸುಲಭ ಮಾರ್ಗಗಳನ್ನು ಸರ್ಕಾರ ಒದಗಿಸಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ Vs ಸರ್ಕಾರ: ಹಣ ಬರುತ್ತೋ ಇಲ್ವೋ, ಇಲ್ಲಿದೆ ಬಿಗ್ ಅಪ್ಡೇಟ್

ಮೊದಲು, ಬ್ಯಾಂಕ್‌ನ ಬ್ಯಾಲೆನ್ಸ್ ಚೆಕ್ ಸಹಾಯವಾಣಿ (Bank Balance Check Helpline) ಗೆ ಮಿಸ್ ಕಾಲ್ ಮಾಡಿ ಖಾತೆಯ ಮಾಹಿತಿ ಪಡೆಯಬಹುದು. ಎರಡನೇ ವಿಧಾನವಾಗಿ, ಡಿಬಿಟಿ ಕರ್ನಾಟಕ (DBT Karnataka) ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಿ ಆಧಾರ್ ಮಾಹಿತಿ ಮತ್ತು ಒಟಿಪಿ (OTP) ಬಳಸಿಕೊಂಡು ಪಾವತಿ ಸ್ಥಿತಿ (payment status) ತ್ವರಿತವಾಗಿ ತಿಳಿದುಕೊಳ್ಳಬಹುದು.

ಈ ಬಾರಿ July Pension Amount ಅನ್ನು ಕೆಲವು ಜಿಲ್ಲೆಗಳಲ್ಲಿ 3ನೇ ತಾರೀಖಿನೊಳಗೆ ಖಾತೆಗೆ ಜಮೆ ಮಾಡಲಾಗಿದೆ. ಸಾಮಾನ್ಯವಾಗಿ ಪಾವತಿ 5 ರಿಂದ 10ರ ನಡುವೆ ಆಗುತ್ತಿತ್ತು. ಹೀಗಾಗಿ ಈ ಬಾರಿ ಪಾವತಿ ಸ್ವಲ್ಪ ಬೇಗ ಆಗಿದೆ.

ಇದನ್ನೂ ಓದಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ 6000 ಹುದ್ದೆಗಳ ನೇಮಕಾತಿ! ಇಲ್ಲಿದೆ ಮಾಹಿತಿ

Pension Scheme

ಇದರೊಂದಿಗೆ, ಅರ್ಹ ಫಲಾನುಭವಿಗಳು ತಮ್ಮ ಹಳ್ಳಿ ಅಥವಾ ಪಟ್ಟಣದ ಪಿಂಚಣಿದಾರರ ಪಟ್ಟಿಯನ್ನು ಆನ್‌ಲೈನ್ ಮೂಲಕ ನೇರವಾಗಿ ನೋಡಬಹುದಾಗಿದೆ.

ಅಧಿಕೃತ ಜಾಲತಾಣದಲ್ಲಿ (official website) ತಮ್ಮ ಜಿಲ್ಲೆಯ ಮಾಹಿತಿ, ಹೋಬಳಿ ಹಾಗೂ ಗ್ರಾಮ ಆಯ್ಕೆ ಮಾಡಿ captcha ಕೋಡ್ ಒದಗಿಸಿ ಪಟ್ಟಿ ಪಡೆಯಬಹುದು. ಇದರಿಂದ ಫಲಾನುಭವಿಗಳಿಗೆ ಪಾರದರ್ಶಕತೆ ಮತ್ತು ನಿಖರ ಮಾಹಿತಿ ಸಿಗಲಿದೆ.

ಇದನ್ನೂ ಓದಿ: ಕರ್ನಾಟಕ ರೈತರಿಗೆ ಸಿಹಿಸುದ್ದಿ! ಕುಸುಮ್-ಬಿ ಯೋಜನೆಯಡಿ ಕೃಷಿ ಪಂಪ್‌ಸೆಟ್‌ ವ್ಯವಸ್ಥೆ

ರಾಜ್ಯದಲ್ಲಿ ಚಾಲನೆಯಲ್ಲಿರುವ ಪ್ರಮುಖ Pension Schemes in Karnataka ಹೀಗಿವೆ:

  1. sandhya suraksha: ₹800-₹1,200
  2. ವೃದ್ಧಾಪ್ಯ ಪಿಂಚಣಿ: ₹800
  3. ಮೈತ್ರಿ ಯೋಜನೆ: ₹800
  4. ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ: ₹800
  5. ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ: ₹10,000
  6. ಎಂಡೋಸಲ್ಫಾನ್ ಸಂತ್ರಸ್ತರಿಗೆ: ₹2,000–₹4,000
  7. ಅಂಗವಿಕಲರಿಗೆ: ₹1,400–₹2,000
  8. ಮನಸ್ವಿನಿ ಯೋಜನೆ: ₹800

ಇದನ್ನೂ ಓದಿ: ಕರ್ನಾಟಕ ಆಶ್ರಯ ಯೋಜನೆ, ಮನೆ ಇಲ್ಲದ ಬಡವರಿಗೆ ಜಿಲ್ಲಾವಾರು ಮನೆಗಳ ಹಂಚಿಕೆ!

ಹೀಗಾಗಿ, ಸರ್ಕಾರದ ಪಿಂಚಣಿ ಯೋಜನೆಗಳಡಿ (Pension Scheme) ಲಾಭ ಪಡೆಯುತ್ತಿರುವ ಫಲಾನುಭವಿಗಳು ಇದೀಗ ತಮ್ಮ ಪಾವತಿ ಸ್ಥಿತಿ ಹಾಗೂ ಪಟ್ಟಿಯ ಮಾಹಿತಿಯನ್ನು ಮನೆಯಲ್ಲಿಯೇ ಸ್ಮಾರ್ಟ್‌ಫೋನ್ ಮೂಲಕ ಪರಿಶೀಲಿಸಬಹುದು. ಈ ತಂತ್ರಜ್ಞಾನ ಆಧಾರಿತ ಸೇವೆಯು ಗ್ರಾಮೀಣ ಹಾಗೂ ಹಿರಿಯ ನಾಗರಿಕರಿಗೆ ಬಹು ಉಪಯುಕ್ತವಾಗಿದೆ.

July Pension Released for Karnataka Beneficiaries

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories