ನಟ ದರ್ಶನ್ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್
ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆದೇಶವನ್ನು ಅಕ್ಟೋಬರ್ 30 ಕ್ಕೆ ಅಂದ್ರೆ ನಾಳೆಗೆ ಕಾಯ್ದಿರಿಸಿದೆ
ಬೆಂಗಳೂರು (Bengaluru) : ನಟ ದರ್ಶನ್ (Actor Darshan Thoogudeepa) ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆದೇಶವನ್ನು ಅಕ್ಟೋಬರ್ 30 ಕ್ಕೆ ಕಾಯ್ದಿರಿಸಿದೆ, ಹೌದು, ದರ್ಶನ್ ಪರ ವಕೀಲರು ಆರೋಗ್ಯದ ಕಾರಣಕ್ಕೆ ಜಾಮೀನು ನೀಡಬೇಕಾಗಿ ವಾದಮಂಡಿಸಿದ್ದಾರೆ.
ಅನಾರೋಗ್ಯದಿಂದ ಅವರು ಬಳಲುತ್ತಿದ್ದು ಕೂಡಲೇ ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ, ಆದ್ದರಿಂದ ಜಾಮೀನು (Bail) ನೀಡಬೇಕಾಗಿ ಕೋರಿದರು. ಇಂದು ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಿತು.
ಈ ನಡುವೆ ದರ್ಶನ್ರ ಆರೋಗ್ಯ ಸಮಸ್ಯೆಯನ್ನು (Health Issue) ಮುಂದಿಟ್ಟು ಜಾಮೀನು ಕೇಳಲಾಗಿದೆ. ದರ್ಶನ್ಗೆ ಆರೋಗ್ಯ ಸಮಸ್ಯೆ ಇದ್ದು, ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ದರ್ಶನ್ ಪರ ವಕೀಲ ಸಿವಿ ನಾಗೇಶ್ (CV Nagesh) ವಾದ ಮಂಡಿಸಿದ್ದಾರೆ.
ದರ್ಶನ್ ಜಾಮೀನು ಅರ್ಜಿ ಆದೇಶ ನಾಳೆಗೆ ಕಾಯ್ದಿರಿಸಿದ ಹೈಕೋರ್ಟ್
ಜೋತೆಗೆ ಎಸ್ಪಿಪಿ ಅವರು ದರ್ಶನ್ ಜಾಮೀನು ಅರ್ಜಿಗೆ ಕೆಲ ತಕರಾರುಗಳನ್ನು ಮಂಡಿಸಿದ್ದಾರೆ. ಇಬ್ಬರ ವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಾಧೀಶರು ಆದೇಶವನ್ನು ಅಕ್ಟೋಬರ್ 30 ಕ್ಕೆ ಕಾಯ್ದಿರಿಸಲಾಗಿದೆ.
ನ್ಯಾಯಾಲಯವು ದಾಖಲೆಗಳನ್ನು ಪರಿಶೀಲಿಸಿದ್ದು, ವೈದ್ಯರು ಬೆನ್ನುನೋವಿನ ಸಮಸ್ಯೆಯನ್ನು ನಿವಾರಿಸಲು ಫಿಸಿಯೋಥೆರಪಿ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಟನಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ತಕ್ಷಣ ಚಿಕಿತ್ಸಾ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ನಟ ದರ್ಶನ್ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೂನ್ 11 ರಂದು ದರ್ಶನ್ ಅವರನ್ನು ಬಂಧಿಸಲಾಗಿದ್ದು, ಪ್ರಸ್ತುತ ಬಳ್ಳಾರಿ ಜೈಲಿನಲ್ಲಿ ಇರಿಸಲಾಗಿದೆ.
Kannada Actor Darshan Thoogudeepa bail application order reserved to October 30