ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಸರ್ಕಾರದ ಬಳಿ ಹಣ ಇಲ್ವಾ? ಏನಿದು ಹೊಸ ವಿಷಯ

ಕರ್ನಾಟಕ ಸರ್ಕಾರದ ಬಳಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳಿಗೆ ಅಗತ್ಯವಿರುವ ಹಣದ ಕೊರತೆ ಮತ್ತು ಫಲಾನುಭವಿಗಳಿಗೆ ಸುಳ್ಳು ಭರವಸೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

  • ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಹಣದ ಕೊರತೆ!
  • ಅಕ್ಕಿ ನೀಡುವ ಭರವಸೆ ಕೊಟ್ರು ಖರೀದಿ ಮಾಡುತ್ತಿಲ್ಲ: ಪ್ರಲ್ಹಾದ್ ಜೋಶಿ
  • ನಾಲ್ಕೈದು ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆ ಹಣ ಇಲ್ಲ!

ಬೆಂಗಳೂರು (Bengaluru): ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿ ಆಗಿದ್ದು, ಇದು ದಿವಾಳಿ ಹಂತಕ್ಕೆ ತಲುಪಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ (Gruha Lakshmi Scheme) ಹಾಗೂ ಅನ್ನಭಾಗ್ಯ ಯೋಜನೆಗಾಗಿ (Annabhagya Yojane) ಹಣವಿಲ್ಲ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.

ಅವರು, ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರದ ಮೋದಿ ಸರ್ಕಾರವೇ ಕಾರಣ ಎಂದು ಹೇಳಿಕೊಂಡು, ಈಗ ಮೆಟ್ರೋ ದರ ಕಡಿಮೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಬೆಲೆ ಏರಿಕೆ ಮಾಡಿದ್ದು ಮೋದಿ ಸರ್ಕಾರವಾದರೆ ಬೆಲೆ ಕಡಿಮೆ ಮಾಡಲು ಕರ್ನಾಟಕ ಸರ್ಕಾರಕ್ಕೆ (Karnataka Government) ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ರೇಷನ್ ಕಾರ್ಡ್ ಅಪ್ಡೇಟ್: ರೇಷನ್ ಬದಲಿಗೆ ಹಣ ನೀಡುವ ಯೋಜನೆಗೆ ಚರ್ಚೆ!

ಅಕ್ಕಿ ನೀಡುವ ಭರವಸೆ ನೀಡಿದ್ದರೂ ರಾಜ್ಯ ಸರ್ಕಾರ ಖರೀದಿಸಲು ಮುಂದೆ ಬರುತ್ತಿಲ್ಲ. ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗಳ ಉದ್ದೇಶಕ್ಕೆ ಬೇಕಾದ ಹಣ ಸರ್ಕಾರದ ಬಳಿ ಇಲ್ಲ. “ನಾವು ಅಕ್ಕಿ ಕೊಡುತ್ತೇವೆ ಎಂದರೂ, ರಾಜ್ಯ ಸರ್ಕಾರ ಖರೀದಿಸುತ್ತಿಲ್ಲ” ಎಂದು ಜೋಶಿ ಹೇಳಿದರು.

ಜೂನ್ ತಿಂಗಳಿನಲ್ಲಿ ಅಕ್ಕಿ ಇದ್ದುದಾಗಿ ಹೇಳಿದ್ದೆವು, ಆದರೆ ಅದನ್ನು ಖರೀದಿಸಲು ದರ ಕಡಿಮೆ ಮಾಡಿದ್ದರೂ ಖರೀದಿಸಿಲ್ಲ. ಸಚಿವ ಮುನಿಯಪ್ಪ ಜೊತೆ ಮಾತುಕತೆ ನಡೆದಿತ್ತು, ಆದರೆ ಅವರು ಅಕ್ಕಿ ಆರ್ಡರ್ ಮಾಡಲೇ ಇಲ್ಲ ಎಂದರು.

ಗೃಹಲಕ್ಷ್ಮಿ ಯೋಜನೆ

ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಹಣ ಮೂರು ತಿಂಗಳುಗಳಿಂದ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಿಲ್ಲ. ಇದರಿಂದ ಫಲಾನುಭವಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರು ಭರವಸೆ ಇಟ್ಟಿದ್ದ ಗೃಹಲಕ್ಷ್ಮಿ ಯೋಜನೆಯೂ ಕೂಡ ಅವಶ್ಯಕ ಹಣವನ್ನು ನೀಡಲು ವಿಫಲವಾಗಿದೆ.

ಇದನ್ನೂ ಓದಿ: ರೈತರಿಗೆ 90% ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್‌, ಕೃಷಿ ಇಲಾಖೆಯಿಂದ ಬಂಪರ್ ಯೋಜನೆ

ಅನ್ನಭಾಗ್ಯ ಹಣ ಕೂಡ ಇಲ್ಲ!

ಇನ್ನು, ಮೂರು ತಿಂಗಳಿಂದ ಹಣ ಸಿಗುತ್ತಿಲ್ಲ. ಹಣ ಇಲ್ಲದೆ ಮತ್ತು ಅಕ್ಕಿಯೂ ಇಲ್ಲದೇ ಬಡವರು ಪರದಾಡುತ್ತಿದ್ದಾರೆ. ಅಕ್ಕಿ ಕೊಡುತ್ತೇವೆ ಎಂದು ಅಶ್ವಾಸನೆ ನೀಡಿದ ಸಚಿವರು ಈಗ ಸುಮ್ಮನಾಗಿದ್ದಾರೆ,” ಎಂದು ಫಲಾನುಭವಿಗಳು ಹೇಳಿದ್ದಾರೆ.

“ನಾವು ಹಣವನ್ನು ಕೇಳುತ್ತಿಲ್ಲ, ಹಣ ಬದಲು ನಮಗೆ ಅಕ್ಕಿ ಕೊಡಿ, ಅಥವಾ ಅಕ್ಕಿ ಸಿಗದಿದ್ದರೆ ದಿನಸಿ ಪದಾರ್ಥಗಳನ್ನು ನೀಡಿರಿ,” ಎಂದು ಅವರು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

ಅನ್ನಭಾಗ್ಯ ಯೋಜನೆ

ಫಲಾನುಭವಿ ಮಹಿಳೆಯರು ಹೇಳಿದಂತೆ, ಗೃಹಲಕ್ಷ್ಮಿ ಯೋಜನೆಯ ಹಣ ನಾಲ್ಕೈದು ತಿಂಗಳುಗಳಿಂದ ಅವರಿಗೆ ಸಿಗುತ್ತಿಲ್ಲ. ಮೊದಲು ತಡವಾಗಿ ಬಂದರೂ, ಈಗ ಅದು ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎನ್ನುತ್ತಿದ್ದಾರೆ.

“ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಅಪಘಾತದಿಂದಾಗಿ ವಿಶ್ರಾಂತಿಯಲ್ಲಿದ್ದು ಆ ಬಳಿಕ ಕೂಡ, ಜನರ ಕೈಗೆ ಸಿಗುತ್ತಿಲ್ಲ ಹಾಗೂ ಈ ಬಗ್ಗೆ ಯಾವುದೇ ಮಾಹಿತಿ ಕೂಡ ಸಿಗುತ್ತಿಲ್ಲ,” ಎಂದು ಮಾಧ್ಯಮಗಳಿಗೆ ತಿಳಿಸಿದರು.

Karnataka Congress Government Faces Criticism for Fund Shortage

English Summary▼

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories