ಗೃಹಲಕ್ಷ್ಮಿ ಹಣ ಇಂದು ಬರುತ್ತೆ, ನಾಳೆ ಬರುತ್ತೆ ಅಂತ ಕಾಯ್ತಾ ಇರೋ ಮಹಿಳೆಯರಿಗೆ ಇಲ್ಲಿದೆ ಅಪ್ಡೇಟ್
1.18 ಕೋಟಿ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದರೂ ಸಹ, ಅವರಲ್ಲಿ ಎಲ್ಲರಿಗೂ ಕೂಡ ಗೃಹಲಕ್ಷ್ಮೀ ಯೋಜನೆಯ (Gruha Lakshmi Yojana) ಹಣ ಬರುತ್ತಿಲ್ಲ. ಅದರಲ್ಲೂ ಕಳೆದ ಎರಡು ತಿಂಗಳುಗಳ ಹಣ ಮಹಿಳೆಯರ ಖಾತೆಗೆ ಬಂದಿಲ್ಲ.
ನಮ್ಮ ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಆಗುವ ಹಾಗೆ ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿದೆ. ಈ ಒಂದು ಯೋಜನೆಯ ಮೂಲಕ ಸರ್ಕಾರವು ಪ್ರತಿ ತಿಂಗಳು ಕೂಡ ₹2000 ರೂಪಾಯಿಗಳನ್ನು ಮಹಿಳೆಯರ ಖಾತೆಗೆ (Bank Account) ಹಾಕುವುದಾಗಿ ತಿಳಿಸಿತ್ತು.
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಈ ಯೋಜನೆ ಜಾರಿಗೆ ತಂದಿದ್ದು, ಈಗಾಗಲೇ 1 ವರ್ಷ ಕಳೆಯುತ್ತಿದೆ, ರಾಜ್ಯದಲ್ಲಿ ಸುಮಾರು 1.18 ಕೋಟಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇಂದಿಗೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
1.18 ಕೋಟಿ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದರೂ ಸಹ, ಅವರಲ್ಲಿ ಎಲ್ಲರಿಗೂ ಕೂಡ ಗೃಹಲಕ್ಷ್ಮೀ ಯೋಜನೆಯ (Gruha Lakshmi Yojana) ಹಣ ಬರುತ್ತಿಲ್ಲ. ಅದರಲ್ಲೂ ಕಳೆದ ಎರಡು ತಿಂಗಳುಗಳ ಹಣ ಮಹಿಳೆಯರ ಖಾತೆಗೆ ಬಂದಿಲ್ಲ.
ಮೇ ತಿಂಗಳ ಹಣ ಬಂದಿದೆ, ಆದರೆ ಇನ್ನೂ ಕೂಡ ಗೃಹಲಕ್ಷ್ಮೀ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಹಣ ತಲುಪಿಲ್ಲ ಎಂದು ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ. ತಮಗೆ ಯಾವಾಗ ಹಣ ಬರುತ್ತದೆ ಎಂದು ಕಾಯುತ್ತಿದ್ದಾರೆ.
ಈ ಬಗ್ಗೆ ಈಗ ಸರ್ಕಾರದ ಪರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, ಭರವಸೆ ನೀಡಿದ್ದು, ಮಹಿಳೆಯರಿಗೆ ಎಲ್ಲಾ ತಿಂಗಳುಗಳ ಪೆಂಡಿಂಗ್ ಹಣ ಬರುತ್ತದೆ ಎಂದು ಹೇಳಿದ್ದಾರೆ.
ಹಾಗೆಯೇ ಅವರ ಮಾತಿನ ಅನುಸಾರ, ಮೇ ತಿಂಗಳ ಹಣ ಈಗಾಗಲೇ ಜಮೆ ಆಗಿದ್ದು, ತಾಂತ್ರಿಕ ದೋಷಗಳ ಕಾರಣ ಜೂನ್ ಮತ್ತು ಜುಲೈ ತಿಂಗಳ ಹಣ ಇನ್ನು ಕೂಡ ಮಹಿಳೆಯರ ಬ್ಯಾಂಕ್ ಖಾತೆಗೆ (Bank Account) ವರ್ಗಾವಣೆ ಆಗಿಲ್ಲ. ಆ ಹಣ ಕೂಡ ಶೀಘ್ರದಲ್ಲೇ ವರ್ಗಾವಣೆ ಆಗಲಿದೆ ಎಂದಿದ್ದಾರೆ..
ಜೂನ್ ತಿಂಗಳ ಹಣ ಇನ್ನು ಒಂದು ವಾರದಲ್ಲಿ ಮಹಿಳೆಯರ ಖಾತೆಗೆ ವರ್ಗಾವಣೆ ಆಗಲಿದ್ದು, ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಅಂದರೆ ಇನ್ನು 10 ದಿನಗಳ ಒಳಗೆ ಪೆಂಡಿಂಗ್ ಇರುವ ಎರಡು ತಿಂಗಳುಗಳ ಹಣ, ₹4000 ರೂಪಾಯಿಗಳು ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಮಹಿಳೆಯರು ಆತಂಕ ಪಡುವುದು ಬೇಡ, ಶೀಘ್ರದಲ್ಲೇ ಅವರಿಗೆ ಪೆಂಡಿಂಗ್ ಇರುವ ಹಣ ತಲುಪುತ್ತದೆ ಎಂದಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್..
ಇದರಿಂದ ಈಗ ಮಹಿಳೆಯರಿಗೆ ಕೂಡ ಆತಂಕ ಕಡಿಮೆ ಆಗಿದೆ. ಈ ಮೊದಲು ಲೋಕಸಭಾ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಪಕ್ಷ ಅಂದುಕೊಂಡ ಹಾಗೆ ಫಲಿತಾಂಶ ಕಾಣದ ಕಾರಣ ಎಲ್ಲಾ ಗ್ಯಾರೆಂಟಿ ಯೋಜನೆಗಳು ಸಹ ನಿಂತುಹೋಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ಆ ರೀತಿ ಏನು ಆಗುವುದಿಲ್ಲ, ಸರ್ಕಾರ ಅಧಿಕಾರದಲ್ಲಿ ಇರುವಷ್ಟು ದಿವಸ ಕೂಡ ,ಎಲ್ಲಾ ಯೋಜನೆಗಳ ಸೌಲಭ್ಯ ರಾಜ್ಯದ ಜನತೆಗೆ ಸಿಗುತ್ತದೆ ಎಂದು ತಿಳಿಸಿದ್ದಾರೆ.
Karnataka Government Update on Gruha Lakshmi Scheme