ಕರ್ನಾಟಕ ರೇಷನ್‌ ಕಾರ್ಡ್‌ಗಳಿಗೆ ಹೊಸ ಅಪ್ಡೇಟ್, ಸರ್ಕಾರದಿಂದ ಮಹತ್ವದ ಕ್ರಮ!

ಕರ್ನಾಟಕದ ಎಲ್ಲಾ ರೇಷನ್‌ ಕಾರ್ಡ್‌ ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ಸಹಾಯವಾಗುವಂತೆ ರಾಜ್ಯ ಸರ್ಕಾರ ಹೊಸ ಮೊಬೈಲ್‌ ಆಪ್‌ ಪರಿಚಯಿಸಲು ತೀರ್ಮಾನಿಸಿದೆ. ಪಾರದರ್ಶಕತೆ, ಟ್ರ್ಯಾಕಿಂಗ್‌ ಮತ್ತು ಸುಗಮ ಸೇವೆ ಇದರ ಗುರಿ.

Karnataka Ration Card: ಕರ್ನಾಟಕದಲ್ಲಿ ರೇಷನ್‌ ಕಾರ್ಡ್‌ ವ್ಯವಸ್ಥೆಗೆ ಸಂಬಂಧಿಸಿದ ಮಹತ್ವದ ಬದಲಾವಣೆಯೊಂದು ರಾಜ್ಯದ ಗಮನ ಸೆಳೆದಿದೆ. ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಶೀಘ್ರದಲ್ಲೇ ಪರಿಚಯಿಸಬಹುದಾದ ಹೊಸ ಮೊಬೈಲ್‌ ಆಪ್‌ ಕುರಿತು ಈಗಲೇ ಚರ್ಚೆ ಆರಂಭವಾಗಿದೆ.

ಈ ಆಪ್‌ ಪ್ರಾರಂಭವಾದರೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಪಾರದರ್ಶಕತೆ ಹೆಚ್ಚುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಬಿಪಿಎಲ್‌ ಕಾರ್ಡ್‌ ಹೊಂದಿರುವವರು ಗೋಧಿ, ಅಕ್ಕಿ, ಸಕ್ಕರೆ ಸೇರಿದಂತೆ ಅಗತ್ಯವಸ್ತುಗಳನ್ನು ಪಡೆಯುತ್ತಿದ್ದಾರೆ. ಆದರೆ ಕೆಲವು ಅಂಗಡಿಗಳಲ್ಲಿ ಅಕ್ರಮ ವಹಿವಾಟು, ಹೆಚ್ಚುವರಿ ಮಾರಾಟದಂತಹ ದೂರುಗಳು ಎದುರಾಗುತ್ತಿದ್ದವು. ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವುದೇ ಈ ಹೊಸ ಆಪ್‌ನ ಮೂಲ ಗುರಿ.

ಈ ಆಪ್‌ EPOS (Electronic Point of Sale) ಯಂತ್ರಗಳೊಂದಿಗೆ ಈಗಿರುವ ಡೇಟಾದನ್ನು ಸಂಯೋಜಿಸಿ ಕಾರ್ಯನಿರ್ವಹಿಸಲಿದೆ. ವಿತರಿಸಿಲಾಗುವ ಅಕ್ಕಿ, ಗೋಧಿಯ ತೂಕದಿಂದ ಹಿಡಿದು ಗ್ರಾಹಕರ ಆಧಾರ್‌ ಪರಿಶೀಲನೆವರೆಗೆ ಎಲ್ಲ ಕಾರ್ಯಗಳೂ ಆಪ್‌ನಲ್ಲಿ ದಾಖಲಾಗುತ್ತವೆ. ನಂತರ ಕೇಂದ್ರ ಸರ್ವರ್‌ಗೆ ತ್ವರಿತವಾಗಿ ಅಪ್ಡೇಟ್‌ ಆಗಲಿದೆ.

ಹೊಸ ಆಪ್‌ನಲ್ಲಿ ಬಯೋಮೆಟ್ರಿಕ್‌ ಪರಿಶೀಲನೆ, ಬಾರ್‌ಕೋಡ್‌ ಸ್ಕ್ಯಾನ್‌, ಜಿಪಿಎಸ್‌ ಟ್ರ್ಯಾಕಿಂಗ್‌ ಮೊದಲಾದ ಹಲವು ತಾಂತ್ರಿಕ ಸೌಲಭ್ಯಗಳಿದ್ದು, ನ್ಯಾಯಬೆಲೆ ಅಂಗಡಿಯಲ್ಲಿನ ಪ್ರತಿಯೊಂದು ವಸ್ತುವಿನ ವಿತರಣೆ ದಾಖಲಾಗಿ ಕಂಟ್ರೋಲ್‌ ರೂಮ್‌ಗೆ ತಲುಪಲಿದೆ. ಈ ಮೂಲಕ ಸ್ಟಾಕ್‌ ಕೊರತೆ, ತೂಕದಲ್ಲಿ ಅಕ್ರಮ, ಕೃತಕ ಬಿಲ್ಲಿಂಗ್‌ ಮುಂತಾದ ಘಟನೆಗಳಿಗೆ ಕಡಿವಾಣ ಬೀಳುವ ನಿರೀಕ್ಷೆ ಇದೆ.

ಗ್ರಾಹಕರ ದೃಷ್ಟಿಯಿಂದಲೂ ಇದು ಉಪಯುಕ್ತ. ತಮ್ಮ ಅರ್ಹತೆ, ಉಳಿದಿರುವ ಸ್ಟಾಕ್‌, ವಿತರಣೆ ಪ್ರಮಾಣಗಳ ಕುರಿತು ನೇರವಾಗಿ ಅಪ್ಡೇಟ್‌ ಪಡೆಯಲು ಆಪ್‌ ನೆರವಾಗುವುದು. ಇಲಾಖೆಯ ಅಧಿಕಾರಿಗಳು ರಾಜ್ಯದಾದ್ಯಂತ ಡೇಟಾವನ್ನು ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ನಿಗಾ ವಹಿಸಲು ಸಾಧ್ಯವಾಗುತ್ತದೆ.

ಇಲ್ಲಿಯವರೆಗೆ ಕೆಲವು ಜಿಲ್ಲೆಗಳಲ್ಲಿ e-PoS ಯಂತ್ರಗಳು ಬಳಸಲಾಗುತ್ತಿದ್ದು, ವರ್ಷದ ಅಂತ್ಯದ ಒಳಗೆ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೂ ಈ ಆಪ್ ಆಧಾರಿತ ವ್ಯವಸ್ಥೆಯನ್ನು ವಿಸ್ತರಿಸುವ ಯೋಜನೆ ಸರ್ಕಾರ ಹೊಂದಿದೆ. ಇದು ಜಾರಿಗೆ ಬಂದರೆ, ರೇಷನ್‌ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಪಾರದರ್ಶಕತೆ ಸಾಧಿಸಬಹುದಾಗಿದೆ.

Karnataka to Launch New App for Ration Card System

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories