Bangalore News
ಬೆಂಗಳೂರು ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಜನರು
ಬೆಂಗಳೂರು (Bengaluru): ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ (Anekal) ಜಿಗಣಿ ಸುತ್ತಮುತ್ತ ಚಿರತೆಯೊಂದು ಓಡಾಡುತ್ತಿದೆ. ಇದನ್ನು ನೋಡಿದ ಜನರು ಭಯಭೀತರಾಗಿದ್ದಾರೆ. ಜಿಗಣಿ ಪಕ್ಕದ ನಿಸರ್ಗ ಲೇಔಟ್, ಲೋಟಸ್ ಲೇಔಟ್ ನಲ್ಲಿ ಗುರುವಾರ ರಾತ್ರಿ ಚಿರತೆಯೊಂದು ಸಂಚರಿಸಿದ್ದು, ಶುಕ್ರವಾರ ಬೆಳಗಿನ ಜಾವ ಮತ್ತೆ ಚಿರತೆ ಸಂಚರಿಸಿದೆ.
ಸ್ಥಳೀಯರು ನೋಡಿ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಶುಕ್ರವಾರ ಸಂಜೆ ಜಿಗಣಿಗೆ ಬಂದ ಅರಣ್ಯ ಸಿಬ್ಬಂದಿ ಚಿರತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಸ್ಥಳೀಯರು ಒಂಟಿಯಾಗಿ ಹೊರಬರಲು ಭಯಪಡುತ್ತಿದ್ದಾರೆ. ಹಗಲಿನಲ್ಲಿ ಗುಂಪುಗುಂಪಾಗಿ ಸಂಚರಿಸಬೇಕು, ರಾತ್ರಿ ಒಬ್ಬಂಟಿಯಾಗಿ ಹೊರಗೆ ಹೋಗಬಾರದು ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.
ಆನೇಕಲ್ ತಾಲೂಕಿನಲ್ಲಿ ಕೆಲ ದಿನಗಳಿಂದ ಚಿರತೆಗಳ ಓಡಾಟ ಹೆಚ್ಚಾಗಿತ್ತು. ಅವುಗಳನ್ನು ಬಂಧಿಸಿ ಸ್ಥಳಾಂತರ ಮಾಡಬೇಕು ಎಂದು ಜನರು ಒತ್ತಾಯಿಸಿದರು.
Leopard sighted on outskirts of Bengaluru, people in panic