Bengaluru: ಇಂದು ಬೆಂಗಳೂರಿನಲ್ಲಿ ಬೆಳಗ್ಗೆ 6ರಿಂದ ಮಧ್ಯರಾತ್ರಿ 1ರವರೆಗೆ ಮದ್ಯ ಮಾರಾಟಕ್ಕೆ ಅನುಮತಿ

ಹೊಸ ವರ್ಷದ ಸಂಭ್ರಮಕ್ಕೆ ಸರ್ಕಾರದಿಂದ ವಿಶೇಷ ಸಡಿಲಿಕೆ, ಡಿಸೆಂಬರ್ 31ರಂದು ಬೆಳಗ್ಗೆ 6ರಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ, ಉಳಿದ ದಿನಗಳಲ್ಲಿ ಹಳೆಯ ನಿಯಮಗಳು ಮುಂದುವರಿಕೆ

  • ಬೆಳಗ್ಗೆ 6ರಿಂದ ಮಧ್ಯರಾತ್ರಿ 1ರವರೆಗೆ ಮದ್ಯ ಮಾರಾಟ
  • ಡಿಸೆಂಬರ್ 31ರಂದು ಮಾತ್ರ ವಿಶೇಷ ಸಡಿಲಿಕೆ
  • ಬಾರ್, ಪಬ್, ವೈನ್ ಶಾಪ್, CL-5 ಲೈಸೆನ್ಸ್‌ಗೆ ಅನ್ವಯ

ಬೆಂಗಳೂರು (Bengaluru): ಹೊಸ ವರ್ಷಾಚರಣೆಗೆ ಮದ್ಯ ಪ್ರಿಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್ 31ರಂದು ಮಾತ್ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ವಿಶೇಷ ಅನುಮತಿ ನೀಡಲಾಗಿದೆ. ಈ ಸಡಿಲಿಕೆ ಒಂದೇ ದಿನಕ್ಕೆ ಸೀಮಿತವಾಗಿದ್ದು, ಇತರೆ ದಿನಗಳಲ್ಲಿ ಹಿಂದಿನ ನಿಯಮಗಳೇ ಜಾರಿಯಲ್ಲಿ ಇರುತ್ತವೆ.

ಹೊಸ ವರ್ಷ ಸ್ವಾಗತದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನಗರ ಹಾಗೂ ರಾಜ್ಯದ ಎಲ್ಲಾ ಬಾರ್‌ಗಳು, ಪಬ್‌ಗಳು, ವೈನ್ ಶಾಪ್‌ಗಳು ಮತ್ತು ಅಧಿಕೃತ ಮದ್ಯ ಮಾರಾಟ ಕೇಂದ್ರಗಳಿಗೆ ಈ ಆದೇಶ ಅನ್ವಯವಾಗುತ್ತದೆ. ಮದ್ಯ ಮಾರಾಟ ಸಮಯ ವಿಸ್ತರಣೆ ಬಗ್ಗೆ ಈಗಾಗಲೇ ವ್ಯಾಪಕ ಚರ್ಚೆ ನಡೆಯುತ್ತಿತ್ತು.

CL-5 ಲೈಸೆನ್ಸ್‌ಗೂ ಮಿತಿ

ಪ್ರೈವೇಟ್ ಪಾರ್ಟಿ, ವಿಶೇಷ ಕಾರ್ಯಕ್ರಮಗಳು ಹಾಗೂ ತಾತ್ಕಾಲಿಕ ಮದ್ಯ ವಿತರಣೆಗಾಗಿ ನೀಡಲಾಗುವ CL-5 ಲೈಸೆನ್ಸ್ ಹೊಂದಿರುವವರಿಗೂ ಇದೇ ಸಮಯ ನಿಯಮ ಅನ್ವಯವಾಗುತ್ತದೆ.

ಸಾಮಾನ್ಯವಾಗಿ CL-5 ಲೈಸೆನ್ಸ್ ಇದ್ದರೆ 24 ಗಂಟೆಗಳ ಮದ್ಯ ಸೇವನೆ ಅವಕಾಶ ಎಂಬ ಅಭಿಪ್ರಾಯ ಇದ್ದರೂ, ಹೊಸ ವರ್ಷ ದಿನ ಅನಾಹುತ ತಪ್ಪಿಸಲು ಸರ್ಕಾರ ಸಮಯ ಮಿತಿ ವಿಧಿಸಿದೆ.

ಮಧ್ಯರಾತ್ರಿ 1 ಗಂಟೆ ಬಳಿಕ ಮದ್ಯ ಮಾರಾಟ ಅಥವಾ ಸೇವನೆ ನಡೆದರೆ ಲೈಸೆನ್ಸ್ ರದ್ದುಪಡಿಸುವುದರ ಜೊತೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

TRENDING ARTICLES1 / 8

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories