ಬೆಂಗಳೂರು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಯ ರೈಫಲ್ ಕಸಿಯಲು ಯತ್ನಿಸಿದ ವ್ಯಕ್ತಿ
ರಾಮದಾಸ್ ಅವರು ಬೆಳಗ್ಗೆ ಹೈದರಾಬಾದ್‌ನಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಬೆಂಗಳೂರು (Bengaluru): ಭದ್ರತಾ ಅಧಿಕಾರಿಯಿಂದ ರೈಫಲ್ ಕಸಿಯಲು ಯತ್ನಿಸಿದ ಬೆಂಗಳೂರಿನ ಕಸ್ತೂರಿ ನಗರದ (Bengaluru Kasturi Nagar) ವಿಕ್ರಮ್ ರಾಮದಾಸ್ (35) ಎಂಬಾತನನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 14 ರಂದು ಬೆಳಿಗ್ಗೆ 7.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ, ಕರ್ತವ್ಯದಲ್ಲಿದ್ದ ಸಿಐಎಸ್ಎಫ್ ಅಧಿಕಾರಿಯೊಬ್ಬರ ರೈಫಲ್ ದೋಚುವ ಪ್ರಯತ್ನವನ್ನು ನಿಯಂತ್ರಣ ಕೊಠಡಿಗೆ ವರದಿ ಮಾಡಿದರು.
ಘಟನೆಯ ನಂತರ, ಕಮಾಂಡರ್ ಮತ್ತು ಕ್ವಿಕ್ ರೆಸ್ಪಾನ್ಸ್ ಟೀಮ್ (ಕ್ಯೂಆರ್‌ಟಿ) ಘಟನಾ ಸ್ಥಳಕ್ಕೆ ಆಗಮಿಸಿ, ರಾಮದಾಸ್‌ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಪೊಲೀಸರಿಗೆ ಹಸ್ತಾಂತರಿಸಿದರು.
ರಾಮದಾಸ್ ಅವರು ಬೆಳಗ್ಗೆ ಹೈದರಾಬಾದ್‌ನಿಂದ ವಿಮಾನದಲ್ಲಿ (Airport) ಬೆಂಗಳೂರಿಗೆ ಬಂದಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸ್ ಅಧಿಕಾರಿಯ ಪ್ರಕಾರ, ಅವರು ತಪ್ಪಾಗಿ ಇನ್ನೊಬ್ಬ ಪ್ರಯಾಣಿಕರ ಲಗೇಜ್ ಎತ್ತಿಕೊಂಡು ಟರ್ಮಿನಲ್‌ನಿಂದ ಹೊರಡುವಾಗ ಲಗೇಜ್‌ನ ನಿಜವಾದ ಮಾಲೀಕರು ಅಡ್ಡಗಟ್ಟಿದ್ದಾರೆ, ಇವರ ಜಗಳವು ಸಿಐಎಸ್‌ಎಫ್ ಸಿಬ್ಬಂದಿ ಕಂಡು, ಈ ವೇಳೆ ಸಮಾಧಾನ ಪಡಿಸಲು ಬಂದ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.
ರಾಮದಾಸ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 132 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಆತನನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
Man arrested for attempting to grab airport security officer’s rifle in Bengaluru