Bangalore NewsCrime News

ಬೆಂಗಳೂರಿನಲ್ಲಿ 2ನೇ ಪತ್ನಿ ಕೊಲೆ ಮಾಡಿ 3ನೇ ಮದುವೆಯಾಗಲು ಸಿದ್ಧವಾಗಿದ್ದ ಆರೋಪಿ ಬಂಧನ

ಬೆಂಗಳೂರು (Bengaluru): ಎರಡನೇ ಪತ್ನಿಯನ್ನು ಕೊಂದು ಮೂರನೇ ಮದುವೆಯಾಗಲು ಸಿದ್ಧತೆ ನಡೆಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಿಹಾರ ಮೂಲದ ಮೊಹಮ್ಮದ್ ನಸೀಂ (39) ಬಂಧಿತ ಆರೋಪಿ. ರುಮೇಶ್ ಖಾತುನ್ (22) ಕೊಲೆಯಾದ ಎರಡನೇ ಪತ್ನಿ. ಸರ್ಜಾಪುರದಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿರುವ ನಸೀಮ್ ಅವರಿಗೆ ಮೊದಲ ಪತ್ನಿಯಲ್ಲಿ ಮೂವರು ಮಕ್ಕಳು ಹಾಗೂ ಎರಡನೇ ಪತ್ನಿ ಖಾತುನ್ ಅವರಿಗೆ ಮೂವರು ಮಕ್ಕಳಿದ್ದಾರೆ.

ಬೆಂಗಳೂರಿನಲ್ಲಿ 2ನೇ ಪತ್ನಿ ಕೊಲೆ ಮಾಡಿ 3ನೇ ಮದುವೆಯಾಗಲು ಸಿದ್ಧವಾಗಿದ್ದ ಆರೋಪಿ ಬಂಧನ

ಆದರೆ ನಸೀಂ ತನ್ನ ಎರಡನೇ ಪತ್ನಿ ಮೇಲೆ ಅನುಮಾನಗೊಂಡು ನ.11ರಂದು ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಆಕೆಯ ಕಾಲು ಹಾಗೂ ಕೈಗಳನ್ನು ಕಟ್ಟಿ ಶವವನ್ನು ಚರಂಡಿಗೆ ಎಸೆದಿದ್ದಾನೆ.

ಆ ನಂತರ ಬಿಹಾರಕ್ಕೆ ಹೋಗಿ ತಲೆಮರೆಸಿಕೊಂಡಿದ್ದ. ಮತ್ತೊಂದೆಡೆ ಸರ್ಜಾಪುರ ಪೊಲೀಸರು ಖಾತುನ್ ಮೃತದೇಹ ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಬಿಹಾರಕ್ಕೆ ತೆರಳಿ ಅಲ್ಲಿ ಮೂರನೇ ಮದುವೆಗೆ ವ್ಯವಸ್ಥೆ ಮಾಡಿಕೊಂಡಿದ್ದ ಆರೋಪಿಯನ್ನು ಸರ್ಜಾಪುರ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.

Man Arrested in Bengaluru for Killing Second Wife to Marry Again

Our Whatsapp Channel is Live Now 👇

Whatsapp Channel

Related Stories