ಬೆಂಗಳೂರು ಕಳಪೆ ರಸ್ತೆಗಳಿಂದ ಬೆನ್ನು ನೋವು, 50 ಲಕ್ಷ ಪರಿಹಾರಕ್ಕೆ ವ್ಯಕ್ತಿಯಿಂದ ನೋಟಿಸ್
ಬೆಂಗಳೂರು ರೋಡ್ಗಳ ದುರಾವಸ್ಥೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ದಿವ್ಯ ಕಿರಣ್ಎಂಬ ವ್ಯಕ್ತಿ, ಶಾರೀರಿಕ ನೋವಿಗೆ ಇದೇ ಕಾರಣವೆಂದು ಬಿಬಿಎಂಪಿಗೆ ₹50 ಲಕ್ಷ ನಷ್ಟಪರಿಹಾರದ ಲೀಗಲ್ ನೋಟಿಸ್ ನೀಡಿದ್ದಾರೆ.

ಬೆಂಗಳೂರು ನಗರದ (Bengaluru Roads) ಹಾಳಾದ ರಸ್ತೆಗಳು ಈಗ ಆರೋಗ್ಯ ಸಮಸ್ಯೆಗಳ ಮೂಲವಾಗುತ್ತಿರುವುದಕ್ಕೆ ತಾಜಾ ಉದಾಹರಣೆ ದೊರೆತಿದೆ. ರಿಚ್ಮಂಡ್ ಟೌನ್ನ ನಿವಾಸಿ ದಿವ್ಯ ಕಿರಣ್ (Dhivya Kiran), ನಗರದ ರಸ್ತೆಗಳ ಮೇಲೆ ಸಂಚರಿಸುವುದರಿಂದ ತೀವ್ರವಾದ ಬೆನ್ನು ನೋವಿಗೆ ಒಳಗಾಗಿದ್ದೇನೆ ಎಂದು ದೂರಿದ್ದಾರೆ.
ಅದನ್ನೇ ಆಧಾರವಾಗಿಸಿಕೊಂಡು, ಬೆಂಗಳೂರಿನ ಬೃಹತ್ ಮಹಾನಗರ ಪಾಲಿಕೆ (BBMP) ವಿರುದ್ಧ ₹50 ಲಕ್ಷ ನಷ್ಟಪರಿಹಾರ ಹಾಗೂ ₹10,000 ಲೀಗಲ್ ಖರ್ಚು ಪರಿಹಾರವಾಗಿ ನೀಡಬೇಕು ಎಂದು ಮೇ 14 ರಂದು ಲೀಗಲ್ ನೋಟಿಸ್ ನೀಡಿದ್ದಾರೆ. ಅವರ ಪರವಾಗಿ ನ್ಯಾಯವಾದಿ ಕೆ.ವಿ. ಲವೀನ್ ಈ ನೋಟಿಸ್ ಕಳುಹಿಸಿದ್ದಾರೆ.
“ನಾನು ಪದೇ ಪದೇ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ, (chronic back pain) ಕಾರಣವೇ ರಸ್ತೆ ಗುಂಡಿಗಳು. ಆರ್ಥೋಪೆಡಿಕ್ ತಜ್ಞರನ್ನು ಐದು ಸಲ ಭೇಟಿಯಾಗಿ ಚಿಕಿತ್ಸೆ ಪಡೆದಿದ್ದೇನೆ, ಫಿಲೋಮೆನಾ ಆಸ್ಪತ್ರೆಯಲ್ಲಿ ನಾಲ್ಕು ಬಾರಿ ತುರ್ತು ಚಿಕಿತ್ಸೆ ಪಡೆದುಕೊಂಡಿದ್ದೇನೆ,” ಎಂದು ಅವರು ನೋಟಿಸಿನಲ್ಲಿ ಉಲ್ಲೇಖಿಸಿದ್ದಾರೆ. ಇವರ ಬೆನ್ನು ನೋವಿಗೆ ಕಾರಣ ರಸ್ತೆಗಳೇ ಎಂದು ವೈದ್ಯರೂ ದೃಢಪಡಿಸಿದ್ದಾರೆ ಎಂಬುದು ಪ್ರಮುಖ ಮಾಹಿತಿ.
ನಗರದಲ್ಲಿ ಮೂಲಭೂತ ಸೌಲಭ್ಯ ನೀಡಲಾಗುತ್ತಿಲ್ಲ ಎಂಬ ತೀವ್ರ ಆರೋಪವನ್ನೂ ಅವರು ಮಾಡಿದ್ದಾರೆ. “ನಾವು ಪೂರಕವಾಗಿ ಟ್ಯಾಕ್ಸ್ ಪಾವತಿಸಿದರು (tax payer) ಬಿಬಿಎಂಪಿ ನಮ್ಮ ಪರವಾಗಿ ಕೆಲಸ ಮಾಡುವುದಿಲ್ಲ. ಕೊನೆಗೆ ನಾನು ನೊಂದಿರುವುದು ನನ್ನ ಆರೋಗ್ಯದಿಂದ” ಎಂದು ಅವರು ವಿಷಾದಿಸಿದರು.
ಲಘುಚಿಕಿತ್ಸೆಗಳು, ಇಂಜೆಕ್ಷನ್ಗಳು ಮತ್ತು ಒಂದಕ್ಕಿಂತ ಹೆಚ್ಚು ಔಷಧಗಳನ್ನು ಸೇವಿಸಿರುವುದನ್ನೂ ಅವರು ಲೀಗಲ್ ನೋಟಿಸಿನಲ್ಲಿ ದಾಖಲಿಸಿದ್ದಾರೆ. 15 ದಿನಗಳಲ್ಲಿ ಪರಿಹಾರ ನೀಡದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯೂ ನೀಡಲಾಗಿದೆ. ಇತ್ತ ಬಿಬಿಎಂಪಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Man Sends Legal Notice to BBMP Over Bad Roads



