Bangalore News

ಬೆಂಗಳೂರು ಜನಜೀವನ ದುಸ್ತರ! ಎಡೆಬಿಡದ ಮಳೆ, ಹಲವು ರಸ್ತೆಗಳು ಇನ್ನೂ ಜಲಾವೃತ

ಬೆಂಗಳೂರು (Bengaluru): ಧಾರಾಕಾರ ಮಳೆಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರು ಜನಜೀವನ ದುಸ್ತರವಾಗಿದೆ. ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ (Heavy Rain) ಬೆಂಗಳೂರು ನಗರದ ಉತ್ತರ ಭಾಗ ಜಲಾವೃತಗೊಂಡಿದೆ.

ಯಲಹಂಕದ (Yelahanka) ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್, ಭದ್ರಪ್ಪ ಲೇಔಟ್, ಕೋಗಿಲು ಸರ್ಕಲ್, ಹೊರಮಾವು ಇನ್ನೂ ಜಲಾವೃತವಾಗಿದೆ.

ಬೆಂಗಳೂರು ಜನಜೀವನ ದುಸ್ತರ! ಎಡೆಬಿಡದ ಮಳೆ, ಹಲವು ರಸ್ತೆಗಳು ಇನ್ನೂ ಜಲಾವೃತ

ಬುಧವಾರ ಸಂಜೆ ಸುರಿದ ಮಳೆಯಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳು ಮತ್ತೆ ಜಲಾವೃತಗೊಂಡಿತು. ನಾಲ್ಕು ಅಡಿಗೂ ಹೆಚ್ಚು ನೀರು ನಿಂತಿದ್ದರಿಂದ ಜನರು ಮನೆಯಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ. 150ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿದ್ದು, ಪಾಲಿಕೆ ಅಧಿಕಾರಿಗಳು ಊಟ, ನೀರು ಒದಗಿಸಿದ್ದಾರೆ.

ನಗರದಾದ್ಯಂತ ಒಟ್ಟು 1,030 ಮನೆಗಳು ಜಲಾವೃತಗೊಂಡಿದ್ದು, ಹಲವು ರಸ್ತೆಗಳು ಇನ್ನೂ ಜಲಾವೃತವಾಗಿವೆ.

ಬಸವನಗುಡಿಯಲ್ಲಿ (Basavanagudi) ಮರ ಬಿದ್ದು ಮೂರು ಕಾರುಗಳಿಗೆ ಹಾನಿಯಾಗಿದೆ. ಆರ್ ಜೆ ಟೆಕ್ ಪಾರ್ಕ್ ಜಲಾವೃತಗೊಂಡಿದೆ. ಹಲವು ಅಂಡರ್ ಪಾಸ್ ಗಳಲ್ಲಿ ಮೂರ್ನಾಲ್ಕು ಅಡಿ ಮಳೆ ನೀರು ತುಂಬಿಕೊಂಡಿದೆ. ಇದರಿಂದ ವಾಹನ ಸವಾರರು ಪರದಾಡಿದರು.

ರಾಜ ಕಾಲುವೆಗಳಲ್ಲಿನ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

many roads are still waterlogged in Bengaluru City for Heavy Rain

Our Whatsapp Channel is Live Now 👇

Whatsapp Channel

Related Stories