ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ 3 ಕೋಟಿ ಮೌಲ್ಯದ ಮೊಬೈಲ್ ಫೋನ್‌ಗಳ ಕಳ್ಳತನ
ಚಾಲಕ ಖಾಲಿ ಕಂಟೈನರ್ ಅನ್ನು ರಸ್ತೆಬದಿಯಲ್ಲಿಟ್ಟು ಮೊಬೈಲ್‌ಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಂಗಳೂರು (Bengaluru): ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ 3 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು (Mobile Phones) ಲಾರಿಯಿಂದ ಕದ್ದೊಯ್ಯಲಾಗಿದೆ. ಅದರ ಚಾಲಕ ಖಾಲಿ ಕಂಟೈನರ್ ಅನ್ನು ರಸ್ತೆಬದಿಯಲ್ಲಿಟ್ಟು ಮೊಬೈಲ್‌ಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
Xiaomi ಕಂಪನಿಗೆ ಸೇರಿದ 3 ಕೋಟಿ ಮೌಲ್ಯದ ಮೊಬೈಲ್ ಫೋನ್‌ಗಳೊಂದಿಗೆ ನವೆಂಬರ್ 22 ರಂದು ದೆಹಲಿಯಿಂದ ಹೊರಟಿದ್ದ ಕಂಟೈನರ್ ಬೆಂಗಳೂರು ತಲುಪಲಿಲ್ಲ.
ಚಿಕ್ಕಬಳ್ಳಾಪುರ (Chikkaballapur) ಸಮೀಪದ ಗೊಲ್ಲಹಳ್ಳಿಯಲ್ಲಿ ಖಾಲಿ ಗಾಡಿ ಕಾಣಿಸಿಕೊಂಡಿದೆ. ಚಾಲಕ ಪತ್ತೆಯಾಗದ ಕಾರಣ ಆತನೇ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಂಪನಿಯ ದೂರಿನ ಮೇರೆಗೆ ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Mobile phones worth Rs 3 crore stolen from Delhi to Bengaluru