ಆಸ್ತಿ ನೋಂದಣಿ ಕಾನೂನಿನಲ್ಲಿ ತಿದ್ದುಪಡಿ! ಜಿಪಿಎ ಆಧಾರಿತ ಆಸ್ತಿಗೆ ಹೊಸ ರೂಲ್ಸ್
ಆಸ್ತಿ ನೋಂದಣಿ ಕಾನೂನಿನಲ್ಲಿ ತಿದ್ದುಪಡಿ ತರಲಾಗಿದ್ದು, ಜಿಪಿಎ ಆಧಾರಿತ ವ್ಯವಹಾರಗಳಿಗೆ ನೋಂದಣಿ ಕಡ್ಡಾಯವಾಗಿದೆ. ಡಿಜಿಟಲ್ ಸಹಿ, ಇ–ಸ್ಟಾಂಪ್ ಬಳಕೆ ಸಹ ಕಡ್ಡಾಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

- ಜಿಪಿಎ ಆಧಾರದ ಆಸ್ತಿ ವ್ಯವಹಾರಕ್ಕೆ ನೋಂದಣಿ ಕಡ್ಡಾಯ
- ಇ–ಸ್ಟಾಂಪ್, ಡಿಜಿಟಲ್ ಸಹಿ ಅನುಷ್ಠಾನ
- ಅಸಲಿ ದಾಖಲೆ ಇಲ್ಲದೇ ನೋಂದಣಿ ಕಡಿವಾಣ
ಬೆಂಗಳೂರು (Bengaluru): ಇದುವರೆಗೆ ಜನರಲ್ ಪವರ್ ಆಫ್ ಅಟಾರ್ನಿ (GPA) ಆಧಾರದಲ್ಲಿ ಆಸ್ತಿ ಮಾರಾಟ (Property Sale) ಅಥವಾ ವರ್ಗಾವಣೆ ಆಗುತ್ತಿದ್ದ ಘಟನೆಗಳಿಗೆ ಇನ್ನು ಮುಂದೆ ಕಡಿವಾಣ ಬರುವಂತೆ ಕಾಣುತ್ತಿದೆ. ಕರ್ನಾಟಕ ಸರ್ಕಾರ (Karnataka Government) ತಿದ್ದುಪಡಿ ಕಾನೂನು ಜಾರಿಗೆ ತಂದಿದ್ದು, ಯಾವುದೇ GPA ಆಧಾರಿತ ಆಸ್ತಿ ವ್ಯವಹಾರಕ್ಕೂ ನೋಂದಣಿ ಕಡ್ಡಾಯವಾಗಿದೆ.
ಇ–ಸ್ಟಾಂಪ್ ಹಾಗೂ ಡಿಜಿಟಲ್ ಸಹಿ ಪದ್ಧತಿಗಳನ್ನು ಮತ್ತಷ್ಟು ಗಟ್ಟಿಯಾಗಿ ಜಾರಿಗೆ ತರುತ್ತಿರುವ ಈ ಹೊಸ ತಿದ್ದುಪಡಿ, ಭ್ರಷ್ಟಾಚಾರ ಹಾಗೂ ದಾಖಲೆ ದುರ್ಬಳಕೆಗೆ ತಡೆಯೊಡ್ಡಲಿದೆ. ಮುಂದಿನ ದಿನಗಳಲ್ಲಿ ಕಾಗದದ ಸ್ಟಾಂಪ್ ಬಿಟ್ಟು, ಸಂಪೂರ್ಣ ಇ–ಸ್ಟಾಂಪ್ ಮೂಲಕ ಪಾವತಿ, ದಾಖಲೆಗಳನ್ನು ನಿರ್ವಹಿಸಬೇಕಾಗುತ್ತದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಮತ್ತೊಂದು ನವ ಶಕ್ತಿ ಸ್ಕೀಮ್
ಈ ಕಾನೂನುಗಳ ಜಾರಿಗೆ ರಾಷ್ಟ್ರಪತಿಯ ಅನುಮೋದನೆ ಈಗಾಗಲೇ ಸಿಕ್ಕಿದ್ದು, ಅದನ್ನು ಕರ್ನಾಟಕ ರಾಜ್ಯ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಇದರಂತೆ ರಾಜ್ಯದ ಎಲ್ಲ ಕಡೆ ಕೂಡ ಈ ನಿಯಮ ಅನ್ವಯವಾಗಲಿದೆ.
ಬಯೋಮೆಟ್ರಿಕ್ ಅಂಶ ಜೋಡಿಸಲ್ಪಟ್ಟ ಡಿಜಿಟಲ್ ಸಹಿಯನ್ನು ಬಳಸುವ ವ್ಯವಸ್ಥೆ ಕಡ್ಡಾಯವಾಗಿದ್ದು, ಅಧೀನ ಅಧಿಕಾರಿಗಳ ಸಹಿ ಆಧಾರ್‌ಗೆ ಲಿಂಕ್ ಆಗಿರಬೇಕು. ಇದರಿಂದಸಹಿ ನಕಲಿ ಮಾಡುವ ಪ್ರಯತ್ನಗಳಿಗೆ ಬ್ರೇಕ್ ಹಾಕಲು ಸಾಧ್ಯವಿದೆ.
ಮೂಲಭೂತ ಹಕ್ಕುಪತ್ರದ ಬದಲಾಗಿ ಈಗಿನಿಂದಲೇ ಎಲ್ಲರಿಗೂ ನೋಂದಾಯಿತ ದಾಖಲೆ ಬೇಕು ಎಂಬುದು ಸ್ಪಷ್ಟ ಸಂದೇಶವಾಗಿದೆ. ಸರ್ಕಾರದಿಂದ ಕೊಡುವ ನಿವೇಶನ, ಗೃಹ ನಿರ್ಮಾಣ ಮಂಡಳಿಯ ಯೋಜನೆಗಳಲ್ಲಿನ ಮನೆಗಳಿಗೂ ಈ ಕಾನೂನು ಅನ್ವಯವಾಗುತ್ತದೆ.
ಈ ಕ್ರಮದಿಂದ ನಕಲಿ ದಾಖಲೆಗಳ ಆಧಾರದಲ್ಲಿ ಜಮೀನು ಮಾರಾಟ (Property) ಮಾಡುವವರಿಗೆ ಗಟ್ಟಿ ಟಾಂಗ್ ಕೊಡುವ ಸಾಧ್ಯತೆ ಇದೆ. ಈ ಮೂಲಕ ಭೂಹಗರಣ, ಆಸ್ತಿ ವಂಚನೆಗೆ ಕಡಿವಾಣ ಹಾಕುವ ಉದ್ದೇಶ ಸರಕಾರದ್ದಾಗಿದೆ.
New Law Mandates Registration for GPA Property Deals




