ಫೆಂಗಲ್ ಚಂಡಮಾರುತ: ಬೆಂಗಳೂರು ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ, ಕೋಲಾರ ಶಾಲಾ ಕಾಲೇಜುಗಳಿಗೆ ರಜೆ
ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ (School and Colleges) ಯಾವುದೇ ರಜೆ ಇಲ್ಲ. ಬೆಂಗಳೂರಿನಲ್ಲಿ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
ಬೆಂಗಳೂರು (Bengaluru): ಫೆಂಗಲ್ ಚಂಡಮಾರುತ (Fengal Cyclone) ಕರ್ನಾಟಕದ ಮೇಲೆ ತನ್ನ ಪ್ರಭಾವ ಬೀರಿದೆ. ಪರಿಣಾಮವಾಗಿ, ಬೆಂಗಳೂರನ್ನು ಒಳಗೊಂಡು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮೋಡದಿಂದ ಕವಿದ ವಾತಾವರಣ ಉಂಟಾಗಿದೆ.
ಕೆಲವು ಕಡೆ ಮಳೆಯಾಗಿದ್ದು, ವಾತಾವರಣವು ತಂಪಾಗಿ ಉಳಿದಿದೆ. ಕೋಲಾರ ಜಿಲ್ಲೆಯ (Kolar District) ಶಾಲಾ-ಕಾಲೇಜುಗಳಿಗೆ ಇಂದು ಒಂದು ದಿನದ ರಜೆ ಘೋಷಿಸಲಾಗಿದೆ.
ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ (School and Colleges) ಯಾವುದೇ ರಜೆ ಇಲ್ಲ. ಬೆಂಗಳೂರಿನಲ್ಲಿ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
ಈ ಕುರಿತು ಬೆಂಗಳೂರಿನ ನಗರ ಜಿಲ್ಲಾಧಿಕಾರಿ ಜಗದೀಶ್ ಪ್ರತಿಕ್ರಿಯಿಸುತ್ತ, ರಜೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಮತ್ತು ಮಕ್ಕಳನ್ನು ಎಚ್ಚರಿಕೆಯಿಂದ ಶಾಲೆಗೆ ಕಳುಹಿಸಲು ಸಲಹೆ ನೀಡಿದ್ದಾರೆ.
No holiday for Bengaluru schools and colleges, holiday for Kolar schools and colleges