ಓಮ್ನಿ ಕಾರು ಪಲ್ಟಿಯಾಗಿ ಬೆಂಕಿ, ಸುಟ್ಟು ಕರಕಲಾದ ಚಾಲಕ! ಚಿಂತಾಮಣಿ ಬಳಿ ಘಟನೆ

Story Highlights

ಓಮ್ನಿ ಕಾರು (Omni Car) ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಸಜೀವ ದಹನವಾಗಿರುವ ಘಟನೆ ನಡೆದಿದೆ.

ಬೆಂಗಳೂರು / ಚಿಂತಾಮಣಿ (Chintamani): ಓಮ್ನಿ ಕಾರು (Omni Car) ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಸಜೀವ ದಹನವಾಗಿರುವ ಘಟನೆ ನಡೆದಿದೆ. ಕಂಚಾರ್ಲಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲಪಲ್ಲಿ ಬಳಿ ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ.

ವಿವರ.. ಚಿಂತಾಮಣಿ ಪಟ್ಟಣದ ಟಿಪ್ಪುನಗರ ಬಡಾವಣೆಯ ಇಬ್ರಾಹಿಂ (44) ಕಾರಿನಲ್ಲಿ ಗೃಹೋಪಯೋಗಿ ವಸ್ತುಗಳನ್ನು (Household Items) ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ವ್ಯಾಪಾರ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ Car ಪಲ್ಟಿಯಾಗಿ ತಕ್ಷಣ ಬೆಂಕಿ ಹೊತ್ತಿಕೊಂಡಿದೆ.

ಬೆಂಗಳೂರು ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ಜನಜಂಗುಳಿ! ಟ್ರಾಫಿಕ್ ಜಾಮ್

ವಾಹನ ಚಲಾಯಿಸುತ್ತಿದ್ದ ಇಬ್ರಾಹಿಂ ಹೊರಬರಲು ಸಾಧ್ಯವಾಗಲಿಲ್ಲ. ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಆ ಪ್ರದೇಶದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದರೂ ಇಬ್ರಾಹಿಂ ಅದಾಗಲೇ ಸಂಪೂರ್ಣ ಸುಟ್ಟು ಕರಕಲಾಗಿದ್ದ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Omni car overturned and caught fire, the driver was burnt to death near Chintamani

Related Stories