BPL Card: ಅನರ್ಹರ ರೇಷನ್ ಕಾರ್ಡ್ ಮಾತ್ರ ರದ್ದು; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
BPL Ration Card : ಸರ್ಕಾರಿ ಕೆಲಸದಲ್ಲಿರುವವರ ಹಾಗೂ ತೆರಿಗೆ ಪಾವತಿಸುವವರ ರೇಷನ್ ಕಾರ್ಡ್ ಮಾತ್ರ ರದ್ದಾಗಲಿದ್ದು ಅರ್ಹ ಕಾರ್ಡುದಾರರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು
BPL Ration Card : ರಾಜ್ಯದಲ್ಲಿ ಅನರ್ಹರ ಪಡಿತರ ಚೀಟಿ (ಬಿಪಿಎಲ್) ರದ್ದತಿಯಾಗಲಿದ್ದು, ಅರ್ಹರ, ಬಡವರ ಪಡಿತರ ಚೀಟಿ ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕನಕದಾಸರ ಜನ್ಮ ದಿನಾಚರಣೆ ನಿಮಿತ್ತ ಸೋಮವಾರ ನಗರದ ಶಾಸಕರ ಭವನದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಮತ್ತು ಜೆಡಿಎಸ್ ಬಿಪಿಎಲ್ ಕಾರ್ಡ್ (BPL Card) ರದ್ದು ಮಾಡುತ್ತಿವೆ ಎಂದು ಆರೋಪಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಬಡವರ ಪಡಿತರ ಚೀಟಿ ರದ್ದತಿ ಇಲ್ಲ. ನಾನು ಮತ್ತೆ ಹೇಳುತ್ತಿದ್ದೇನೆ.. ಅನರ್ಹರ ಕಾರ್ಡ್‌ಗಳನ್ನು ಮಾತ್ರ ತೆಗೆದುಹಾಕಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.
ಸರ್ಕಾರಿ ಕೆಲಸದಲ್ಲಿರುವವರ ಹಾಗೂ ತೆರಿಗೆ ಪಾವತಿಸುವವರ ರೇಷನ್ ಕಾರ್ಡ್ ಮಾತ್ರ ರದ್ದಾಗಲಿದ್ದು ಅರ್ಹ ಕಾರ್ಡುದಾರರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು. ಇನ್ನು ಅನರ್ಹರ ಕಾರ್ಡುಗಳು ಬಿಪಿಎಲ್ ನಿಂದ ಎಪಿಎಲ್ ಗೆ ಬದಲಾವಣೆ ಆಗಲಿದ್ದು, ಈಗಾಗಲೇ ಈ ಕಾರ್ಯ ಚಾಲನೆಯಲ್ಲಿದೆ. ರಾಜ್ಯದ ಹಲವಾರು ಕಾರ್ಡುಗಳು ಈಗಾಗಲೇ ರದ್ದಾಗಿವೆ.
Only ration cards of ineligible people will be cancelled, CM Siddaramaiah clarifies