ಇಂತಹವರ ಬಿಪಿಎಲ್ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲು ಆದೇಶ! ಸರ್ಕಾರದಿಂದ ಹೊಸ ನಿರ್ಧಾರ
ಸ್ತುತ ಹಲವು ಜನರು ತಮಗೆ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತೆ ಇಲ್ಲದೇ ಹೋದರು ಕೂಡ, ಸರ್ಕಾರಕ್ಕೆ ಸುಳ್ಳು ದಾಖಲೆಗಳು ಹಾಗೂ ಸುಳ್ಳು ಮಾಹಿತಿಗಳನ್ನು ನೀಡಿ, ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ.
ನಮ್ಮ ದೇಶದಲ್ಲಿ ಬಡತನದಲ್ಲಿ ಇರುವವರು ಹೆಚ್ಚು ಕಷ್ಟಪಡಬಾರದು, ಅವರಿಗೆ ಆರ್ಥಿಕವಾಗಿ ಹೊರೆ ಆಗಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನೇತೃತ್ವದಲ್ಲಿ ರೇಷನ್ ಕಾರ್ಡ್ ಗಳ (Ration Card) ವಿತರಣೆ ಮಾಡಲಾಗುತ್ತದೆ.
ಹೌದು, ಬಡಿತನದಲ್ಲಿರುವವರಿಗೆ ಎರಡು ಬಗೆಯ ರೇಷನ್ ಕಾರ್ಡ್ ನೀಡಲಾಗುತ್ತದೆ, ಬಡತನದ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ರೇಶನ್ ಕಾರ್ಡ್, ಬಡತನದ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಬಿಪಿಎಲ್ ರೇಶನ್ ಕಾರ್ಡ್ (BPL Ration Card) ಹೊಂದಿರುವವರಿಗೆ ಸರ್ಕಾರದ ಕಡೆಯಿಂದ ಹೆಚ್ಚಿನ ಉಪಯೋಗಗಳು ಸಿಗುತ್ತದೆ. ಅವುಗಳ ಬಗ್ಗೆ ತಿಳಿಯುವುದಾದರೆ, ಬಿಪಿಎಲ್ ರೇಷನ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಉಚಿತ ರೇಷನ್ ಸಿಗುತ್ತದೆ, ಹಲವು ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಸಿಗುತ್ತದೆ, ಸರ್ಕಾರದ ಇನ್ನಿತರ ಯೋಜನೆಗಳ ಸೌಲಭ್ಯ ಕೂಡ ಸಿಗುತ್ತದೆ.
ಇದೆಲ್ಲವನ್ನು ಜನರ ಅನುಕೂಲಕ್ಕಾಗಿ ಸರ್ಕಾರ ಜಾರಿಗೆ ತಂದಿದೆ. ಆದರೆ ಕೆಲವರು ಈ ಸೌಲಭ್ಯದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಹೌದು, ಪ್ರಸ್ತುತ ಹಲವು ಜನರು ತಮಗೆ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತೆ ಇಲ್ಲದೇ ಹೋದರು ಕೂಡ, ಸರ್ಕಾರಕ್ಕೆ ಸುಳ್ಳು ದಾಖಲೆಗಳು ಹಾಗೂ ಸುಳ್ಳು ಮಾಹಿತಿಗಳನ್ನು ನೀಡಿ, ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಸರ್ಕಾರದ ಉಪಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಅಂಥವರನ್ನು ಗುರುತಿಸಿ ಅವರ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡುವ ಕೆಲಸವನ್ನು ಈಗಾಗಲೇ ಸರ್ಕಾರ ಶುರು ಮಾಡಿದ್ದು, ಈವರೆಗೂ ದೇಶದಲ್ಲಿ ಸುಮಾರು 2.41 ಕೋಟಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಇದೇ ಕಾರಣಕ್ಕೆ ಕ್ಯಾನ್ಸಲ್ ಮಾಡಲಾಗಿದೆ.
ಯಾವ ಥರ ಸುಳ್ಳು ಮಾಹಿತಿಗಳನ್ನು ನೀಡಿದರೆ, ನಿಮ್ಮ ರೇಷನ್ ಕಾರ್ಡ್ ಬಂದ್ ಆಗುತ್ತದೆ ಎಂದು ನೋಡುವುದಾದರೆ, ಸರ್ಕಾರಿ ಕೆಲಸ ಇರುವವರು, ಹೆಚ್ಚಿಗೆ ವಾರ್ಷಿಕ ಆದಾಯ ಹೊಂದಿರುವವರು, ಬಡತನದ ರೇಖೆಗಿಂತ ಜಾಸ್ತಿ ಇರಬಹುದಾದಷ್ಟು ಭೂಮಿ ಹೊಂದಿರುವವರು, ಸ್ವಂತಕ್ಕೆ ಕಾರ್ ಅಥವಾ ಇನ್ಯಾವುದೇ ದುಬಾರಿ ವಾಹನ ಹೊಂದಿರುವವರು ಇವರೆಲ್ಲರು ಅನರ್ಹರ ಪಟ್ಟಿಗೆ ಬರುತ್ತಾರೆ. ಆದರೆ ಇಂಥ ಹಲವರು ಸುಳ್ಳು ಮಾಹಿತಿ ಕೊಟ್ಟು, ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ.
ಇದರಿಂದ ಅರ್ಹತೆ ಇವರುವಂಥ ಜನರಿಗೆ ಸಿಗಬೇಕಾದ ಸೌಕರ್ಯ ಸಿಗುತ್ತಿಲ್ಲ, ಹಾಗಾಗಿ ಇಂಥವರನ್ನು ಹುಡುಕಿ ಸರ್ಕಾರ ಇವರ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡುತ್ತಿದೆ, ಹಾಗೆಯೇ ಈ ಥರದ ಕೆಲಸ ಮಾಡಿರುವವರು ತಾವೇ ಕಚೇರಿಗೆ ಹೋಗಿ, ರೇಷನ್ ಕಾರ್ಡ್ ಕೊಟ್ಟು ತಪ್ಪೊಪ್ಪಿಕೊಳ್ಳಬೇಕು ಎಂದು ಕೂಡ ತಿಳಿಸಲಾಗಿದೆ. ಆದರೆ ಸರ್ಕಾರದ ಕೈಗೆ ಸಿಕ್ಕಿ ಹಾಕಿಕೊಂಡರೆ, ಅಂಥವರ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುವುದರ ಜೊತೆಗೆ ಅವರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು.
ಹಾಗೆಯೇ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಮತ್ತೊಂದು ವಿಷಯ, ಈಗಾಗಲೇ ಅನೇಕ ಜನರು ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ, ಇನ್ನಷ್ಟು ಜನರು ಹೊಸದಾಗಿ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ, ಅವರಿಗೆ ರೇಷನ್ ಕಾರ್ಡ್ ವಿತರಣೆ ಆಗೋದು ಶೀಘ್ರದಲ್ಲೇ ಸಾಧ್ಯವಿದೆ ಎಂದು ಸರ್ಕಾರ ತಿಳಿಸಿದೆ. ಆದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಯಾವಾಗ ಶುರುವಾಗುತ್ತದೆ ಎನ್ನುವ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ.
Order to cancel the BPL ration card of such people