7 ಲಕ್ಷಕ್ಕೂ ಹೆಚ್ಚು ಕರ್ನಾಟಕ ರೈತರ ಪಿಎಂ ಕಿಸಾನ್ ಹಣ ರದ್ದು! ಇಲ್ಲಿದೆ ಪಟ್ಟಿ

ಪ್ರಧಾನಮಂತ್ರಿ ಕಿಸಾನ್ ಯೋಜನೆಯ 20ನೇ ಕಂತು ಬಿಡುಗಡೆ ಆರಂಭವಾದರೂ, ಕರ್ನಾಟಕದ ಲಕ್ಷಾಂತರ ರೈತರು ಹಣದಿಂದ ವಂಚಿತರಾಗಿದ್ದಾರೆ. e-KYC ಸಮಸ್ಯೆ, ಆಧಾರ್ ಲಿಂಕ್ ಕೊರತೆ ಪ್ರಮುಖ ಕಾರಣಗಳು

  • 7.19 ಲಕ್ಷ ರೈತರ ಖಾತೆ ಸ್ಥಗಿತಗೊಂಡಿದ್ದು ಕೇಂದ್ರದಿಂದ ದೃಢೀಕರಣ
  • ಹಣ ಬಂದಿಲ್ಲದರೆ e-KYC ಮತ್ತು ಆಧಾರ್ ಲಿಂಕ್ ತಕ್ಷಣ ಪರಿಶೀಲಿಸಿ
  • ನೀವು ಅರ್ಹರ ಪಟ್ಟಿಯಲ್ಲಿದ್ದೀರಾ? ವೆಬ್‌ಸೈಟ್‌ನಲ್ಲಿ ತಕ್ಷಣ ಚೆಕ್ ಮಾಡಿ

ಬೆಂಗಳೂರು (Bengaluru): ಕೇಂದ್ರದ ಪ್ರಮುಖ ರೈತ ನೆರವು ಯೋಜನೆ ‘ಪಿಎಂ-ಕಿಸಾನ್’ (PM-KISAN) 20ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದೆ. ಆದರೆ ಈ ವೇಳೆ Karnataka PM-Kisan ಯೋಜನೆಯಡಿಯಲ್ಲಿ 7.19 ಲಕ್ಷ ರೈತರ ಖಾತೆಗಳನ್ನು ‘ಅನರ್ಹ’ ಎಂದು ಗುರುತಿಸಿ ಪಾವತಿ ಸ್ಥಗಿತಗೊಳಿಸಲಾಗಿದೆ ಎಂಬುದು ಕೇಂದ್ರ ಕೃಷಿ ಸಚಿವಾಲಯದ ಅಧಿಕೃತ ಮಾಹಿತಿ.

ಹೌದು, ಕರ್ನಾಟಕದ ಲಕ್ಷಾಂತರ ರೈತರು ಹಣದಿಂದ ವಂಚಿತರಾಗಿದ್ದಾರೆ. e-KYC ಸಮಸ್ಯೆ, ಆಧಾರ್ ಲಿಂಕ್ ಕೊರತೆ ಸೇರಿದಂತೆ ಇವೇ ಪ್ರಮುಖ ಕಾರಣಗಳು.

ಇದನ್ನೂ ಓದಿ: ತುಮಕೂರು, ಅರಸೀಕೆರೆ, ಬೆಂಗಳೂರು to ತಿರುಪತಿಗೆ ಹೊಸ ರೈಲು, ಇಲ್ಲಿದೆ ವೇಳಾಪಟ್ಟಿ

ನೀವು ಈ ಪಟ್ಟಿಯಲ್ಲಿ ಇದ್ದೀರಾ?

2020ರಿಂದ 2025ರ ಅವಧಿಯವರೆಗೆ ವಿವಿಧ ಕಂತುಗಳಲ್ಲಿ ಕರ್ನಾಟಕದ ರೈತರಿಗೆ ₹1,033 ಕೋಟಿ ರಿಂದ ₹897 ಕೋಟಿ ವರೆಗೆ ಹಣ ಪಾವತಿಯಾದರೂ, ಈ ಗಡಿಯಲ್ಲಿ ಸುಮಾರು 7.19 ಲಕ್ಷ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಲ್ಲಿ 5ನೇ ಕಂತಿನಿಂದ 19ನೇ ಕಂತು ವರೆಗೆ ಅನೇಕರನ್ನು ಅನರ್ಹಗೊಳಿಸಲಾಗಿದೆ.

ಯಾರ ಖಾತೆ ಸ್ಥಗಿತವಾಯಿತು ಮತ್ತು ಏಕೆ?

  • ಆದಾಯ ತೆರಿಗೆ ಪಾವತಿದಾರರು (tax payers) – ವರ್ಷದ ಆದಾಯ ₹2.5 ಲಕ್ಷ ಮೀರಿದರೆ ಯೋಜನೆಗೆ ಅರ್ಹತೆ ಇಲ್ಲ
  • ಇ-ಕೆವೈಸಿ (e-KYC) ಪೂರೈಸದವರು – OTP ಅಥವಾ ಬಯೋಮೆಟ್ರಿಕ್ ಮೂಲಕದ ಖಾತೆ ದೃಢೀಕರಣ ಅಗತ್ಯ
  • ಆಧಾರ್ ಜೋಡಣೆ ಇಲ್ಲದವರು – ಬ್ಯಾಂಕ್‌ ಖಾತೆಗೆ ಸರಿಯಾದ ಆಧಾರ್ ಲಿಂಕ್ ಇರಬೇಕು
  • ಸರ್ಕಾರಿ ನೌಕರರು/ಪಿಂಚಣಿದಾರರು – ಈ ಯೋಜನೆ ಕೇವಲ ಸಣ್ಣ ರೈತರಿಗೆ ಮಾತ್ರ
  • ಭೂ ದಾಖಲೆಗಳ ಕೊರತೆ – ರೈತನ ಹೆಸರಿನಲ್ಲಿ ಜಮೀನು ದಾಖಲೆ ಇರಬೇಕು

ಇದನ್ನೂ ಓದಿ: ಜೂನ್ 30ರಂದು ಬೆಂಗಳೂರು ಭಾಗದ 30ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ಕಡಿತ

ಪಿಎಂ ಕಿಸಾನ್ ಯೋಜನೆ

ಅರ್ಹ ರೈತರಿಗೂ ತೊಂದರೆ ಏಕೆ?

ಇದರಲ್ಲಿ ಆಘಾತಕರ ಸಂಗತಿ ಎಂದರೆ, ಅರ್ಹ ರೈತರೂ ಕೂಡ ಹಲವರು ತಾಂತ್ರಿಕ ಕಾರಣಗಳಿಂದಾಗಿ ಹಣ ಪಡೆಯಲಾಗದೆ ಆಗಿದ್ದಾರೆ. e-KYC ಪುನಃ ಪೂರೈಸದವರು, ಆಧಾರ್ ಲಿಂಕ್ ತೊಂದರೆ, ಅಥವಾ ತಂದೆ ಹೆಸರು/ಉಪನಾಮದ ಭಿನ್ನತೆಗಳಿಂದ ನಿಜವಾದ ಫಲಾನುಭವಿಗಳು ಹಣದಿಂದ ವಂಚಿತರಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಆಸ್ತಿ ಮಾಲೀಕರೇ, ಈ ದಾಖಲೆಗಳು ಇದ್ರೆ ಸ್ಥಳದಲ್ಲೇ ಸಿಗುತ್ತೆ ಇ-ಖಾತಾ

ಪರಿಹಾರವೇನು? ಇಲ್ಲಿದೆ ಉತ್ತರ

  1. e-KYC ಪೂರೈಸಿ – ಆಧಾರ್ OTP ಅಥವಾ CSC ಮೂಲಕ ಬಯೋಮೆಟ್ರಿಕ್
  2. ಆಧಾರ್ ಲಿಂಕ್ ಪರಿಶೀಲನೆ – ಬ್ಯಾಂಕ್‌ ಖಾತೆಗೆ ಆಧಾರ್ ಲಿಂಕ್ ಆಗಿದೆಯೆ ನೋಡಿ
  3. ಭೂ ದಾಖಲೆ ಅಪ್‌ಡೇಟ್ – ಗ್ರಾಮ ಮಟ್ಟದ ಅಧಿಕಾರಿಗೆ ದಾಖಲೆ ಸಲ್ಲಿಸಿ
  4. ತಪ್ಪು ಮಾಹಿತಿ ತಿದ್ದುಪಡಿ – ಹೆಸರು, ಪಿತೃನಾಮ, ಬ್ಯಾಂಕ್ ವಿವರಗಳ ತಿದ್ದುಪಡಿ

ಇದನ್ನೂ ಓದಿ: ಕರ್ನಾಟಕ ರೈತರಿಗೆ ಮಿನಿ ಟ್ರ್ಯಾಕ್ಟರ್ ಸೇರಿ ಯಂತ್ರೋಪಕರಣಕ್ಕೆ ಶೇ.50 ರಿಯಾಯಿತಿ

PM Kisan Yojana

ಹೀಗೆ ಪಟ್ಟಿ ಪರಿಶೀಲಿಸಿ

  • PM-KISAN ವೆಬ್‌ಸೈಟ್‌ಗೆ ಭೇಟಿ ನೀಡಿ
  • Beneficiary List ಆಯ್ಕೆಮಾಡಿ
  • ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ
  • Get Report ಕ್ಲಿಕ್ ಮಾಡಿದರೆ ಅರ್ಹರ ಪಟ್ಟಿ ಬರುತ್ತದೆ

Over 7.19 Lakh Karnataka Farmers Barred from PM-KISAN Installment

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories