ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಹಿಂದೆ ಪಾಕಿಸ್ತಾನಿ ಉಗ್ರರ ಕೈವಾಡ!
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಹಿಂದೆ ಪಾಕಿಸ್ತಾನಿ ಉಗ್ರರ ಕೈವಾಡವಿದೆ ಎಂದು ಎನ್‌ಐಎ ಅಧಿಕಾರಿಗಳು ಬೆಂಗಳೂರಿನ ಎನ್‌ಐಎ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದಾರೆ.
ಬೆಂಗಳೂರು (bengaluru): ದೇಶದಾದ್ಯಂತ ಸಂಚಲನ ಮೂಡಿಸಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram cafe) ಬಾಂಬ್ ಸ್ಫೋಟದ ಹಿಂದೆ ಪಾಕಿಸ್ತಾನಿ ಉಗ್ರರ ಕೈವಾಡವಿದೆ ಎಂದು ಎನ್‌ಐಎ ಅಧಿಕಾರಿಗಳು ಬೆಂಗಳೂರಿನ ಎನ್‌ಐಎ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದಾರೆ. ಶಂಕಿತ ಪಾಕಿಸ್ತಾನಿ ಭಯೋತ್ಪಾದಕ ಪೈಜಾಲ್ ಪ್ರಸ್ತುತ ಪಾಕಿಸ್ತಾನದಲ್ಲಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಈ ಪ್ರಕರಣದಲ್ಲಿ ಮುಸ್ಸಾವಿರ್ ಹುಸೇನ್ ಶಹಜೀಬ್, ಅಬ್ದುಲ್ ಮತೀನ್ ಅಹ್ಮದ್ ತಾಹಾ, ಮಜ್ ಮುನೀರ್ ಅಹ್ಮದ್ ಮತ್ತು ಮುಝಮ್ಮಿಲ್ ಷರೀಫ್ ಅವರನ್ನು ಆರೋಪಿಗಳೆಂದು ಎನ್‌ಐಎ ಗುರುತಿಸಿದೆ.
ಘಟನೆ ನಡೆದ 42 ದಿನಗಳ ಬಳಿಕ ಎನ್‌ಐಎ ಆರೋಪಿಯನ್ನು ಬಂಧಿಸಿದೆ. ಮಂಗಳೂರಿನ ಕುಕ್ಕರ್ ಸ್ಫೋಟದ ನಂತರ ಮುಸ್ಸಾವಿರ್ ಶಾಜಿಬ್ ಮತ್ತು ತಾಹಾ ನಾಪತ್ತೆಯಾಗಿದ್ದರು. ಕೆಲವು ವರ್ಷಗಳ ನಂತರ ಮತ್ತೆ ಬೆಂಗಳೂರಿಗೆ ಬಂದರು. ಈ ವೇಳೆ ಅವರು ಮುಝಮ್ಮಿಲ್ ಷರೀಫ್ ಅವರನ್ನು ಭೇಟಿಯಾದರು.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಾಂಬ್ ಇಡಲು ಶಹಜೀಬ್ ಯೋಜನೆ ರೂಪಿಸಿದ್ದ. ಹೆಚ್ಚಿನ ಪೊಲೀಸ್ ಭದ್ರತೆಯಿದ್ದ ಕಾರಣ ಬಿಜೆಪಿ ಕಚೇರಿಯ ಹಿಂದೆ ಬಾಂಬ್ ಇಟ್ಟು 90 ನಿಮಿಷಗಳ ಕಾಲ ಟೈಮರ್ ಹಾಕಲಾಗಿತ್ತು. ಆದರೆ ಬಾಂಬ್ ಸ್ಫೋಟಗೊಳ್ಳಲಿಲ್ಲ. ಬಳಿಕ ಶಹಜೀಬ್ ಚೆನ್ನೈಗೆ ಪರಾರಿಯಾಗಿದ್ದ.
ಬಳಿಕ ಬೆಂಗಳೂರಿನ (Bengaluru) ಜನನಿಬಿಡ ಪ್ರದೇಶದಲ್ಲಿ ಬಾಂಬ್ ಇಡಲು ಯೋಜನೆ ರೂಪಿಸಿದ್ದರು. ಶಹಜೀಬ್ ಫೆಬ್ರವರಿ ತಿಂಗಳಲ್ಲಿ ಐಇಡಿ ಬಾಂಬ್ ತಯಾರಿಸಿ ಅದೇ ತಿಂಗಳ 29 ರಂದು ಚೆನ್ನೈನಿಂದ ಬೆಂಗಳೂರು ತಲುಪಿದ್ದ. ಕೃಷ್ಣರಾಜಪುರಂ (Krishanarajapuram) ಟಿನ್ ಫ್ಯಾಕ್ಟರಿಯಲ್ಲಿ ಇಳಿದು ಅಲ್ಲಿಂದ ಕುಂದಲಹಳ್ಳಿಗೆ ತೆರಳಿ ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದರು ಎಂದು ಎನ್ ಐಎ ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.
Pakistani terrorists are behind the Bengaluru Rameshwaram cafe bomb blast