Bengaluru: ಬೆಂಗಳೂರು ಮಲ್ಲೇಶ್ವರಂನಲ್ಲಿ 7 ರಸ್ತೆಗಳಿಗೆ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿ

Pay and Parking: ಸಂಚಾರ ದಟ್ಟಣೆ ನಿಯಂತ್ರಣ ಮತ್ತು ರಸ್ತೆಬದಿ ಅಕ್ರಮ ಪಾರ್ಕಿಂಗ್ ಕಡಿತಗೊಳಿಸುವ ಉದ್ದೇಶದಿಂದ ಮಲ್ಲೇಶ್ವರಂನ ಏಳು ಪ್ರಮುಖ ರಸ್ತೆಗಳಲ್ಲಿ ಶೀಘ್ರವೇ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಪಾಲಿಕೆ ತಿಳಿಸಿದೆ

  • ಮಲ್ಲೇಶ್ವರಂನಲ್ಲಿ ಪೇ ಅಂಡ್ ಪಾರ್ಕಿಂಗ್ ಜಾರಿ
  • ಬೆಂಗಳೂರು ಅಕ್ರಮ ಪಾರ್ಕಿಂಗ್‌ಗೆ ಬ್ರೇಕ್
  • ಪಾರ್ಕಿಂಗ್ ಗೆ ಗಂಟೆ ಆಧಾರಿತ ದರ ನಿಗದಿ

ಬೆಂಗಳೂರು (Bengaluru): ಬೆಂಗಳೂರು ನಗರದ ಜನಪ್ರಿಯ ವ್ಯಾಪಾರ ಕೇಂದ್ರ ಮಲ್ಲೇಶ್ವರಂನಲ್ಲಿ ಸಂಚಾರ ಸಮಸ್ಯೆಗೆ ಪರಿಹಾರವಾಗಿ ಪೇ ಅಂಡ್ ಪಾರ್ಕಿಂಗ್ (Pay and Parking) ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ವಾಹನಗಳ ಅಕ್ರಮ ನಿಲುಗಡೆ ನಿಯಂತ್ರಿಸಿ ರಸ್ತೆ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಪಶ್ಚಿಮ ನಗರ ಪಾಲಿಕೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಮಲ್ಲೇಶ್ವರಂ ಪ್ರದೇಶವು ಶಾಪಿಂಗ್ ಹಬ್ ಆಗಿರುವುದರಿಂದ ದಿನದ ಹೆಚ್ಚಿನ ಸಮಯ ವಾಹನ ದಟ್ಟಣೆ ಕಂಡುಬರುತ್ತಿದೆ. ನೋ ಪಾರ್ಕಿಂಗ್ ಪ್ರದೇಶಗಳಲ್ಲಿಯೇ ವಾಹನ ನಿಲ್ಲಿಸುವುದರಿಂದ ಜನಸಂಚಾರಕ್ಕೂ ವಾಹನ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ.

ಈ ಹಿನ್ನೆಲೆ ಏಳು ಪ್ರಮುಖ ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆಗೆ ಟೆಂಡರ್ ಆಹ್ವಾನಿಸಲಾಗಿದೆ.

ಪಾಲಿಕೆ ಮಾಹಿತಿ ಪ್ರಕಾರ, ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ 15 ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 30 ರೂ. ದರ ನಿಗದಿಪಡಿಸಲಾಗಿದೆ. ದಿನಪೂರ್ತಿ ವಾಹನ ನಿಲ್ಲಿಸುವವರಿಗೆ ಡೇ ಪಾಸ್ ವ್ಯವಸ್ಥೆ ಪರಿಚಯಿಸುವ ಕುರಿತು ಕೂಡ ಚರ್ಚೆ ನಡೆಯುತ್ತಿದೆ.

ಆರಂಭಿಕ ಹಂತದಲ್ಲಿ ಸಂಪಿಗೆ ರಸ್ತೆ, ಮಲ್ಲೇಶ್ವರಂ 18ನೇ ರಸ್ತೆ, 15ನೇ ರಸ್ತೆ, 11ನೇ ರಸ್ತೆ, 8ನೇ ರಸ್ತೆ, 4ನೇ ಮುಖ್ಯ ರಸ್ತೆ ಹಾಗೂ 2ನೇ ಮುಖ್ಯ ರಸ್ತೆಯಲ್ಲಿ ಪೇ ಅಂಡ್ ಪಾರ್ಕಿಂಗ್ ಜಾರಿಗೆ ಬರಲಿದೆ. ಈ ಕ್ರಮದಿಂದ ಮಲ್ಲೇಶ್ವರಂನ ಸಂಚಾರ ಸಮಸ್ಯೆ ಗಮನಾರ್ಹವಾಗಿ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories