ಪ್ರಧಾನಿ ಮೋದಿ ಅವರ ಬೆಂಗಳೂರು ಭೇಟಿ ಹೇಗಿತ್ತು ಗೊತ್ತಾ? ಇಲ್ಲಿದೆ ಫುಲ್ ಡೇ ರಿಪೋರ್ಟ್

ಭಾನುವಾರದ ಪ್ರಧಾನಿ ಮೋದಿ ಅವರ ಬೆಂಗಳೂರು ಭೇಟಿಯಲ್ಲಿ ಮೂರು ಪ್ರಮುಖ ಕಾರ್ಯಕ್ರಮಗಳು ನೆರವೇರಿದವು. ವಂದೇ ಭಾರತ್ ರೈಲು ಚಾಲನೆ, ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಮತ್ತು 3ನೇ ಹಂತ ಶಂಕುಸ್ಥಾಪನೆ ನಗರದಲ್ಲಿ ಉತ್ಸಾಹ ಮೂಡಿಸಿತು.

  • ವಂದೇ ಭಾರತ್ ರೈಲು ಮತ್ತು ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ
  • 3ನೇ ಹಂತದ ಮೆಟ್ರೋ ಯೋಜನೆಗೆ ಶಂಕುಸ್ಥಾಪನೆ
  • ಕರ್ನಾಟಕಕ್ಕೆ ರೈಲ್ವೆ ನಿಧಿಯಲ್ಲಿ ಭಾರೀ ಹೆಚ್ಚಳ

ಬೆಂಗಳೂರು (Bengaluru): ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಒಂದು ದಿನದ ಬೆಂಗಳೂರು ಭೇಟಿಯು ಉತ್ಸಾಹಭರಿತವಾಗಿತ್ತು. ಬೆಳಿಗ್ಗೆ ಅವರು ವಿಶೇಷ ವಿಮಾನದಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ (HAL Airport) ಆಗಮಿಸಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮೇಖ್ರಿ ವೃತ್ತ ತಲುಪಿದರು.

ಅಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಕೇಸರಿ ಧ್ವಜಗಳೊಂದಿಗೆ ಭರ್ಜರಿ ಸ್ವಾಗತ ನೀಡಿದರು. ನಗರದಲ್ಲಿನ ಪ್ರಮುಖ ವೃತ್ತಗಳು ಮತ್ತು ರಸ್ತೆಗಳು ಮೋದಿ ಫ್ಲೆಕ್ಸಿ ಬ್ಯಾನರ್‌ಗಳಿಂದ ಕಂಗೊಳಿಸುತ್ತಿದ್ದವು.

ಮೇಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮೋದಿ, ಬೆಂಗಳೂರು–ಬೆಳಗಾವಿ (Bengaluru-Belagavi) ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದರು. ಇದೇ ವೇಳೆ ಅಮೃತಸರ–ಶ್ರೀಮಾತಾ ವೈಷ್ಣೋದೇವಿ ಕತ್ರಾ ಹಾಗೂ ನಾಗ್ಪುರ–ಪುಣೆ ನಡುವಿನ ವಂದೇ ಭಾರತ್ ಸೇವೆಗಳಿಗೂ ಚಾಲನೆ ನೀಡಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ 3 ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಈ ಹೊಸ ಸೇವೆಗಳು ಕರ್ನಾಟಕ ಹಾಗೂ ಇತರ ರಾಜ್ಯಗಳ ಪ್ರಯಾಣಿಕರಿಗೆ ವೇಗದ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸಲಿದೆ.

ಮೆಟ್ರೋ ಉದ್ಘಾಟನೆಯ ಭಾಗವಾಗಿ ಪ್ರಧಾನಿ ಆರ್‌ವಿ ರಸ್ತೆ–ರಾಗಿಗುಡ್ಡ ನಿಲ್ದಾಣದಲ್ಲಿ ಹಳದಿ ಮಾರ್ಗಕ್ಕೆ ಚಾಲನೆ ನೀಡಿ, ಗಣ್ಯರೊಂದಿಗೆ ಮೆಟ್ರೋ ರೈಲಿನಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸಿದರು.

ರೈಲಿನಲ್ಲಿ ಮಕ್ಕಳೊಂದಿಗೆ ಮಾತನಾಡಿ, ಮಹಿಳೆಯರೊಂದಿಗೆ ನಗೆಮಿಶ್ರಿತ ಸಂಭಾಷಣೆ ನಡೆಸಿದರು. “ಉಚಿತ ಬಸ್ ಇಷ್ಟವಾ ಅಥವಾ ಮೆಟ್ರೋ?” ಎಂದು ಕೇಳಿದಾಗ, ಮಹಿಳೆಯರು ಮೆಟ್ರೋ ಇಷ್ಟವಂತೆ ಹೇಳಿದ್ದಾರೆ. ಇದನ್ನು ಕೇಳಿ ಮೋದಿ, ಸಿಎಂ ಮತ್ತು ಡಿಸಿಎಂ ನಕ್ಕರು.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಒಟ್ಟಿಗೆ 4000 ಜಮಾ, ಮಹಿಳೆಯರಿಗೆ ಡಬಲ್ ಧಮಾಕಾ! ನಿಮಗೆ ಬಂದಿಲ್ವಾ

ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಸಭಾಂಗಣದಲ್ಲಿ, ಮೋದಿ ಮೆಟ್ರೋ 3ನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. 44.65 ಕಿ.ಮೀ ಉದ್ದದ ಈ ಹಂತಕ್ಕೆ 15 ಸಾವಿರ ಕೋಟಿ ರೂ. ವೆಚ್ಚವಾಗಲಿದ್ದು, ಜೆಪಿ ನಗರ–ಕೆಂಪಾಪುರ ಮತ್ತು ಹೊಸಹಳ್ಳಿ–ಕಡಬಗೆರೆ ಮಾರ್ಗಗಳಲ್ಲಿ ನಿರ್ಮಾಣ ನಡೆಯಲಿದೆ.

ಮೆಟ್ರೋ ಕಾರ್ಯಕ್ರಮದಲ್ಲಿ ಮಾತನಾಡಿದ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್, ಕರ್ನಾಟಕಕ್ಕೆ ರೈಲ್ವೆ ನಿಧಿ 2014ರ ಹಿಂದಿನ 835 ಕೋಟಿ ರೂ.ಗಳಿಂದ ಈಗ 7,564 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಹೇಳಿದರು. 61 ರೈಲು ನಿಲ್ದಾಣ ಅಭಿವೃದ್ಧಿ, 123 ಫ್ಲೈಓವರ್ ಹಾಗೂ ಅಂಡರ್‌ಪಾಸ್‌ಗಳ ನಿರ್ಮಾಣ, ಮತ್ತು ವಿದ್ಯುದ್ದೀಕರಣ ಕಾಮಗಾರಿಗಳು ವೇಗವಾಗಿ ಸಾಗುತ್ತಿವೆ ಎಂದರು.

ಸಿಎಂ ಸಿದ್ದರಾಮಯ್ಯ, ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಹೆಚ್ಚು ಹಣ ಖರ್ಚು ಮಾಡಿದೆ ಎಂದು ಹೇಳಿ, 2030ರ ವೇಳೆಗೆ 220 ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣ ಗುರಿ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು ಕರ್ನಾಟಕಕ್ಕೂ ನಿಧಿಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

PM Modi Bengaluru Visit, Full Day Report

English Summary▼

TRENDING ARTICLES1 / 3
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories