PM Modi Bengaluru Visit Today: ಪ್ರಧಾನಿ ಮೋದಿ ಇಂದು ಬೆಂಗಳೂರು ಭೇಟಿ, ಕೆಆರ್ ಪುರಂ-ವೈಟ್‌ಫೀಲ್ಡ್ ನಡುವೆ ಮೆಟ್ರೋ ರೈಲು ಸೇವೆ ಉದ್ಘಾಟನೆ
PM Modi Bengaluru Visit Today: ಪ್ರಧಾನಿ ಮೋದಿ (PM Modi) ಅವರು ಇಂದು (ಶನಿವಾರ) ಬೆಂಗಳೂರಿಗೆ ಭೇಟಿ (Bengaluru Visit) ನೀಡಲಿದ್ದು, ಕೆಆರ್ ಪುರಂ-ವೈಟ್‌ಫೀಲ್ಡ್ (KR Puram Whitefield Metro Service) ನಡುವೆ ಮೆಟ್ರೋ ರೈಲು ಸೇವೆಯನ್ನು ಉದ್ಘಾಟಿಸಲಿದ್ದಾರೆ.
ಬೆಂಗಳೂರು (Bengaluru): ಪ್ರಧಾನಿ ಮೋದಿ (PM Modi) ಅವರು ಇಂದು (ಶನಿವಾರ) ಬೆಂಗಳೂರಿಗೆ ಭೇಟಿ (Bengaluru Visit Today) ನೀಡಲಿದ್ದು, ಕೆಆರ್ ಪುರಂ-ವೈಟ್‌ಫೀಲ್ಡ್ (KR Puram Whitefield Metro Service) ನಡುವೆ ಮೆಟ್ರೋ ರೈಲು ಸೇವೆಯನ್ನು ಉದ್ಘಾಟಿಸಲಿದ್ದಾರೆ (Inauguration).
ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಜನತಾ ದಳ(ಎಸ್) ಪಕ್ಷಗಳು ಈ ಚುನಾವಣೆಯನ್ನು ಎದುರಿಸಲು ಈಗಾಗಲೇ ಸಕ್ರಿಯವಾಗಿ ಸಿದ್ಧತೆ ನಡೆಸಿವೆ.
ಮೂರೂ ಪಕ್ಷಗಳು ಯಾತ್ರೆ ಹೆಸರಲ್ಲಿ ಪ್ರವಾಸ ಮಾಡಿ ಜನಬೆಂಬಲ ಪಡೆಯಲು ಹವಣಿಸುತ್ತಿವೆ. ಈ ಯಾತ್ರೆಗಳು ಬಹುತೇಕ ಮುಕ್ತಾಯಗೊಂಡಿವೆ. ಜನತಾದಳ (ಎಸ್) ಈಗಾಗಲೇ 93 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಕಳೆದ ಜನವರಿಯಿಂದ ಈ ಬಾರಿಯ ವಿಧಾನಸಭಾ ಚುನಾವಣೆಗೆ ಜನಬೆಂಬಲ ಗಳಿಸುವ ಸಲುವಾಗಿ ಪ್ರಧಾನಿ ಮೋದಿ ಕಾಲಕಾಲಕ್ಕೆ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಇದುವರೆಗೆ 6 ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ, ಧಾರವಾಡ ಐ.ಐ.ಟಿ. ಕ್ಯಾಂಪಸ್ ಸೇರಿದಂತೆ ಸಾವಿರಾರು ಕೋಟಿ ರೂಪಾಯಿಗಳ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಮಂಡ್ಯ, ಬೆಳಗಾವಿ, ಧಾರವಾಡ ಮುಂತಾದ ಕಡೆ ‘ರೋಡ್ ಶೋ’ ಕೂಡ ನಡೆಸಿದ್ದಾರೆ.
ಪ್ರಧಾನಿ ಮೋದಿ ಬೆಂಗಳೂರು ಭೇಟಿ
ಈ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿ ಇಂದು (ಶನಿವಾರ) 7ನೇ ಬಾರಿಗೆ ಕರ್ನಾಟಕಕ್ಕೆ (Karnataka) ಬರುತ್ತಿದ್ದಾರೆ. ಬೆಳಗ್ಗೆ ಎಚ್‌ಎಎಲ್ ಖಾಸಗಿ ವಿಮಾನದಲ್ಲಿ ಬೆಂಗಳೂರಿಗೆ (Bangalore) ಬರಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ (Chikkaballapur) ಆಗಮಿಸಿ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕಾಲೇಜು ಉದ್ಘಾಟನೆ ಮಾಡಲಿದ್ದಾರೆ.
ನಂತರ ಬೆಂಗಳೂರಿಗೆ ಬಂದು ಇಲ್ಲಿ ಕೆಆರ್‌ಪುರಂ-ವೈಟ್‌ಫೀಲ್ಡ್ (KR Puram-Whitefield) ನಡುವೆ ಸುಮಾರು 13 ಕಿ.ಮೀ ದೂರದ ಮೆಟ್ರೊ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ. ಆ ಬಳಿಕ ಪ್ರಧಾನಿ ಮೋದಿ ದಾವಣಗೆರೆಗೆ ತೆರಳಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್
ಕಾರ್ಯಕ್ರಮ ಮುಗಿಸಿ ಶಿವಮೊಗ್ಗಕ್ಕೆ ತೆರಳಿ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
PM Modi Bengaluru Visit Today, inaugurate the Metro Rail service between KR Puram-Whitefield