ಉಚಿತ ವಿದ್ಯುತ್ ಜೊತೆಗೆ ಹಣ ಕೂಡ ಸರ್ಕಾರವೇ ಕೊಡುವ ಬಂಪರ್ ಯೋಜನೆ
ಪ್ರಧಾನಮಂತ್ರಿ ಸೂರ್ಯಘರ್ ಮುಕ್ತ್ ಬಿಜಿಲಿ ಯೋಜನೆಯಡಿ ಸಬ್ಸಿಡಿ ಸಹಿತ ಸೌರ ಪ್ಯಾನಲ್ ಅಳವಡಿಸಲು ಅವಕಾಶ. ಉಚಿತ ವಿದ್ಯುತ್, ಕಡಿಮೆ ಖರ್ಚು, ಹೆಚ್ಚುವರಿ ಆದಾಯ ಲಭಿಸುವ ಯೋಜನೆಯ ವಿವರಗಳು ಇಲ್ಲಿವೆ.

- ಸೂರ್ಯಘರ್ ಯೋಜನೆ ಮೂಲಕ ಉಚಿತ ವಿದ್ಯುತ್ ಸೌಲಭ್ಯ
- ಸಬ್ಸಿಡಿ ಸಹಿತ ಸೌರ ಪ್ಯಾನಲ್ ಅಳವಡಿಸಲು ಅವಕಾಶ
- ವಿದ್ಯುತ್ ಬಿಲ್ ಉಳಿತಾಯ, ಹೆಚ್ಚುವರಿ ಆದಾಯ ಅವಕಾಶ
ಬೆಂಗಳೂರು (Bengaluru): ದೇಶದ ಉಜ್ವಲ ಭವಿಷ್ಯದತ್ತ ಮತ್ತೊಂದು ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, 2024ರ ಫೆಬ್ರವರಿಯಿಂದ ‘ಪಿಎಂ ಸೂರ್ಯಘರ್ ಮುಕ್ತ್ ಬಿಜಿಲಿ’ ಯೋಜನೆಯನ್ನು ಜಾರಿಗೊಳಿಸಿದೆ.
ಈ ಯೋಜನೆಯಡಿ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಪ್ಯಾನಲ್ (Solar Panel) ಅಳವಡಿಸಿ ಉಚಿತ ವಿದ್ಯುತ್ (Free Electricity) ಪಡೆಯಬಹುದು. ಸರ್ಕಾರದ ಸಬ್ಸಿಡಿ ಸಹಿತ ಈ ಯೋಜನೆಯು ಜನರು ವಿದ್ಯುತ್ ಸ್ವಾವಲಂಬನೆ ಸಾಧಿಸುವಂತೆ ಪ್ರೋತ್ಸಾಹಿಸುತ್ತಿದೆ.
ಯೋಜನೆಯ ಸೌಲಭ್ಯಗಳು:
ಮನೆಯ ಮೇಲೆ ಸೋಲಾರ್ ಪ್ಯಾನಲ್ (Solar Panel) ಅಳವಡಿಸುವ ಮೂಲಕ, ಉಪಯೋಗಿಸಬಹುದಾದಷ್ಟು ವಿದ್ಯುತ್ ಉಚಿತವಾಗಿ ಲಭಿಸುತ್ತದೆ. ಹೆಚ್ಚು ಉತ್ಪಾದನೆಯಾಗುವ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ಆರ್ಥಿಕ ಲಾಭವೂ ಪಡೆದುಕೊಳ್ಳಬಹುದು.
ಬೆಸ್ಕಾಂನ ಮಾಹಿತಿ ಪ್ರಕಾರ, 1, 2, 3 ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲ್ಯಾಂಟ್‌ಗಳಿಗೆ ಸಬ್ಸಿಡಿ (Solar Plant Subsidy) ಲಭ್ಯವಿದ್ದು, 5 ವರ್ಷಗಳ ಪಾವತಿ ಬಳಿಕ 20 ವರ್ಷಗಳ ವರೆಗೆ ಉಚಿತ ವಿದ್ಯುತ್ ಪಡೆಯಬಹುದು.
ಸಬ್ಸಿಡಿ ವಿವರ:
- 1 ಕಿಲೋವ್ಯಾಟ್ – ₹30,000 ಸಬ್ಸಿಡಿ
- 2 ಕಿಲೋವ್ಯಾಟ್ – ₹60,000 ಸಬ್ಸಿಡಿ
- 3 ಕಿಲೋವ್ಯಾಟ್ – ₹78,000 ಸಬ್ಸಿಡಿ
- ವಸತಿ ಸಮುಚ್ಚಯಗಳಿಗೆ 500 ಕಿಲೋವ್ಯಾಟ್ ವರೆಗೆ ₹18,000 ಸಬ್ಸಿಡಿ
ಸೂರ್ಯಘರ್ ಯೋಜನೆಯ ಮೂಲಕ ನಿಮ್ಮ ಮನೆ ಮೇಲ್ಛಾವಣಿಯಲ್ಲಿ ಸೌರವಿದ್ಯುತ್ ಘಟಕ ಸ್ಥಾಪಿಸಿ ಆಕರ್ಷಕ ಸಬ್ಸಿಡಿ ಪಡೆಯಿರಿ.
ಹೆಚ್ಚಿನ ಮಾಹಿತಿಗಾಗಿ
ಜಾಹಿರಾತುಸೂರ್ಯಘರ್ ಯೋಜನೆಗೆ ಈ ಲಿಂಕ್ ಮೂಲಕ https://t.co/iALIML395s ನೋಂದಾಯಿಸಿಕೊಳ್ಳಿ ಹಾಗೂ
ಬೆಸ್ಕಾಂನ ಸೋಲಾರ್ ಸಹಾಯವಾಣಿ ಸಂಖ್ಯೆ 080-22340816 ಕ್ಕೆ ಕರೆಮಾಡಿ.#Bescom #SuryagharScheme… pic.twitter.com/TfQ7cBFX2R
— Namma BESCOM | ನಮ್ಮ ಬೆಸ್ಕಾಂ (@NammaBESCOM) February 9, 2025
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಪಿಎಂ ಸೂರ್ಯಘರ್ ವೆಬ್‌ಸೈಟ್ (https://www.pmsuryaghar.gov.in/) ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ವಿದ್ಯುತ್ ಬಿಲ್, ಆಧಾರ್ ಕಾರ್ಡ್, ಮತ್ತು ಬ್ಯಾಂಕ್ ಖಾತೆ (Bank Account) ವಿವರ ನೀಡಬೇಕು.
DISCOM ಅಧಿಕೃತ ಡೀಲರ್‌ಗಳಿಂದ ಸೋಲಾರ್ ಪ್ಯಾನಲ್ ಖರೀದಿಸಿ ಅಳವಡಿಸಬೇಕು. ಆಯಾ ವಿದ್ಯುತ್ ಪೂರೈಕೆ ಕಂಪೆನಿಗಳ ಅನುಮೋದನೆ ಬಳಿಕ, ಸರ್ಕಾರದ ಸಬ್ಸಿಡಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.
PM Surya Ghar Yojana, Free Solar Power for Homes



