ಬೆಂಗಳೂರು: ಇಂದು ಹಲವು ಪ್ರದೇಶಗಳಲ್ಲಿ ಪವರ್ ಕಟ್; ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ
ಕೆಪಿಟಿಸಿಎಲ್ ತುರ್ತು ಕಾಮಗಾರಿ ಹಿನ್ನೆಲೆ ಇಂದು ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಬೆಳಗ್ಗೆದಿಂದ ಸಂಜೆವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದ್ದು ನಿವಾಸಿಗಳು ಮುನ್ನೆಚ್ಚರಿಕೆ ವಹಿಸುವಂತೆ ಬೆಸ್ಕಾಂ ಮನವಿ ಮಾಡಿದೆ
- ಬೆಂಗಳೂರು ಪವರ್ ಕಟ್: ಇಂದು ವಿದ್ಯುತ್ ವ್ಯತ್ಯಯ
- ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕರೆಂಟ್ ಇರಲ್ಲ
- ನಾಗರಿಕರು ಮುನ್ನೆಚ್ಚರಿಕೆ ವಹಿಸಲು ಬೆಸ್ಕಾಂ ಸೂಚನೆ
ಬೆಂಗಳೂರು (Bengaluru): ಬೆಂಗಳೂರಿನಲ್ಲಿ ಇಂದು ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿಗಳ ಕಾರಣದಿಂದ ವಿದ್ಯುತ್ ಪೂರೈಕೆಯಲ್ಲಿ (Power Cut) ವ್ಯತ್ಯಯ ಉಂಟಾಗಿದೆ. ನಗರದ ವಿವಿಧ ಭಾಗಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಇದರಿಂದ ಮನೆ, ಕಚೇರಿ ಕೆಲಸ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ತಾತ್ಕಾಲಿಕ ಅಡಚಣೆ ಎದುರಾಗಲಿದೆ.
ಪವರ್ ಕಟ್ ಆಗುವ ಪ್ರಮುಖ ಪ್ರದೇಶಗಳು
ಇಂದು ವಿದ್ಯುತ್ ವ್ಯತ್ಯಯ ಅನುಭವಿಸುವ ಪ್ರದೇಶಗಳಲ್ಲಿ ಆರ್.ಪಿ.ಸಿ ಲೇಔಟ್, ರೆಮ್ಕೋ ಲೇಔಟ್, ಕಲ್ಯಾಣ್ ಲೇಔಟ್, ಸುಬ್ಬಣ್ಣ ಗಾರ್ಡನ್, ವಿಡಿಯಾ ಲೇಔಟ್, ಎಂಆರ್‌ಸಿಆರ್ ಲೇಔಟ್, ಚಂದ್ರಾ ಲೇಔಟ್, ಬಾಪೂಜಿ ಲೇಔಟ್, ವಿನಾಯಕ ಲೇಔಟ್, ಮೂಡಲಪಾಳ್ಯ, ಕೆನರಾ ಬ್ಯಾಂಕ್ ಕಾಲೋನಿ, ವಿದ್ಯಾಗಿರಿ ಲೇಔಟ್, ಗಂಗೊಂಡನಹಳ್ಳಿ, ಸುವರ್ಣ ಲೇಔಟ್, ಬಿಡಿಎ 13 ಮತ್ತು 14ನೇ ಬ್ಲಾಕ್, ಕೆಂಗುಂಟೆ, ಭೈರವೇಶ್ವರನಗರ, ನಾಗರಬಾವಿ ಕೊಕನಟ್ ಗಾರ್ಡನ್ ಸೇರಿವೆ.
ಕಲ್ಯಾಣನಗರ ಹಾಗೂ ಉತ್ತರ ಭಾಗಗಳಲ್ಲಿ ಕರೆಂಟ್ ಇರಲ್ಲ
ಕಲ್ಯಾಣನಗರ ಸುತ್ತಮುತ್ತಲಿನ ಕಾವೇರಿ ಲೇಔಟ್, ಎಸ್‌ವಿಜಿ ಗಾರ್ಡನ್, ಸಂಜೀವಿನಿನಗರ, ಎನ್‌ಜಿಇಎಫ್ ಲೇಔಟ್, ದ್ವಾರಕಾನಗರ, ಬಾಬಾನಗರ, ಕಟ್ಟಿಗೇನಹಳ್ಳಿ ಸರ್ಡಿಂಗ್, ಬಾಗಲೂರು ಕ್ರಾಸ್, ಬಾಗಲೂರು ಮುಖ್ಯ ರಸ್ತೆ ಹಾಗೂ ಮಣಿಪಾಲ ಕಾಲೇಜು ಸುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ.
ವಾರಾಂತ್ಯದಲ್ಲೂ ಪವರ್ ಕಟ್
ಡಿಸೆಂಬರ್ 27 ಮತ್ತು 28ರಂದು (ಶನಿವಾರ–ಭಾನುವಾರ) ಪೀಣ್ಯ ಸೇರಿದಂತೆ ನಗರ ಉತ್ತರ ಭಾಗದ 80ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಕಡಿತ ಇರಲಿದೆ ಎಂದು ಬೆಸ್ಕಾಂ ಮುನ್ನೆಚ್ಚರಿಕೆ ನೀಡಿದೆ.
ಪೀಣ್ಯ ಗ್ರಾಮ, ಎಸ್‌ಆರ್‌ಎಸ್ ರಸ್ತೆ, ರಾಜಗೋಪಾಲನಗರ, ಜಿಕೆಡಬ್ಲ್ಯೂ ಲೇಔಟ್, ಕಸ್ತೂರಿ ಬಡವಾಣೆ, ಪೀಣ್ಯ ಕೈಗಾರಿಕಾ ಪ್ರದೇಶದ ವಿವಿಧ ಹಂತಗಳು, ಜಾಲಹಳ್ಳಿ ಕ್ರಾಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ವ್ಯತ್ಯಯ ಉಂಟಾಗಲಿದೆ.
ಬೆಸ್ಕಾಂ ಸಲಹೆ
ವಿದ್ಯುತ್ ವ್ಯತ್ಯಯದ ಅವಧಿಯಲ್ಲಿ ಲಿಫ್ಟ್, ನೀರಿನ ಮೋಟರ್, ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸುವಂತೆ ಹಾಗೂ ಅಗತ್ಯ ಕೆಲಸಗಳನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಬೆಸ್ಕಾಂ ನಾಗರಿಕರಿಗೆ ಮನವಿ ಮಾಡಿದೆ.



