ಬಡವರಿಗೆ ಸ್ವಂತ ಮನೆ, ಭಾರೀ ಸಹಾಯಧನ ಘೋಷಣೆ! ಮೂರು ಹಂತಗಳಲ್ಲಿ ಹಣ ಬಿಡುಗಡೆ
2025-26ರ ರಾಜೀವ್ ಗಾಂಧಿ ವಸತಿ ಯೋಜನೆ ಮೂಲಕ ಬಡ ಕುಟುಂಬಗಳಿಗೆ ಹೊಸ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ನೇರ ಸಹಾಯಧನ, ಸ್ಪಷ್ಟ ನಿಯಮಗಳು, ಅರ್ಜಿ ಪ್ರಕ್ರಿಯೆ ಮತ್ತು ಅರ್ಹತಾ ಮಾನದಂಡಗಳೊಂದಿಗೆ ಅವಕಾಶ ಲಭ್ಯ.
ಬೆಂಗಳೂರು: ಕರ್ನಾಟಕದ ಸಾವಿರಾರು ಬಡ ಕುಟುಂಬಗಳು ಇಂದಿಗೂ ಬಾಡಿಗೆ ತೊಂದರೆ, ಹಾಳಾದ ಮನೆ ಮತ್ತು ಸುರಕ್ಷಿತ ಆಶ್ರಯದ ಕೊರತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆ 2025-26 ಮತ್ತೆ ಬಡವರ ಮನೆ ಕನಸುಗಳಿಗೆ ನವಚೇತನ ನೀಡಿದೆ.
ಹೊಸ ಸಾಲಿನಲ್ಲಿ ಅರ್ಜಿ ಸ್ವೀಕೃತಿ ಆರಂಭವಾಗಿದ್ದು, ಅಗತ್ಯ ದಾಖಲೆಗಳೊಂದಿಗೆ ಆಸಕ್ತ ಕುಟುಂಬಗಳು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಸರ್ಕಾರ ಈ ಬಾರಿ ಸಹಾಯಧನ ಮೊತ್ತವನ್ನು ನಗರ ಹಾಗೂ ಗ್ರಾಮೀಣ ಭಾಗಗಳ ಅವಶ್ಯಕತೆಗಳಿಗೆ ಅನುಗುಣವಾಗಿ 1.75 ಲಕ್ಷದಿಂದ 2.5 ಲಕ್ಷ ರೂಪಾಯಿವರೆಗೆ ನಿಗದಿ ಮಾಡಿದ್ದು, ಮಹಿಳೆಯರ ಹೆಸರಿನಲ್ಲಿ ಮನೆ ಹಕ್ಕು ನೀಡಲು ವಿಶೇಷ ಆದ್ಯತೆ ನೀಡಲಾಗಿದೆ. ಬಡ ಕುಟುಂಬಗಳಿಗೆ ಇದೊಂದು ಭಾರೀ ಅವಕಾಶ ಎನ್ನಬಹುದು.
BPL ಅಥವಾ AAY ರೇಷನ್ ಕಾರ್ಡ್ ಹೊಂದಿರುವ ಮತ್ತು ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳು ಮಾತ್ರ ಈ ಯೋಜನೆಗೆ ಅರ್ಹ. ಜೊತೆಗೆ 20×30 ಅಥವಾ 30×40 ಗಾತ್ರದ ಸ್ವಂತ ಜಾಗ ಇರುವವರಿಗೆ ಮಾತ್ರ ಅನುಮತಿ. ಈ ಬಾರಿ ದಾಖಲೆಗಳ ನಿಖರತೆ ಮತ್ತು ಪರಿಶೀಲನೆ ಮತ್ತಷ್ಟು ಕಠಿಣಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ವೆಲ್! ₹4 ಲಕ್ಷದವರೆಗೆ ಸಹಾಯಧನ, ಆನ್ಲೈನ್ ಅರ್ಜಿ ಅವಕಾಶ
ಸಹಾಯಧನವನ್ನು ಮೂರು ಹಂತಗಳಲ್ಲಿ ಬಿಡುಗಡೆ ಮಾಡುವ ಹೊಸ ವ್ಯವಸ್ಥೆಯು ಪಾರದರ್ಶಕತೆಯಾಗಿದೆ. ತಳಹಂತ ಪೂರ್ಣಗೊಂಡ ನಂತರ ಮೊದಲ ಕಂತು ಹಾಗೂ ಗೋಡೆ–ಛಾವಣಿ ನಿರ್ಮಾಣದ ನಂತರ ಎರಡನೇ ಕಂತು ಮಂಜೂರುವಾಗುತ್ತದೆ.
ಮನೆ ಸಂಪೂರ್ಣವಾಗಿ ಮುಗಿದ ನಂತರ ಅಂತಿಮ ಹಂತದ ಹಣ ಲಭ್ಯವಾಗುತ್ತದೆ. ಪ್ರತಿ ಹಂತದಲ್ಲಿ ಸ್ಥಳ ಪರಿಶೀಲನೆ ಮತ್ತು ಆನ್‌ಲೈನ್ ಫೋಟೋ ಅಪ್‌ಲೋಡ್ ಕಡ್ಡಾಯ.
ಅರ್ಜಿದಾರರು ತಮ್ಮ ದಾಖಲೆಗಳನ್ನು ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಅಟಲ್ ಜಿ ಸೇವಾ ಕೇಂದ್ರದಲ್ಲಿ ಸ್ಕ್ಯಾನ್ ಮಾಡಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ತಕ್ಷಣ Reference Number ನೀಡಲಾಗುತ್ತಿದ್ದು, ಇದನ್ನು ಉಳಿಸಿಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಯಾವುದೇ middlemanಗಳ ನೆರವಿಗಿಂತಲೂ ನೇರವಾಗಿ ಸೇವಾ ಕೇಂದ್ರಕ್ಕೆ ಭೇಟಿ ನೀಡುವಂತೆ ಆಡಳಿತ ಎಚ್ಚರಿಕೆ ನೀಡಿದೆ.
ಹಳೆಯ ಅಥವಾ ಹಾಳಾದ ಮನೆಯನ್ನು ನವೀಕರಿಸಲು ಬಯಸುವ ಕುಟುಂಬಗಳಿಗೂ ಈ ಯೋಜನೆ ನೆರವಾಗುತ್ತಿದ್ದು, ಈಗಾಗಲೇ ಸಾವಿರಾರು ಜನರು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿದ್ದಾರೆ. ಆಶ್ರಯ ಪೋರ್ಟಲ್‌ನಲ್ಲಿ ಹೆಸರು ಅಥವಾ ರೇಷನ್ ಕಾರ್ಡ್ ಸಂಖ್ಯೆಯಿಂದ ಸ್ಟೇಟಸ್ ಪರಿಶೀಲನೆ ಸಾಧ್ಯ.
ಇದನ್ನೂ ಓದಿ: ಎರಡು ತಿಂಗಳ ಬಾಕಿ ಗೃಹಲಕ್ಷ್ಮಿ ಹಣ ಬಿಡುಗಡೆಗೆ ಶೀಘ್ರ ಸೂಚನೆ! ಬಿಗ್ ಬ್ರೇಕಿಂಗ್ ಅಪ್ಡೇಟ್
ಸುರಕ್ಷಿತ ಮನೆ, ಮಹಿಳೆಯರಿಗೆ ಆಸ್ತಿಯ ಹಕ್ಕು, ಮತ್ತು ಮಕ್ಕಳಿಗೆ ಸ್ಥಿರ ಭವಿಷ್ಯ ಒದಗಿಸುವುದೇ ಈ ಯೋಜನೆಯ ಗುರಿ ಎಂದು ಸರ್ಕಾರ ತಿಳಿಸಿದೆ. ಅರ್ಹ ಕುಟುಂಬಗಳು ಈ ಅಮೂಲ್ಯ ಅವಕಾಶವನ್ನು ತಪ್ಪದೆ ಬಳಸಿಕೊಳ್ಳಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
Rajiv Gandhi Housing Scheme 2025-26
ಮಳೆ ಜೊತೆ ಮೈ ನಡುಗಿಸುವ ಚಳಿ! ಬೆಂಗಳೂರು ಸೇರಿ 2 ದಿನಗಳ ಕರ್ನಾಟಕ ಹವಾಮಾನ ಮುನ್ಸೂಚನೆ ಹೀಗಿದೆ
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
ಇನ್ನು ಮೂರೇ ದಿನ ಗಡುವು! ನವೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ಹೊಸ ನಿಯಮ
Read the story
ರೈತರಿಗೆ ಅನುಗ್ರಹ ಯೋಜನೆ ಹಣ ಬಿಡುಗಡೆ! ಬಾಕಿ ಉಳಿದಿದ್ದ ಪರಿಹಾರ ಮೊತ್ತ ಖಾತೆಗೆ ಜಮಾ
Read the story
ಇನ್ನು 2 ದಿನಗಳಲ್ಲಿ ರೈತರ ಖಾತೆಗೆ 2 ಸಾವಿರ ಜಮಾ; ಗುಡ್ ನ್ಯೂಸ್ ಕೊಟ್ಟ ಮೋದಿಜಿ
Read the story



