ನಟ ದರ್ಶನ್ ಅಭಿಮಾನಿಗಳ ಮೇಲೆ ನಟಿ ರಮ್ಯಾ ಕಾನೂನು ಹೋರಾಟ! - Actress Ramya Vs Darshan Fans
ನಟ ದರ್ಶನ್ ವಿರೋಧಿಸಿ ಮಾಡಿದ ಟ್ವೀಟ್‌ನ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾ (Divya Spandana) ವಿರುದ್ಧ ಭಾರೀ ಮಟ್ಟದ ಟ್ರೋಲ್ ಆರಂಭವಾಗಿದೆ. ಬೆದರಿಕೆ, ಅವಹೇಳನದ ಸಂದೇಶಗಳಿಂದ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ದರ್ಶನ್ ಅಭಿಮಾನಿಗಳಿಂದ ನಟಿ ರಮ್ಯಾಗೆ ಬೆದರಿಕೆ
- ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶಗಳು
- ಬೆಂಗಳೂರು ಪೊಲೀಸರಿಗೆ ದೂರು ನೀಡಲು ಸಿದ್ಧತೆ
ಬೆಂಗಳೂರು (Bengaluru): ನಟ ದರ್ಶನ್ (Actor Darshan) ವಿರುದ್ಧ ಇತ್ತೀಚೆಗೆ ಮಾಡಿದ್ದ ವ್ಯಾಖ್ಯಾನಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ನಟಿ ಮತ್ತು ಮಾಜಿ ಸಂಸದೆ ನಟಿ ರಮ್ಯಾ (Actress Ramya), ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಟ್ರೋಲ್, ಜೀವ ಬೆದರಿಕೆ ಹಾಗೂ ವೈಯಕ್ತಿಕ ದಾಳಿ ಎದುರಿಸುತ್ತಿರುವುದಾಗಿ ವರದಿಯಾಗಿದೆ.
ಕೆಲ ಅಭಿಮಾನಿಗಳು ‘ರೇಣುಕಾಸ್ವಾಮಿ ಬದಲು ನಿನ್ನನ್ನೇ ಹತ್ಯೆ ಮಾಡಬೇಕಿತ್ತು’ ಎಂಬೆಲ್ಲಾ ಶಬ್ದಗಳಿಂದ ಸಾಮಾಜಿಕ ಜಾಲತಾಣದಲ್ಲಿ (Social Media) ಆಕ್ರೋಶ ವ್ಯಕ್ತಪಡಿಸಿದ್ದು, ಇದು ಇದೀಗ ಗಂಭೀರ ವಿಚಾರವಾಗಿ ಪರಿಣಮಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ರಮ್ಯಾ (Divya Spandana) ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, “ನಾನು ಈಗಾಗಲೇ ನನ್ನ ವಕೀಲರನ್ನು ಸಂಪರ್ಕಿಸಿದ್ದೇನೆ. ಬೆಂಗಳೂರು (Bengaluru) ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ದೂರು ನೀಡಲಿದ್ದೇನೆ. ನನ್ನ ಕುಟುಂಬವನ್ನೂ ಗುರಿಯಾಗಿಸಿ ಕೆಲವರು ನಿಂದಿಸುತ್ತಿದ್ದಾರೆ. ಎಲ್ಲ ಸ್ಕ್ರೀನ್‌ಶಾಟ್‌ಗಳನ್ನು ಸಾಕ್ಷಿಯಾಗಿ ಸಂಗ್ರಹಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕ ಕರಾವಳಿ-ಮಲೆನಾಡಿಗೆ ಭಾರೀ ಮಳೆ ಎಚ್ಚರಿಕೆ
ಅಷ್ಟೇ ಅಲ್ಲದೆ, “ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರನ್ನು ಗುರಿಯಾಗಿಸಿ, ಬಾಯಿಗೆ ಬಂದಂತೆ ಬರೆದು ನಿಂದಿಸುವುದೊಂದು ಟ್ರೆಂಡ್ ಆಗಿದೆ. ಮಹಿಳೆಯರ ಬಗ್ಗೆ ಬಾಯಿಗೆ ಬಂದಂತೆ ಬೈಯುವುದು ಈಗ ಎಲ್ಲರಿಗೂ ರೂಢಿಯಾಗಿಬಿಟ್ಟಿದೆ. ಇದಕ್ಕೆ ಕಾರಣವೇನಂದ್ರೆ, ಕಠಿಣ ಕಾನೂನುಗಳಿಲ್ಲ ಎಂಬ ಧೈರ್ಯ. ಮಹಿಳೆಯರ ಮಾನವನ್ನು ಕುಗ್ಗಿಸುವುದು, ಅವರ ಕ್ಯಾರಕ್ಟರ್ ಹಾಳುಮಾಡುವ ಪ್ರಕ್ರಿಯೆ ನಡೆಯುತ್ತಿದೆ” ಎಂಬ ಆಕ್ರೋಶವನ್ನು ಹಂಚಿಕೊಂಡಿದ್ದಾರೆ.
ನಟಿ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ದರ್ಶನ್ ಅಭಿಮಾನಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳು, ಅತ್ಯಾಚಾರದ ಬೆದರಿಕೆ ಮತ್ತು ವೈಯಕ್ತಿಕ ಭೀತಿಯನ್ನು ತುಂಬಿದ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಇವುಗಳ ಸ್ಕ್ರೀನ್‌ಶಾಟ್‌ಗಳನ್ನು ಸಂಗ್ರಹಿಸಿ ಕಾನೂನು ಕ್ರಮಕ್ಕೆ ತಯಾರಿ ನಡೆಸಲಾಗುತ್ತಿದೆ, ಎನ್ನಲಾಗಿದೆ.
ಇದನ್ನೂ ಓದಿ: ರೇಷನ್ ಅಕ್ಕಿ ಪಡೆದು ಮಾರಾಟ ಮಾಡಿದರೆ ರೇಷನ್ ಕಾರ್ಡ್ ಕ್ಯಾನ್ಸಲ್! ಖಡಕ್ ಸೂಚನೆ
ಇತ್ತ ದರ್ಶನ್ (Darshan) ಇತ್ತೀಚೆಗಷ್ಟೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧನಕ್ಕೊಳಗಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ರಮ್ಯಾ, “ಯಾರಾದರೂ ತೊಂದರೆ ಕೊಟ್ಟರೆ ಬ್ಲಾಕ್ ಮಾಡಿ, ಅಥವಾ ಪೊಲೀಸ್ ಬಳಿ ಹೋಗಿ. ಹೊಡೆದು ಕೊಲ್ಲೋದು ಯಾವ ನ್ಯಾಯ?” ಎಂದು ಕೇಳಿದ್ದರು. ಇದೇ ಹೇಳಿಕೆಯಿಂದ ಅಭಿಮಾನಿಗಳ ಟ್ರೋಲ್ ಗೆ ಕಾರಣ ಎನ್ನಲಾಗುತ್ತಿದೆ.
ಮಾಹಿತಿ ಹಾಗೂ ನಿಖರ ಸುದ್ದಿಗಳಿಗೆ Kannada News Today ಪ್ರತಿದಿನ ಭೇಟಿ ನೀಡಿ.
Ramya Reacts to Threats From Darshan Fans Over Her Statement




