BPL Card: ರಾಜ್ಯದ ಬಿಪಿಎಲ್ ರೇಷನ್ ಕಾರ್ಡ್‌ದಾರರಿಗೆ ಸಿಹಿ ಸುದ್ದಿ
ಆಹಾರ ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಬಿಪಿಎಲ್ ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್ ನೀಡಿದ್ದಾರೆ, ಈ ಕುರಿತು ಅವರು ಕೋಲಾರದಲ್ಲಿ ಮಾತನಾಡಿದ್ದಾರೆ
- ಬಿಪಿಎಲ್ ಕಾರ್ಡ್‌ಗಾಗಿ ವೇತನ ಪ್ರಮಾಣಪತ್ರ ಕಡ್ಡಾಯವಿಲ್ಲ.
- ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಸರ್ಕಾರ ರದ್ದು ಮಾಡಲಿದೆ.
- ಅರ್ಹರಿಗೆ ಪಡಿತರ ವಿತರಣೆ ಪ್ರಕ್ರಿಯೆ ಸುಗಮಗೊಳಿಸಲು ಕ್ರಮ.
ಬೆಂಗಳೂರು (Bengaluru): ಆಹಾರ ಇಲಾಖೆಯಿಂದ ಬಿಪಿಎಲ್ ರೇಷನ್ ಕಾರ್ಡ್‌ದಾರರಿಗೆ (BPL Ration Card) ಸಂತಸದ ಸುದ್ದಿಯೊಂದು ಬಂದಿದೆ. ಬಿಪಿಎಲ್ ಕಾರ್ಡ್ ಪಡೆದು ಪಡಿತರ ಪಡೆಯಲು ಕುಟುಂಬದ ಎಲ್ಲ ಸದಸ್ಯರ ವೇತನ ಪ್ರಮಾಣಪತ್ರ ಕಡ್ಡಾಯ ಎಂದು ಹೇಳಲಾಗುತ್ತಿತ್ತು.
ಆದರೆ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಅವರ ಪ್ರಕಾರ, ಎಲ್ಲಾ ಸದಸ್ಯರ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದರಿಂದ ಬಿಪಿಎಲ್ ಕಾರ್ಡ್‌ದಾರರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ, ಪಡಿತರ ಪಡೆಯುವುದು ಸುಲಭವಾಗಿದೆ.
ಈ ಬಗ್ಗೆ ಸಚಿವರು ಕೋಲಾರದಲ್ಲಿ (Kolar) ಮಾತನಾಡಿದರು. ಅರ್ಹತೆ ಇಲ್ಲದೆ ಬಿಪಿಎಲ್ ಕಾರ್ಡ್ ಪಡೆಯುವವರ ವಿರುದ್ಧ ಇಲಾಖೆಯಿಂದ ಪರಿಶೀಲನೆ ನಡೆಯುತ್ತಿದೆ. ಸರ್ಕಾರಿ ನೌಕರರು ಈ ಕಾರ್ಡ್‌ಗಳನ್ನು ಬಳಸುತ್ತಿರುವುದಾದರೆ, ಅಂತಹ ಕಾರ್ಡ್‌ಗಳನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ.
ಅಕ್ರಮ ಪಡಿತರ ಚೀಟಿ ಸಂಬಂಧಿತ ಪರಿಶೀಲನೆಯು ವಿಳಂಬವನ್ನು ಉಂಟುಮಾಡಿದರೂ, ಈ ಪ್ರಕ್ರಿಯೆ ಈಗ ಒಂದು ಹಂತಕ್ಕೆ ತಲುಪಿದ್ದು, ಇನ್ಮುಂದೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಭರವಸೆ ನೀಡಿದರು.
Relief for BPL Cardholders, No Mandatory Salary Certificates for Family Members