ದರ್ಶನ್ ಜಾಮೀನು ವಿಚಾರ! ರೇಣುಕಾಸ್ವಾಮಿ ತಂದೆ ಹೇಳಿದ್ದೇನು ಗೊತ್ತಾ
ನಟ ದರ್ಶನ್ ಜಾಮೀನು ನಂತರ ರೇಣುಕಾಸ್ವಾಮಿ ಅವರ ತಂದೆ ಕಾಶಿನಾಥಯ್ಯ ಹರಿಹರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಗನ ಹತ್ಯೆಯಿಂದ ನಮಗೆ ತುಂಬಾ ನೋವಾಗಿದೆ ಎಂದಿದ್ದಾರೆ
ಬೆಂಗಳೂರು (Bengaluru): ನಟ ದರ್ಶನ್ ಜಾಮೀನು ನಂತರ ರೇಣುಕಾಸ್ವಾಮಿ ಅವರ ತಂದೆ ಕಾಶಿನಾಥಯ್ಯ ಹರಿಹರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಗನ ಹತ್ಯೆಯಿಂದ ನಮಗೆ ತುಂಬಾ ನೋವಾಗಿದೆ. ಆ ಸಮಯದಲ್ಲಿ ಮಗಳು ಹೆರಿಗೆಗೆ ಇಲ್ಲಿಗೆ ಬಂದಿದ್ದಳು, ಮಗು ಹುಟ್ಟಿದ ಖುಷಿಯೂ ಮಾಯವಾಗಿತ್ತು.
ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಬೇಡಿಕೆ. ಆರೋಪಿಗಳಿಗೆ ಶಿಕ್ಷೆ ಆಗುವವರೆಗೂ ಹೋರಾಟ ನಿಲ್ಲದು ಎಂದರು. ಜೊತೆಗೆ ನ್ಯಾಯಾಲಯ ಮತ್ತು ಕಾನೂನಿನ ಮೇಲೆ ನಂಬಿಕೆ ಹಾಗೂ ಗೌರವ ಇದೆ ಎಂದು ಹೇಳಿದರು.
ಇನ್ನು ನಟ ದರ್ಶನ್ (Actor Darshan) ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅವರಿಗೆ ಬೆಂಗಳೂರು ಹೈಕೋರ್ಟ್ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಆತನ ಗೆಳತಿ ಪವಿತ್ರಾ ಗೌಡ ಸೇರಿದಂತೆ ಕೆಲ ಆರೋಪಿಗಳು 140 ದಿನಗಳಿಂದ ಜೈಲಿನಲ್ಲಿದ್ದಾರೆ. ದರ್ಶನ್ ಜಾಮೀನು 6 ವಾರಗಳವರೆಗೆ ಚಾಲ್ತಿಯಲ್ಲಿದೆ.
ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು
ನ್ಯಾಯಾಲಯದಲ್ಲಿ ವಾದ
ನಟ ದರ್ಶನ್ (Darshan Thoogudeepa) ಬೆನ್ನುನೋವಿನ ಗಂಭೀರ ಸಮಸ್ಯೆ ಎದುರಿಸುತ್ತಿದ್ದರು, ಜಾಮೀನು ಅರ್ಜಿ ಸಲ್ಲಿಸಿ ಕೆಲ ದಿನಗಳಿಂದ ವಿಚಾರಣೆ ನಡೆಯುತ್ತಿತ್ತು. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಅಂತಿಮವಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ದರ್ಶನ್ ಅವರ ಬೆನ್ನಿನ ಎಲ್-5 ಮತ್ತು ಎಸ್-1 ಡಿಸ್ಕ್ ಸಮಸ್ಯೆ ಕಾಣಿಸಿಕೊಂಡಿದೆ. ದರ್ಶನ್ ಪರ ವಕೀಲ ನಾಗೇಶ್ ವಾದ ಮಂಡಿಸಿ ಮೈಸೂರಿನಲ್ಲಿ ಚಿಕಿತ್ಸೆ ಪಡೆಯಬೇಕು ಆದ್ದರಿಂದ ಜಾಮೀನು ನೀಡಬೇಕಾಗಿ ವಾದಮಂಡಿಸಿದರು.
ಜಾಮೀನು ನೀಡಬಾರದು ಎಂದು ಸರ್ಕಾರಿ ವಕೀಲರು ವಾದ ಮಂಡಿಸಿದರು. ದರ್ಶನ್ ಪರ ವಕೀಲ ನಾಗೇಶ್ ಮಾತನಾಡಿ, ಕಾಲುಗಳಲ್ಲಿ ಶಕ್ತಿ ಕುಂಠಿತವಾಗಿದ್ದು, ಚಿಕಿತ್ಸೆ ನೀಡದಿದ್ದರೆ ಮೂತ್ರ ನಿಯಂತ್ರಣ ತಪ್ಪಿ ಗಂಭೀರ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಬಳ್ಳಾರಿ ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞ ವಿಶ್ವನಾಥ್ ವರದಿ ನೀಡಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಈಗಾಗಲೇ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವಿವರಿಸಿದರು.
Breaking: ನಟ ದರ್ಶನ್‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು
ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ಮತ್ತು ಸಂಬಂಧಿಕರು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಬಂದಿದ್ದು, ನ್ಯಾಯಾಲಯದಿಂದ ದಾಖಲೆಗಳನ್ನು ಸ್ವೀಕರಿಸಿದ ನಂತರ ದರ್ಶನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸಿ ಹೊರಟರು, ಜೈಲಿನ ಬಳಿ ಅಭಿಮಾನಿಗಳ ದಂಡೇ ನೆರೆದಿತ್ತು. ದರ್ಶನ್ ಬಿಡುಗಡೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ
Renukaswamy’s father Reaction on Actor Darshan Granted bail