ಕನ್ನಡ ಮಾತನಾಡಲ್ಲ ಎಂದ ಎಸ್‌ಬಿಐ ಮ್ಯಾನೇಜರ್ ರಾತ್ರೋ-ರಾತ್ರಿ ವರ್ಗಾವಣೆ

ಕನ್ನಡ ಮಾತನಾಡಲು ನಿರಾಕರಿಸಿ ಗ್ರಾಹಕರಿಗೆ ಅವಾಜ್ ಹಾಕಿದ ಎಸ್‌ಬಿಐ ಮಹಿಳಾ ಮ್ಯಾನೇಜರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರತಿಭಟನೆಯ ಬೆನ್ನಲ್ಲೇ ಮ್ಯಾನೇಜರ್ ರಾತ್ರೋರಾತ್ರಿ ವರ್ಗಾವಣೆಯಾಗಿದ್ದಾರೆ.

  • ಕನ್ನಡ ಮಾತನಾಡದ ಮ್ಯಾನೇಜರ್ ವಿರುದ್ಧ ಜನತೆಯಿಂದ ತೀವ್ರ ಆಕ್ರೋಶ
  • ಗ್ರಾಹಕರಿಗೆ ಹಿಂದಿಯಲ್ಲಿ ಮಾತನಾಡುವಂತೆ ಅವಾಜ್ ಹಾಕಿದ್ದ ಮ್ಯಾನೇಜರ್
  • ಪ್ರತಿಭಟನೆಯ ತೀವ್ರತೆಗೆ ಎಸ್‌ಬಿಐ ತಕ್ಷಣದ ಕ್ರಮ, ಮ್ಯಾನೇಜರ್ ವರ್ಗಾವಣೆ

ಬೆಂಗಳೂರು (Bengaluru) ಹೊರವಲಯದ ಚಂದಾಪುರದಲ್ಲಿರುವ ಎಸ್‌ಬಿಐ (SBI Bank) ಶಾಖೆಯೊಂದರಲ್ಲಿ ನಡೆದ ಘಟನೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಗ್ರಾಹಕರೊಬ್ಬರು ಕೆಲಸದ ನಿಮಿತ್ತ ಬ್ಯಾಂಕ್‌ಗೆ ತೆರಳಿದ್ದ ವೇಳೆ, ಮಹಿಳಾ ಮ್ಯಾನೇಜರ್‌ ಬಳಿ (Bank Manager) ಕನ್ನಡದಲ್ಲಿ ಮಾತನಾಡುವಂತೆ ಕೇಳಿದ್ದಾರೆ.

ಆದರೆ ಮ್ಯಾನೇಜರ್ ದರ್ಪದಿಂದ “ಇದು ಭಾರತ, ನಾನು ಹಿಂದಿಯಲ್ಲೇ ಮಾತನಾಡುತ್ತೇನೆ. ನಾನು ಕನ್ನಡ ಮಾತಾಡೋಲ್ಲ!” ಎಂದು ಉತ್ತರಿಸಿದರು ಎನ್ನಲಾಗಿದೆ.

ಗ್ರಾಹಕರೊಂದಿಗೆ ಮಾತನಾಡಿದ ಈ ಮಹಿಳಾ ಅಧಿಕಾರಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ (social media) ವೈರಲ್ ಆದ ನಂತರ, ಕನ್ನಡಿಗರು ಬೃಹತ್ ಮಟ್ಟದಲ್ಲಿ ಪ್ರತಿಭಟನೆಗೆ ಮುಂದಾದರು. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು, ಕನ್ನಡ ಸಂಘಟನೆಗಳು ಕೂಡ ಆಕ್ರೋಶ ವ್ಯಕ್ತಪಡಿಸಿದರು.

ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತುಕೊಂಡ ಎಸ್‌ಬಿಐ, ಮಹಿಳಾ ಮ್ಯಾನೇಜರ್‌ನ್ನು ತಕ್ಷಣವೇ ವರ್ಗಾಯಿಸುವ ಆದೇಶ ನೀಡಿದ್ದು, ಮೂಲಗಳ ಪ್ರಕಾರ ಅವರನ್ನು ಬಾಹ್ಯ ರಾಜ್ಯಕ್ಕೆ ಟ್ರಾನ್ಸ್‌ಫರ್ ಮಾಡಲಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಹಲವರು “ಕನ್ನಡ ರಾಜ್ಯದಲ್ಲಿ ಕನ್ನಡವೇ ಮೊದಲ ಆದ್ಯತೆ ಆಗಬೇಕು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಸ್‌ಬಿಐ ಬೃಹತ್ ತನಿಖೆ ಕೈಗೊಂಡಿದ್ದು, ಇಂತಹ ಪ್ರಸಂಗಗಳು ಪುನರಾವರ್ತನೆಗೊಳಪಡುವಂತಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

SBI Manager Transferred Overnight After Kannada Row

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories