ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳ ಪಕ್ಕಾ ಲೆಕ್ಕಾಚಾರ ಇಲ್ಲಿದೆ!
ಸಿದ್ದರಾಮಯ್ಯ ಬಜೆಟ್‌ನಲ್ಲಿ 51,034 ಕೋಟಿ ರೂ. ಅನುದಾನ ಮೀಸಲಿಟ್ಟು, ಮಹಿಳೆಯರಿಗೆ ಹೂಡಿಕೆ ಮಾಡಲು ಪ್ರೋತ್ಸಾಹ ಮಾಡಿದ್ದಾರೆ, ಇಲ್ಲಿದೆ ಅನುದಾನ ಲೆಕ್ಕಾಚಾರ
- ಗೃಹಲಕ್ಷ್ಮಿ ಹಣವನ್ನು ಹೂಡಿಕೆ ಮಾಡಲು ‘ಅಕ್ಕ ಸಹಕಾರಿ ಸಂಘ’ ಘೋಷಣೆ
- ಶಕ್ತಿ ಯೋಜನೆಗೆ 5,300 ಕೋಟಿ ರೂ. ಹಂಚಿಕೆ – 285 ಕೋಟಿ ರೂ. ಹೆಚ್ಚಳ
- ಅನ್ನಭಾಗ್ಯ ಯೋಜನೆಗೆ 6,426 ಕೋಟಿ ರೂ. – 1,653 ಕೋಟಿ ರೂ. ಕಡಿತ
ಬೆಂಗಳೂರು (Bengaluru): ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಪಂಚ ಗ್ಯಾರಂಟಿಗಳು (Guarantees) ಉಚಿತ ಕೊಡುಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬದಲಾಗಿ, ಆರ್ಥಿಕ ಮತ್ತು ಸಾಮಾಜಿಕ ಸಿದ್ಧಾಂತಗಳಡಿ ಹೂಡಿಕೆ (Investment) ಮಾಡಲಾಗಿದೆ ಎಂದು ಬಜೆಟ್ ಭಾಷಣದಲ್ಲಿ ವಿವರಿಸಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗಳಿಗಾಗಿ 51,034 ಕೋಟಿ ರೂ. ಮೀಸಲಿಡಲಾಗಿದೆ, ಇದು ಕಳೆದ ಬಾರಿಗಿಂತ 975 ಕೋಟಿ ಕಡಿಮೆ. ಗೃಹಲಕ್ಷ್ಮಿ (Gruha Lakshmi Scheme) ಯೋಜನೆಯ ಹಣವನ್ನು ಉಳಿತಾಯ ಮತ್ತು ಉದ್ಯಮಕ್ಕೆ ಬಳಸುವಂತೆ ಮಹಿಳೆಯರಿಗೆ ಪ್ರೋತ್ಸಾಹ ನೀಡುವಂತೆ ವಿಶೇಷ ಯೋಜನೆ ಪ್ರಕಟಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸೌಲಭ್ಯ!
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೊಸ ಯೋಜನೆ
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸ್ವಸಹಾಯ ಗುಂಪುಗಳ ಮೂಲಕ ಹೂಡಿಕೆ ಮಾಡಲು ‘ಅಕ್ಕ ಸಹಕಾರಿ ಸಂಘ’ ಎಂಬ ಹೊಸ ವ್ಯವಸ್ಥೆ ಘೋಷಿಸಲಾಗಿದೆ. ಇದರಿಂದ ಉಳಿತಾಯ (Savings), ಉದ್ಯಮಶೀಲತೆ (Entrepreneurship) ಮತ್ತು ತ್ವರಿತ ಸಾಲ (Loan Facility) ಪಡೆಯುವ ಅವಕಾಶ ಲಭ್ಯವಿರಲಿದೆ. ಸರ್ಕಾರದ ಈ ಕ್ರಮ ಮೈಕ್ರೋಫೈನಾನ್ಸ್ (Microfinance) ವ್ಯವಸ್ಥೆಗೆ ನೇರ ಹೊಡೆತ ಎನ್ನಲಾಗಿದೆ.
ಬಜೆಟ್ ಲೆಕ್ಕಾಚಾರ
ಒಟ್ಟು ಗಾತ್ರ: 4,09,549 ಕೋಟಿ ರೂ. (ಕಳೆದ ಬಜೆಟ್‌ನಲ್ಲಿ 3,71,121 ಕೋಟಿ)
ಒಟ್ಟು ಸಾಲ: 1,16,000 ಕೋಟಿ ರೂ. (ಕಳೆದ ಬಾರಿಗಿಂತ 10,000 ಕೋಟಿ ಹೆಚ್ಚಳ)
ಇದನ್ನೂ ಓದಿ: ಕರ್ನಾಟಕ ಉಚಿತ ಬಸ್ ಯೋಜನೆಯಲ್ಲಿ ಮಹಿಳೆಯರಿಗೆ ಇನ್ನೊಂದು ಗುಡ್‌ನ್ಯೂಸ್
ಪ್ರಮುಖ ಗ್ಯಾರಂಟಿ ಯೋಜನೆಗಳ ಅನುದಾನ
- ಗೃಹಲಕ್ಷ್ಮಿ ಯೋಜನೆ: 28,608 ಕೋಟಿ ರೂ. ಮೀಸಲಿಟ್ಟಿದ್ದು, 40 ಲಕ್ಷ ರೂ. ಕಡಿತ
- ಶಕ್ತಿ ಯೋಜನೆ: 5,300 ಕೋಟಿ ರೂ. ಮೀಸಲಿಟ್ಟು, 285 ಕೋಟಿ ರೂ. ಹೆಚ್ಚಳ
- ಗೃಹಜ್ಯೋತಿ ಯೋಜನೆ: 10,100 ಕೋಟಿ ರೂ. ಮೀಸಲಿಟ್ಟು, 443 ಕೋಟಿ ರೂ. ಹೆಚ್ಚಳ
- ಅನ್ನಭಾಗ್ಯ ಯೋಜನೆ: 6,426 ಕೋಟಿ ರೂ. ಮೀಸಲಿಟ್ಟು, 1,653 ಕೋಟಿ ರೂ. ಕಡಿತ
- ಯುವನಿಧಿ ಯೋಜನೆ: 600 ಕೋಟಿ ರೂ. ಮೀಸಲಿಟ್ಟು, 50 ಕೋಟಿ ರೂ. ಕಡಿತ
ಇದನ್ನೂ ಓದಿ: ಉಚಿತ ಮನೆ ಯೋಜನೆಗೆ 3.50 ಲಕ್ಷ ಸಬ್ಸಿಡಿ, ಬಡವರ ಕನಸು ಇನ್ನಷ್ಟು ಹತ್ತಿರ!
ಯೋಜನೆಗಳು ಮತ್ತು ಅದರ ಪ್ರಯೋಜನಗಳು
ಗೃಹಜ್ಯೋತಿ (Gruha Jyothi Scheme): ಎಲ್ಲ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್
ಗೃಹಲಕ್ಷ್ಮಿ (Gruha Lakshmi Scheme): ಮನೆ ಯಜಮಾನಿಗೆ ಪ್ರತಿ ತಿಂಗಳು ₹2,000
ಅನ್ನಭಾಗ್ಯ (Annabhagya Scheme): ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಆಹಾರ ಧಾನ್ಯ
ಯುವನಿಧಿ (Yuvanidhi Yojane) : ನಿರುದ್ಯೋಗ ಭತ್ಯೆ – ಪದವೀಧರರಿಗೆ ₹3,000, ಡಿಪ್ಲೋಮಾ ಮಾಡಿದವರಿಗೆ ₹1,500
ಶಕ್ತಿ (Shakti Yojane): ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
Scheme-Wise Fund Allocation in Karnataka