Bengaluru: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಭೀಕರ ಅಪಘಾತ; ಜೀವ ಉಳಿಸಿದ ಸೀಟ್ ಬೆಲ್ಟ್
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಬಸ್‌ಗೆ ಡಿಕ್ಕಿಯಾಗಿ ಕಾರು ಪಲ್ಟಿಯಾದ ಭೀಕರ ಅಪಘಾತ ತಡವಾಗಿ ಬೆಳಕಿಗೆ ಬಂದಿದ್ದು, ಸೀಟ್ ಬೆಲ್ಟ್ ಧರಿಸಿದ್ದ ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು–ಬಸ್ ಭೀಕರ ಅಪಘಾತ
- ಸೀಟ್ ಬೆಲ್ಟ್ ಕಾರಣ ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರು
- ರಾಮನಗರದ ಸಂಗಬಸವನದೊಡ್ಡಿ ಬಳಿ ಅಪಘಾತ, ವೀಡಿಯೋ ವೈರಲ್
ಬೆಂಗಳೂರು (Bengaluru): ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಭೀಕರ ಅಪಘಾತದ ಘಟನೆ ಡಿಸೆಂಬರ್ ತಿಂಗಳಲ್ಲಿ ಸಂಭವಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಮೂಲಕ ತಡವಾಗಿ ಬೆಳಕಿಗೆ ಬಂದಿದೆ. ವೇಗವಾಗಿ ಸಾಗುತ್ತಿದ್ದ ಕಾರೊಂದು ಕೆಎಸ್ಆರ್‌ಟಿಸಿ ಬಸ್‌ಗೆ ಡಿಕ್ಕಿಯಾಗಿ ಮೂರ್ನಾಲ್ಕು ಬಾರಿ ಪಲ್ಟಿಯಾದ ದೃಶ್ಯಗಳು ಜನರಲ್ಲಿ ಆತಂಕ ಮೂಡಿಸಿವೆ.
ಈ ಅಪಘಾತ ರಾಮನಗರ ಜಿಲ್ಲೆಯ ಸಂಗಬಸವನದೊಡ್ಡಿ ಗ್ರಾಮದ ಸಮೀಪ ಸಂಭವಿಸಿದೆ. ಬೆಂಗಳೂರು ಮೂಲದ 84 ವರ್ಷದ ಅಬ್ದುಲ್ ಫಜಲ್ ಅವರು ತಮ್ಮ ಪತ್ನಿಯೊಂದಿಗೆ ಮೈಸೂರಿಗೆ ಸಂಬಂಧಿಕರ ಮದುವೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಎಕ್ಸ್‌ಪ್ರೆಸ್‌ವೇ ಎಕ್ಸಿಟ್ ಬಳಿ ಬಸ್ ಅನ್ನು ಓವರ್‌ಟೇಕ್ ಮಾಡಲು ಹೋಗಿದಾಗ ನಿಯಂತ್ರಣ ತಪ್ಪಿ ಕಾರು ಬಸ್‌ಗೆ ಡಿಕ್ಕಿಯಾಗಿದೆ.
ಪಲ್ಟಿಯಾದರೂ ಜೀವ ಉಳಿದದ್ದು ಹೇಗೆ?
ಡಿಕ್ಕಿಯ ತೀವ್ರತೆಗೆ ಕಾರು ಡಿವೈಡರ್ ಮೇಲೆ ಬಿದ್ದು ಸುತ್ತುತ್ತಾ ಪಲ್ಟಿಯಾಗಿದೆ. ಆದರೆ ಕಾರಿನೊಳಗಿದ್ದ ವೃದ್ಧ ದಂಪತಿ ಇಬ್ಬರೂ ಸೀಟ್ ಬೆಲ್ಟ್ ಧರಿಸಿದ್ದರಿಂದ ಭಾರೀ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದ ಸಂದರ್ಭದಲ್ಲಿ ಕೆಲ ಕ್ಷಣಗಳ ಕಾಲ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಅಪಘಾತದಲ್ಲಿ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ನಂತರ ಅವರು ಗುಣಮುಖರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಘಟನೆ ಸೀಟ್ ಬೆಲ್ಟ್‌ನ ಮಹತ್ವವನ್ನು ಮತ್ತೊಮ್ಮೆ ನೆನಪಿಸಿಕೊಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ ಹವಾಮಾನ: ಬೆಂಗಳೂರು, ಹಾಸನ, ಮೈಸೂರು ಸೇರಿ ಈ 8 ಜಿಲ್ಲೆಗಳಲ್ಲಿ ಮಳೆ, ಗಾಳಿಯ ಅಬ್ಬರ
Read the story
ದಿನ ಭವಿಷ್ಯ 28 ಅಕ್ಟೋಬರ್ 2026, ಬುಧವಾರ
Read the story
ಬೆಂಗಳೂರು: ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ! ಮನೆಯಲ್ಲೇ ಸ್ವಂತ ಉದ್ಯಮ ಶುರು ಮಾಡಿ
Read the story
ಬೆಂಗಳೂರು ಮೆಟ್ರೋ ಜಾಲ, ಹೊಸಕೋಟೆ, ತುಮಕೂರಿಗೂ ವಿಸ್ತರಣೆ! ಈ ಭಾಗದ ಭೂಮಿಗೆ ಬಂಗಾರದ ಬೆಲೆ
Read the story
ಇಳುವರಿ ಕುಸಿತ, ಮಾರುಕಟ್ಟೆಗೆ ಪೂರೈಕೆ ಕಡಿಮೆ! ಈರುಳ್ಳಿ ಬೆಲೆ ಭಾರೀ ಏರಿಕೆ
Read the story




