ಇಂದು ಹುಟ್ಟೂರಿನಲ್ಲಿ ಎಸ್ಎಂ ಕೃಷ್ಣ ಅವರ ಅಂತ್ಯಕ್ರಿಯೆ
ಸೋಮನಹಳ್ಳಿಯಲ್ಲಿ ಅಂತಿಮ ಸಂಸ್ಕಾರದ ವ್ಯವಸ್ಥೆ ಪರಿಶೀಲಿಸಿ ಎಸ್ಎಂ ಕೃಷ್ಣ ಅವರ ಅಂತ್ಯಕ್ರಿಯೆ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಿದರು
ಬೆಂಗಳೂರು (Bengaluru): ಎಸ್ಎಂ ಕೃಷ್ಣ (SM Krishna) ಅವರ ಪಾರ್ಥೀವ ಶರೀರವನ್ನು ಅವರ ಹುಟ್ಟೂರಾದ ಮಂಡ್ಯ (Mandya) ಜಿಲ್ಲೆಯ ಸೋಮನಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಗೆ ರಾಜ್ಯಾಲಂಕಾರದೊಂದಿಗೆ ನೆರವೇರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು.
ಸೋಮನಹಳ್ಳಿಯಲ್ಲಿ ಅಂತಿಮ ಸಂಸ್ಕಾರದ ವ್ಯವಸ್ಥೆ ಪರಿಶೀಲಿಸಿ ಮಾತನಾಡಿದರು. ಬುಧವಾರ 8 ಗಂಟೆಯ ನಂತರ ವಿಶೇಷ ವಾಹನದಲ್ಲಿ ಸೋಮನಹಳ್ಳಿಗೆ ಕರೆದುಕೊಂಡು ಹೋಗಿ, ಮಾರ್ಗಮಧ್ಯೆ ಕೆಂಗೇರಿ, ಬಿಡದಿ, ರಾಮನಗರ, ಚೆನ್ನಪಟ್ಟಣದಲ್ಲಿ ತಲಾ ಐದು ನಿಮಿಷ ನಿಲುಗಡೆ ಮಾಡಲಾಗುವುದು ಎಂದರು.
ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದರು. ಸಚಿವರು ಭಾಗವಹಿಸಲಿದ್ದು, ಬುಧವಾರ ರಾಜ್ಯಾದ್ಯಂತ ರಜೆ (Holiday) ಇರುತ್ತದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
SM Krishna’s Final Rites to Be Held in Mandya’s Somanahalli with State Honors