ಇನ್ಮುಂದೆ ಫ್ರೀ ಬಸ್ ಪ್ರಯಾಣಕ್ಕೆ ಬೇಕು ಸ್ಮಾರ್ಟ್ ಕಾರ್ಡ್, ಶಕ್ತಿ ಯೋಜನೆ ಅಡಿ ಹೊಸ ನಿಯಮ

ಆಧಾರ್ ಕಾರ್ಡ್ ತೋರಿಸಿ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಪ್ರಯಾಣ ಮಾಡುವಾಗ ಬಸ್ ನಿರ್ವಾಹಕರಿಗೆ ಅವರು ಕರ್ನಾಟಕ ರಾಜ್ಯದವರ ಅಥವಾ ಬೇರೆಯವರ ಅನ್ನುವಂತಹ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ.

  • ಫ್ರೀ ಬಸ್ ಪ್ರಯಾಣಕ್ಕೆ ಶಕ್ತಿ ಯೋಜನೆ ಅಡಿ ಹೊಸ ನಿಯಮ ಪರಿಚಯ.
  • ಆಧಾರ್ ಕಾರ್ಡ್ ಬದಲಿಗೆ ಸ್ಮಾರ್ಟ್ ಕಾರ್ಡ್ ಜಾರಿಗೆ ತರುವ ಯೋಜನೆ.
  • ಕೆ ಎಸ್ ಆರ್ ಟಿ ಸಿ ನಿಗಮಗಳಲ್ಲಿ ಬಸ್ ನಿರ್ವಾಹಕರಿಗೆ ಸಮಸ್ಯೆ ಆಗದಂತೆ ಹೊಸ ಪರಿಹಾರ.

ಬೆಂಗಳೂರು (Bengaluru): ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತಹ 5 ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಇಡುವಂತಹ ಯೋಜನೆ ಆಗಿರುವಂತಹ ಶಕ್ತಿ ಯೋಜನೆ (Shakti Scheme) ಕೂಡ ಒಂದು ಪ್ರಮುಖವಾಗಿದೆ.

ಆಧಾರ್ ಕಾರ್ಡ್ ತೋರಿಸಿ ಕೂಡ ಈ ಬಸ್ ಪ್ರಯಾಣವನ್ನು ಮಾಡಬಹುದಾಗಿದ್ದ ನಿಯಮವನ್ನು ಈಗ ಸ್ಮಾರ್ಟ್ ಕಾರ್ಡ್ ಗೆ ಪರಿವರ್ತನೆ ಮಾಡುವಂತಹ ನಿರ್ಧಾರವನ್ನ ಸರ್ಕಾರ ಕೈ ತೆಗೆದುಕೊಳ್ಳುವುದಕ್ಕೆ ಹೊರಟಿದೆ.

ಹೊಸ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್

ಆಧಾರ್ ಕಾರ್ಡ್ ತೋರಿಸಿ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಪ್ರಯಾಣ ಮಾಡುವಾಗ ಬಸ್ ನಿರ್ವಾಹಕರಿಗೆ ಅವರು ಕರ್ನಾಟಕ ರಾಜ್ಯದವರ ಅಥವಾ ಬೇರೆಯವರ ಅನ್ನುವಂತಹ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ.

ಸ್ಮಾರ್ಟ್ ಕಾರ್ಡ್, ಶಕ್ತಿ ಯೋಜನೆ

ಬೇರೆ ರಾಜ್ಯದ ಮಹಿಳೆಯರು ಕೂಡ ತಮ್ಮ ಆಧಾರ್ ಕಾರ್ಡ್ ತೋರಿಸುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ಉಚಿತ ಬಸ್ ಪ್ರಯಾಣ ಯೋಜನೆಯ ಪಡೆದುಕೊಳ್ಳುತ್ತಿರುವುದನ್ನು ಕಡಿವಾಣ ಹಾಕುವುದಕ್ಕಾಗಿಯೇ ಸ್ಮಾರ್ಟ್ ಕಾರ್ಡ್ ಅನ್ನು ಕರ್ನಾಟಕದ ಮಹಿಳೆಯರಿಗೆ ನೀಡುವಂತಹ ನಿಯಮವನ್ನು ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ.

ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳೋದಕ್ಕೆ ಏನೆಲ್ಲ ಬೇಕಾಗುತ್ತೆ?

ಅಧಿಕೃತವಾಗಿ ಸ್ಮಾರ್ಟ್ ಕಾರ್ಡ್ ಮಾಡುವಂತಹ ಯೋಜನೆಯನ್ನು ಜಾರಿಗೆ ತಂದಿಲ್ಲ ಆದರೆ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳುವಾಗ ಆಧಾರ್ ಕಾರ್ಡ್ ಅಥವಾ ನಿಮ್ಮ ಅಧಿಕೃತ ಗುರುತಿನ ಚೀಟಿಯನ್ನು ಹಾಗೂ ಅದರ ಜೊತೆಗೆ ಬೇಕಾಗಿರುವಂತಹ ದಾಖಲೆಗಳನ್ನು ನೀವು ಒದಗಿಸಬೇಕಾಗಿ ಬರುತ್ತದೆ.

ಈ ಸಂದರ್ಭದಲ್ಲಿ ಸ್ಮಾರ್ಟ್ ಕಾರ್ಡ್ ಇದ್ದರೆ ಬಸ್ ನಿರ್ವಾಹಕರಿಗೆ ಟಿಕೆಟ್ ಅನ್ನು ನೀಡುವುದರಲ್ಲಿ ಯಾವುದೇ ರೀತಿಯ ತೊಂದರೆಗಳು ಕಂಡುಬರುವುದಿಲ್ಲ ಹಾಗೂ ಯಾವುದೇ ವಿಳಂಬ ಕೂಡ ನಡೆಯೋದಿಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ ಈ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುವುದಕ್ಕೆ ಬಸ್ ನಿರ್ವಾಹಕರಿಗೆ ಇದು ಸಾಕಷ್ಟು ಸುಲಭದಾಯಕವಾಗಿರಲಿದೆ.

ಸಾರಿಗೆ ಸಚಿವರಾಗಿರುವಂತಹ ರಾಮಲಿಂಗ ರೆಡ್ಡಿ ಅವರು ಕೂಡ ಶಕ್ತಿ ಯೋಜನೆಗೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ ಎಂಬುದಾಗಿ ಹೇಳಿದ್ದಾರೆ. ಇದರ ಜೊತೆಗೆ ಸ್ಮಾರ್ಟ್ ಕಾರ್ಡ್ ವಿತರಣೆಯನ್ನು ಮಾಡುವುದರ ಮೂಲಕ ಗುರುತಿನ ಪತ್ರದ ಸಮಸ್ಯೆಗಳು ಈ ಸಂದರ್ಭದಲ್ಲಿ ಕಂಡುಬರುವುದಿಲ್ಲ ಎನ್ನುವಂತಹ ಮಾತನ್ನು ಕೂಡ ಹೇಳಿದ್ದು ಅತಿ ಶೀಘ್ರದಲ್ಲಿ ರಾಜ್ಯ ಸರ್ಕಾರ ಸ್ಮಾರ್ಟ್ ಕಾರ್ಡ್ಗಳನ್ನು ಕರ್ನಾಟಕ ರಾಜ್ಯದ ಮಹಿಳೆಯರಿಗೆ ನೀಡುವಂತಹ ಯೋಜನೆಯನ್ನು ಜಾರಿಗೆ ತರುವುದಕ್ಕೆ ಸಿದ್ದರಾಗಿದ್ದಾರೆ ಎಂಬುದು ತಿಳಿದು ಬಂದಿದೆ.

Smart Card Required for Free Bus Travel, New Rule Under Shakti Scheme

Related Stories