ಬಿಪಿಎಲ್ ರೇಶನ್ ಕಾರ್ಡ್ ಗಳನ್ನು (Ration Card) ಬಡತನದ ರೇಖೆಗಿಂತ ಕೆಳಗಿರುವ ಬಡವರಿಗೆ ಕೊಡಲಾಗುತ್ತದೆ. ಈ ಒಂದು ಬಿಪಿಎಲ್ ಕಾರ್ಡ್ (BPL Card) ಇಂದ ಅವರಿಗೆ ಉಚಿತ ಆಹಾರ ಧಾನ್ಯಗಳು, ಸರ್ಕಾರದ ಯೋಜನೆಗಳು, ಉಚಿತ ಆರೋಗ್ಯ ಸೇವೆ ಹಾಗೂ ಇನ್ನಿತರ ಲಾಭ ಸಿಗುತ್ತದೆ. ಹಾಗಾಗಿ ಜನರು ಬಿಪಿಎಲ್ ಕಾರ್ಡ್ ಪಡೆಯುವುದಕ್ಕೆ ಮುಂದಾಗುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಬಹಳಷ್ಟು ಅನರ್ಹರ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದ್ದು, ಅವುಗಳನ್ನು ಕ್ಯಾನ್ಸಲ್ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಹೌದು, ಪ್ರಸ್ತುತ ನಮ್ಮ ರಾಜ್ಯದ ಜನಸಂಖ್ಯೆಯಲ್ಲಿ 80% ನಷ್ಟು ಜನರ ಬಳಿ ಬಿಪಿಎಲ್ ಕಾರ್ಡ್ ಇದೆ. ನಂಬುವುದಕ್ಕೆ ಇದು ಅಸಾಧ್ಯ ಅನ್ನಿಸಿದರು ಕೂಡ ಇದೇ ಸತ್ಯ. ಸುಮಾರು 1.27 ಕೋಟಿ ಕುಟುಂಬಗಳ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದೆ.
ಅವುಗಳ ಸೌಲಭ್ಯಗಳನ್ನು 4 ಕೋಟಿಗಿಂತ ಹೆಚ್ಚು ಕುಟುಂಬಗಳು ಪಡೆಯುತ್ತಿದೆ. ಆದರೆ ಇಲ್ಲಿ ಅರ್ಹತೆ ಇಲ್ಲದಿರುವ ಕುಟುಂಬಗಳ ಬಳಿ ಕೂಡ ಬಿಪಿಎಲ್ ರೇಷನ್ ಕಾರ್ಡ್ ಇದ್ದು, ಅಂಥ ಕುಟುಂಬಗಳನ್ನು ಪತ್ತೆ ಹಚ್ಚಿ, ಅವರ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಬೇಕು ಎಂದು ತಿಳಿಸಲಾಗಿದೆ.
ಕಳೆದ ತಿಂಗಳು ವಿಧಾನಸಭೆಯಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಸೂಚನೆ ನೀಡಿದ್ದಾರೆ, ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಪರಿಶೀಲನೆ ನಡೆಸಬೇಕು, ಯಾವೆಲ್ಲಾ ಕುಟುಂಗಳು ಕಳೆದ 6 ತಿಂಗಳಿನಿಂದ ರೇಷನ್ ಪಡೆದಿಲ್ಲವೋ, ಅಂಥವರ ರೇಷನ್ ಕಾರ್ಡ್ ಬಂದ್ ಮಾಡಬೇಕು, ಇದಕ್ಕಾಗಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಹಾಗೆಯೇ ಸುಳ್ಳು ದಾಖಲೆ ನೀಡಿದವರ ರೇಷನ್ ಕಾರ್ಡ್ ಗಳು ಕೂಡ ಬಂದ್ ಆಗಲಿದೆ.
ಅಷ್ಟೇ ಅಲ್ಲದೇ, ಹೊಸದಾಗಿ ರೇಷನ್ ಕಾರ್ಡ್ ಪಡೆಯುವುದಕ್ಕೆ ಈಗಾಗಲೇ ಸುಮಾರು 2.95 ಲಕ್ಷ ಜನರು ಅರ್ಜಿ ಸಲ್ಲಿಸಿದ್ದು, ಅವರುಗಳಿಗೆ ಇನ್ನು ಕೂಡ ರೇಷನ್ ಕಾರ್ಡ್ ಸಿಕ್ಕಿಲ್ಲ, ಮೊದಲಿಗೆ ಅನರ್ಹರನ್ನು ಗುರುತಿಸಿ, ಅವರ ರೇಷನ್ ಕಾರ್ಡ್ ಅನ್ನು ಬಂದ್ ಮಾಡಲಾಗುತ್ತದೆ. ಪ್ರಸ್ತುತ ಸರ್ಕಾರವು ಸುಮಾರು 20 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಿಸಲು ಮುಂದಾಗಿದ್ದು, ಕ್ಯಾನ್ಸಲ್ ಆಗಿರುವ ರೇಷನ್ ಕಾರ್ಡ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಈ ರೀತಿ ಚೆಕ್ ಮಾಡಿ..
ಅನರ್ಹರ ಲಿಸ್ಟ್ ನಲ್ಲಿ ಹೆಸರು ಚೆಕ್ ಮಾಡುವುದು ಈ ರೀತಿ:
*ಮೊದಲಿಗೆ ನೀವು ಈ ಲಿಂಕ್ ಗೆ ಭೇಟಿ ನೀಡಿ, https://ahara.kar.nic.in/Home/EServices
*ಹೋಮ್ ಪೇಜ್ ನಲ್ಲಿ e Ration Card ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ
*ಇಲ್ಲಿ Show Cancelled/Suspended List ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
*ಈಗ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು, ವರ್ಷ ಇದೆಲ್ಲದರ ಮಾಹಿತಿಯನ್ನು ಸೆಲೆಕ್ಟ್ ಮಾಡಿ.
*ಈಗ ಅನರ್ಹರ ಲಿಸ್ಟ್ ಬರುತ್ತದೆ, ಇಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ.
*ಒಂದು ವೇಳೆ ಹೆಸರು ಇದ್ದರೆ, ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆಯ ಹಣ ಕೂಡ ಸಿಗುವುದಿಲ್ಲ..
State government to cancel 20 lakh BPL card
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.