ಸ್ಟಿಂಗ್ ಆಪರೇಷನ್ ವಿಡಿಯೋ ಅಪ್ಲೋಡ್ಗೆಂದೇ ಕ್ರಿಯೇಟ್ ಆಗಿತ್ತು ಯೂಟ್ಯೂಬ್ ಚಾನೆಲ್! ಪೊಲೀಸರ ತನಿಖೆ ಚುರುಕು
ರಾಜ್ಯ ರಾಜಕಾರಣದಲ್ಲಿ ವಿವಾದ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ವಿಡಿಯೋಗಳಿಗಾಗಿ ತೆರೆಯಲಾಗಿದ್ದ ಚಾನೆಲ್ನ 54 ಸಬ್ಸ್ಕ್ರೈಬರ್ಗಳ ಹಿನ್ನೆಲೆ ಪರಿಶೀಲಿಸಲು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರು (Bengaluru): ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ (Sting Operation) ಪ್ರಕರಣದ ತನಿಖೆಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು (Bengaluru Cyber Crime Police) ತೀವ್ರಗೊಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋಗಳನ್ನು (Videos) ಅಪ್ಲೋಡ್ ಮಾಡುವುದಕ್ಕಾಗಿಯೇ ‘ಕರ್ನಾಟಕ ಹನಿಟ್ರ್ಯಾಪ್’ ಹೆಸರಿನ ಯೂಟ್ಯೂಬ್ ಚಾನೆಲ್ (Karnataka Honeytrap YouTube Channel) ತೆರೆಯಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ: ಕರ್ನಾಟಕದ 20ನೇ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣ ವಚನ ಸ್ವೀಕಾರ
ಚಾನೆಲ್ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ 54 ಜನರು ಸಬ್ಸ್ಕ್ರೈಬ್ ಆಗಿದ್ದು, ಅದರಲ್ಲಿ ನಾಲ್ಕು ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಸಬ್ಸ್ಕ್ರೈಬರ್ಗಳ ವಿವರಗಳನ್ನು ಸಂಗ್ರಹಿಸಿರುವ ಪೊಲೀಸರು, ಅವರ ಹಿನ್ನೆಲೆ ಮತ್ತು ಪ್ರಕರಣದೊಂದಿಗಿನ ಸಂಪರ್ಕದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರನ್ನು ವಿಚಾರಣೆ ನಡೆಸಲಾಗಿದೆ. ಇದೀಗ ಚಾನೆಲ್ಗೆ ಸಬ್ಸ್ಕ್ರೈಬ್ ಆದವರಲ್ಲಿ ಯಾರಾದರೂ ವಿಡಿಯೋಗಳನ್ನು ವೀಕ್ಷಿಸಲು ಅಥವಾ ಚಾನೆಲ್ಗೆ ಸೇರ್ಪಡೆಯಾಗಲು ಸೂಚನೆ ಪಡೆದಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅಗತ್ಯವಿದ್ದರೆ ಕೆಲವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಬೆಂಗಳೂರು ಮಂದಿಗೆ ಗುಡ್ ನ್ಯೂಸ್: ಮನೆ ಮುಂದೆ ವಾಹನ ಪಾರ್ಕಿಂಗ್ ಶುಲ್ಕ ವಸೂಲಿ ಪ್ರಸ್ತಾವನೆಗೆ ತಡೆ
ಅಕ್ಟೋಬರ್ 6ರಂದು ಪ್ರಕರಣ ದಾಖಲಾಗಿದ್ದರೂ, ವಿಡಿಯೋಗಳನ್ನು ಅಪ್ಲೋಡ್ ಮಾಡಿದವರು ಯಾರು, ಚಾನೆಲ್ ಆರಂಭಿಸಿದವರು ಯಾರು ಮತ್ತು ಇದರ ಹಿಂದೆ ಯಾರಾದರೂ ಯೋಜನೆ ರೂಪಿಸಿದ್ದರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣದ ಪ್ರಮುಖ ಸೂತ್ರಧಾರನನ್ನು ಪತ್ತೆಹಚ್ಚಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



