ಗೃಹಜ್ಯೋತಿ ಯೋಜನೆ ಇದ್ರೂ ಇನ್ಮುಂದೆ ಕರೆಂಟ್ ಬಿಲ್ ಬರುತ್ತೆ! ಇಲ್ಲಿದೆ ಕಾರಣ, ಸರ್ಕಾರದಿಂದ ಬಿಗ್ ಅಪ್ಡೇಟ್
ಗೃಹಜ್ಯೋತಿ ಯೋಜನೆ ಶುರುವಾಗಿ 1 ವರ್ಷವಾದ ಬೆನ್ನಲ್ಲೇ ಇದೀಗ ಗೃಹಜ್ಯೋತಿ ಫಲಾನುಭವಿಗಳಿಗೆ ಒಂದು ಬಿಗ್ ಶಾಕ್ ಸಿಕ್ಕಿದ್ದು, ದಿಢೀರ್ ಎಂದು ಗೃಹಜ್ಯೋತಿ ಯೋಜನೆಯ ಬಿಲ್ ಬರುವುದಕ್ಕೆ ಶುರುವಾಗಿದೆ
ರಾಜ್ಯ ಸರ್ಕಾರವು ಜನರಿಗೆ ಉಚಿತ ವಿದ್ಯುತ್ (Free Electricity) ಸೌಲಭ್ಯ ನೀಡುವ ಸಲುವಾಗಿ ಜಾರಿಗೆ ತಂದ ಯೋಜನೆ ಗೃಹಜ್ಯೋತಿ ಯೋಜನೆ ಆಗಿದೆ. ಈ ಒಂದು ಯೋಜನೆಯ ಅಡಿಯಲ್ಲಿ ಜನರು ಪ್ರತಿ ತಿಂಗಳು ಎಷ್ಟು ವಿದ್ಯುತ್ ಬಳಕೆ ಮಾಡಿದ್ದಾರೆ ಎನ್ನುವುದನ್ನು ಒಂದು ವರ್ಷಗಳ ಕಾಲಕ್ಕೆ ಲೆಕ್ಕ ಹಾಕಿ, ಅದರ ಸರಾಸರಿ ಪಡೆದು, ಅಷ್ಟು ವಿದ್ಯುತ್ ಬಳಕೆ ಮಾಡಬಹುದು, ಅದಕ್ಕೆ ಹೆಚ್ಚುವರಿಯಾಗಿ 10% ವಿದ್ಯುತ್ ಬಳಕೆ ಮಾಡಬಹುದು ಎನ್ನುವ ನಿಯಮವನ್ನು ಸರ್ಕಾರ ಜಾರಿಗೆ ತಂದಿತು. ಇದರಲ್ಲಿ ಗರಿಷ್ಟ 200 ಯೂನಿಟ್ ವರೆಗು ಉಚಿತ ವಿದ್ಯುತ್ ಜನರಿಗೆ ಸಿಗುತ್ತಿದೆ.
ಜನರು ಈ ಯೋಜನೆಯ ಸೌಲಭ್ಯ ಪಡೆದು, ಉಚಿತ ವಿದ್ಯುತ್ (Free Electricity) ಬಳಕೆ ಮಾಡುತ್ತಿದ್ದಾರೆ. ಆದರೆ ಗೃಹಜ್ಯೋತಿ ಯೋಜನೆ ಶುರುವಾಗಿ 1 ವರ್ಷವಾದ ಬೆನ್ನಲ್ಲೇ ಇದೀಗ ಗೃಹಜ್ಯೋತಿ ಫಲಾನುಭವಿಗಳಿಗೆ ಒಂದು ಬಿಗ್ ಶಾಕ್ ಸಿಕ್ಕಿದ್ದು, ದಿಢೀರ್ ಎಂದು ಗೃಹಜ್ಯೋತಿ ಯೋಜನೆಯ (Gruha Jyothi Yojana) ಬಿಲ್ ಬರುವುದಕ್ಕೆ ಶುರುವಾಗಿದ್ದು, ಅದರಲ್ಲೂ ಹೆಚ್ಚಿನ ಮೊತ್ತ ಬಿಲ್ ರೂಪದಲ್ಲಿ ಬಂದಿದೆ, ಇದನ್ನು ಕಂಡು ಫಲಾನುಭವಿಗಳು ಶಾಕ್ ಆಗಿದ್ದಾರೆ, ತಮಗೆ ಇಷ್ಟು ವಿದ್ಯುತ್ ಬಿಲ್ ಬರುತ್ತಿರಲಿಲ್ಲ, ಸೊನ್ನೆ ಬಿಲ್ ಬರುತ್ತಿತ್ತು ಎಂದಿದ್ದಾರೆ.
ಹೌದು, ಹಲವು ಕುಟುಂಬಗಳಿಗೆ ಸೊನ್ನೆ ಬಿಲ್ ಬರುತ್ತಿದ್ದ ಹಾಗೆ 150 ರಿಂದ 200 ರೂಪಾಯಿ ವರೆಗು ಬಿಲ್ ಬರುವುದಕ್ಕೆ ಶುರುವಾಗಿದೆ. ಇನ್ನು ಕೆಲವರಿಗೆ ಕೇವಲ 3 ಜನ ಇರುವ ಮನೆಯಲ್ಲಿ 400 ವರೆಗು ಬಿಲ್ ಬಂದಿದ್ದು, ಹೆವಿ ಲೋಡ್ ಆಗಿ, ಚಾರ್ಜಸ್ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ತಿಂಗಳು ಸೊನ್ನೆ ಬಿಲ್ ಬಂದಿದ್ದು, ಈಗ 400 ರೂಪಾಯಿ ಬಿಲ್ ಬಂದಿದೆ ಎಂದು ಕಂಪ್ಲೇಂಟ್ ಕೊಡುವುದಕ್ಕೆ ಬೆಸ್ಕಾಂ ಗೆ ಕರೆ ಮಾಡಿದರೆ ಯಾರು ಸರಿಯಾಗಿ ಉತ್ತರ ಕೊಡುವುದಿಲ್ಲ ಎಂದು ಶ್ರೀನಿವಾಸ್ ಎನ್ನುವ ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಈ ರೀತಿ ಶುಲ್ಕ ಯಾಕೆ ಬರುತ್ತಿದೆ ಎಂದು ಪರಿಶೀಲಿಸಿದರೆ, ಕರೆಂಟ್ ಬಿಲ್ ನಲ್ಲಿಯೇ ಸಾಕಷ್ಟು ಗೊಂದಲ, ತೊಂದರೆ ಇರುವುದು ಗೊತ್ತಾಗುತ್ತಿದೆ. ಒಟ್ಟಿನಲ್ಲಿ ಸರ್ಕಾರ ಈಗ ಸೊನ್ನೆ ಬಿಲ್ ಬರುತ್ತಿದ್ದವರಿಗೂ ಹೆವಿಲೋಡ್ ಎಂದು ಹೇಳಿ, ಸಿಕ್ಕಾಪಟ್ಟೆ ಶುಲ್ಕ ವಿಧಿಸುತ್ತಿದೆ. ಇದರಿಂದ ಜನರು ಇದ್ದಕ್ಕಿದ್ದಂತೆ ಬಂದ ಕರೆಂಟ್ ಬಿಲ್ ನೋಡಿ ಕಂಗಾಲಾಗಿದ್ದಾರೆ. ಒಟ್ಟಿನಲ್ಲಿ ಮೊದಲಿಗೆ ಫ್ರೀ ಕರೆಂಟ್ ಎಂದು ಹೇಳಿ, ನಂತರ ಅದಕ್ಕೊಂದು ಸರಾಸರಿ ಯೂನಿಟ್ ಎಂದು ರೂಲ್ಸ್ ತಂದು, ಈಗ ಈ ರೀತಿ ಮಾಡುವುದು ಸರಿಯಲ್ಲ ಎನ್ನುತ್ತಿದ್ದಾರೆ ಜನರು.
ಇತ್ತ ರಾಜ್ಯ ಸರ್ಕಾರ ಮತ್ತೊಂದು ವಿಚಾರವನ್ನು ಕೂಡ ತಂದಿತ್ತು, ಯಾರೆಲ್ಲಾ ಸರಾಸರಿ ವಿದ್ಯುತ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುತ್ತಿದ್ದಾರೋ, ಅವರಿಗೆಲ್ಲಾ ಭದ್ರತಾ ಠೇವಣಿ ಇಡಬೇಕು ಎನ್ನುವ ನಿಯಮವನ್ನು ಕೂಡ ಜಾರಿಗೆ ತರಲಾಗಿತ್ತು, ಆದರೆ ಒಂದು ಮನೆಯಲ್ಲಿ ಎಷ್ಟು ಕೆವಿ ವಿದ್ಯುತ್ ಅನ್ನು ಸಾಮಾನ್ಯವಾಗಿ ಬಳಸಿರುತ್ತಾರೆ, ಅದಕ್ಕಿಂತ ಹೆಚ್ಚುವರಿ ವಿದ್ಯುತ್ ಬಳಕೆ ಮಾಡಿದವರಿಗೆ ಈ ರೀತಿ ಹೆಚ್ಚುವರಿ ಹೆವಿ ಲೋಡ್ ವಿಧಿಸಲಾಗುತ್ತಿದೆ. 3ಕೆವಿ ವಿದ್ಯುತ್ ಬಳಕೆ ಮಾಡುತ್ತಿರುವರಿಗೆ, 19 ಯೂನಿಟ್ ಬಳಕೆ ಮಾಡಿದ್ದರೂ ಸಹ, ಹೆವಿಲೋಡ್ ಎಂದು ದಂಡ ಹಾಕಲಾಗಿದ್ದು, ಇದರಿಂದ ಜನರಿಗೆ ಅಸಮಾಧಾನ ಶುರುವಾಗಿದೆ.
sudden rise in electricity prices even Gruha Jyothi Yojana